ಗುರುದ್ವಾರದ ಮೇಲೆ ನಡೆದ ದಾಳಿಯ ಕುರಿತು ಸಿಖ್ಕರಿಂದ ತನಿಖೆಗೆ ಆಗ್ರಹ !

ಅಮೇರಿಕಾದ ಉತ್ತರ ಕೆರೊಲಿನಾದ ಒಂದೇ ಗುರುದ್ವಾರದಲ್ಲಿ ಪದೇ ಪದೇ ಆಗುತ್ತಿದ್ದ ದಾಳಿಯ ಪ್ರಕರಣ

ಉತ್ತರ ಕೆರೊಲಿನಾ (ಅಮೇರಿಕಾ) – ಇಲ್ಲಿ ಒಂದೇ ಗುರುದ್ವಾರದ ಮೇಲೆ ಪದೇ ಪದೇ ಆಗುತ್ತಿರುವ ದಾಳಿಯಿಂದಾಗಿ ಸಿಖ್ ಸಮುದಾಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಈ ದಾಳಿಯ ಕುರಿತು ಆಳವಾದ ತನಿಖೆ ನಡೆಸುವಂತೆ ಸಿಖ್ಕರು ಆಗ್ರಹಿಸಿದ್ದಾರೆ.

ಸಿಖ್ ವ್ಯಕ್ತಿ ಅಜಯ ಸಿಂಹ ಇವರು ‘ದಿ ಶಾರ್ಲೋಟ್ ಆಬ್ಜರ್ವರ್’ ಹೆಸರಿನ ಸ್ಥಳೀಯ ದಿನ ಪತ್ರಿಕೆಗೆ, ಕಳೆದ ವರ್ಷ ಇದೇ ಗುರುದ್ವಾರದ ಸಾಹಿಬ ಖಾಲ್ಸಾ ದರಬಾರದ ಪರಿಸರದಲ್ಲಿ ಕಸ ಚೆಲ್ಲಿದ್ದರು. ತದನಂತರ ನಡೆದ ದಾಳಿಯಲ್ಲಿ ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಲಾಗಿತ್ತು. ನಂತರ ಜನೇವರಿ 3, 2023 ರಂದು ಇದೇ ಗುರುದ್ವಾರದ ಪೂಜಾಗೃಹದ ಹತ್ತಿರದ ಒಂದು ಕಿಟಕಿಯನ್ನು ಧ್ವಂಸಗೊಳಿಸಿದರು. ಮುಂದೆ ಎರಡೇ ದಿನಗಳ ಬಳಿಕ ಪುನಃ ಇನ್ನೊಂದು ಕಿಟಕಿಯನ್ನು ಧ್ವಂಸಗೊಳಿಸಿದರು. ಈ ಪ್ರಕರಣದಲ್ಲಿ ಆಯಾ ಸಮಯದಲ್ಲಿ ಪೊಲೀಸರಲ್ಲಿ ದೂರನ್ನು ಕೂಡ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.