ಬ್ರಹ್ಮಚೈತನ್ಯ ಗೊಂದಾವಲೆಕರ ಮಹಾರಾಜರ ಜಯಂತಿ (೨ ಫೆಬ್ರವರಿ, ಮಾಘ ಶುಕ್ಲ ದ್ವಾದಶಿ) ನಿಮಿತ್ತ …
೧. ‘ಪುಸ್ತಕಗಳನ್ನು ಓದಿ ಅಥವಾ ಕೇವಲ ಬುದ್ಧಿಯಿಂದ ಜಗತ್ತು ಅಶಾಶ್ವತ ಎಂಬುದು ಎಂದಿಗೂ ತಿಳಿಯಲಾರದು. ಭಗವಂತನ ಮೇಲೆ ಪ್ರೀತಿ ಹೆಚ್ಚಾದಾಗ, ಅದು ತಾನಾಗಿಯೇ ತಿಳಿಯುತ್ತದೆ.
೨. ಭಗವಂತನು ಭಕ್ತರ ಸಂಕಟಗಳನ್ನು ದೂರ ಮಾಡುತ್ತಾನೆ, ಅಂದರೆ ‘ಅವರ ಪ್ರಾಪಂಚಿಕ ಸಂಕಟಗಳನ್ನು ದೂರಗೊಳಿಸುತ್ತಾನೆ’, ಎಂದಲ್ಲ. ಆ ಸಂಕಟಗಳನ್ನು ಅವನು (ಭಗವಂತನು) ಸಹಜವಾಗಿ ದೂರ ಮಾಡಬಲ್ಲನು; ಆದರೆ ಆ ಭಕ್ತನಿಗೆ ಸಮಾಧಾನವಾಗಿರುವಂತೆ ಮಾಡಿ ಸಂಕಟಗಳನ್ನು ಸಹಿಸುವ ಶಕ್ತಿಯನ್ನು ಕೊಡುತ್ತಾನೆ. ಭಗವಂತನು ಭಕ್ತನಿಗೆ ಯಾವಾಗಲೂ ಈಶ್ವರನ ಸ್ಮರಣೆಯಲ್ಲಿಡುತ್ತಾನೆ. ಇಂತಹ ಭಕ್ತರೇ ಮುಂದೆ ಸಂತಪದವಿಗೆ ತಲುಪುತ್ತಾರೆ.
೩. ಸಂನ್ಯಾಸಿಯು ಭಗವಂತನ ಸ್ಮರಣೆಯಲ್ಲಿ ಜೀವನವನ್ನು ನಡೆಸಲು ಮನೆಮಠದ ತ್ಯಾಗವನ್ನು ಮಾಡಿ ಈಶ್ವರನ ಸ್ಮರಣೆಯಲ್ಲಿರುತ್ತಾನೆ.
೪. ನಮ್ಮ ಪ್ರತಿಯೊಂದು ಹಬ್ಬವು ನಮಗೆ ಭಗವಂತನನ್ನು ಸ್ಮರಿಸುವುದಕ್ಕಾಗಿಯೇ ಮಾಡಿಡಲಾಗಿದೆ.
೫. ನಾವು ಮನಸ್ಸಿನಲ್ಲಿ ಯಾರ ವಿಷಯದಲ್ಲಿಯೂ ಕೆಡುಕನ್ನು ಬಯಸಬಾರದು. ಅದರಿಂದ ನಮ್ಮ ಮನಸ್ಸೇ ಕಲುಷಿತವಾಗುತ್ತದೆ.
೬. ‘ಏನು ಮಾಡಬೇಕು ?’, ಎಂಬುದು ಮನುಷ್ಯನಿಗೆ ತಿಳಿಯುತ್ತದೆ; ಆದರೆ ಅವನಿಗೆ ತನ್ನ ಮನಸ್ಸನ್ನು ನಿಯಂತ್ರಿಸಲು ಆಗುವುದಿಲ್ಲ, ಅಂದರೆ ‘ತಿಳಿಯುತ್ತದೆ; ಆದರೆ ಹೊರಳುವುದಿಲ್ಲ’ ಹೀಗೆ ಅವನ ಸ್ಥಿತಿಯಾಗಿರುತ್ತದೆ.’
(ಸೌಜನ್ಯ : ‘ಹರಿ-ವಿಜಯ’, ದೀಪೋತ್ಸವ ೨೦೦೭)