‘ಲವ್‌ ಜಿಹಾದ್‌’ನ ವಾಸ್ತವ : ಪ್ರೇಮದ ಆಮಿಷದಿಂದ ಶ್ರದ್ಧಾಳನ್ನು ತುಂಡರಿಸುವವರೆಗೆ

ಸಾಪ್ತಾಹಿಕದ ೨೪/೪೮ ನೇ ಸಂಚಿಕೆಯಲ್ಲಿ ‘ಜಿಹಾದ್‌’ನಿಂದ ಲವ್‌ ಜಿಹಾದ್‌ ಮತ್ತು ಅದಕ್ಕಾಗಿ ಮಾಡುವ ಒಳಸಂಚುಗಳು, ‘ನನ್ನ ಅಬ್ದುಲ್‌ ಹಾಗಿಲ್ಲ’, ಎಂಬ ಹಿಂದೂ ಯುವತಿಯರ ಅಪಾಯಕಾರಿ ಮಾನಸಿಕತೆ ಮತ್ತು ಹಿಂದೂ ಯುವತಿಯರ ಮೇಲೆ ಹಿಂದಿ ಚಲನಚಿತ್ರೋದ್ಯಮದ ಪ್ರಭಾವ’, ಈ ಅಂಶಗಳನ್ನು ಓದಿದೆವು. ಇಂದು ಆ ಲೇಖನದ ಮುಂದಿನ ಭಾಗವನ್ನು ನೀಡುತ್ತಿದ್ದೇವೆ.  

(ಭಾಗ ೨)

ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/79141.html
ಶ್ರೀ. ರಮೇಶ ಶಿಂದೆ

೬. ವಿದೇಶಗಳಲ್ಲಿಯೂ ಲವ್‌ ಜಿಹಾದ್‌ !

ಅ. ‘ಸಿಕ್ಖ್ ಲಿಬರಲ್‌ ಪಾಲಿಟಿಕ್ಸ್ ಬ್ಲಾಗರ್’ (ಸಿಕ್ಖ್ ಉದಾರವಾದಿ ರಾಜಕಾರಣದ ಬಗೆಗಿನ ಜಾಲತಾಣದಲ್ಲಿ ಲೇಖನಗಳನ್ನು ಬರೆಯುವವರು) ಸನಿ ಹುಂದಲ್‌ ಇವರು ಮುಂದಿನಂತೆ ಹೇಳಿದ್ದಾರೆ, ”೯೦ ನೇಯ ದಶಕದಲ್ಲಿ ಒಂದು ಗುಪ್ತ ಕರಪತ್ರ(ಹಿಜ್ಬ್ ಉತ-ತಹರೀರ್‌ ಅನುಯಾಯಿಗಳಿಂದ)ದಲ್ಲಿ ಸಿಕ್ಖ್ ಹುಡುಗಿಯರನ್ನು ಇಸ್ಲಾಮ್‌ಗೆ ಮತಾಂತರಿಸಲು ಪ್ರೇರೇಪಿಸಬೇಕು’ ಎಂದು ಮುಸಲ್ಮಾನ ಪುರುಷರಿಗೆ ಹೇಳಲಾಗಿತ್ತು. ೨೦೧೪ ರಲ್ಲಿ ಇಂಗ್ಲೆಂಡ್‌ನಲ್ಲಿ ಸಿಕ್ಖ್‌ರ ಅಕಾಲ ತಖ್ತ್‌ವು ‘ಲವ್‌ ಜಿಹಾದ್‌’ಅನ್ನು ಗಂಭೀರವಾಗಿ ಪರಿಗಣಿಸಿತು. ಅಲ್ಲಿ ಈ ವಿಷಯವನ್ನು ‘ರೊಮಿಯೋ ಜಿಹಾದ್’ ಮತ್ತು ‘ಗ್ರುಮಿಂಗ್‌ ಜಿಹಾದ್’ ಹೆಸರುಗಳಿಂದ ಗುರುತಿಸಲಾಗುತ್ತದೆ. ಅಲ್ಲಿನ ಕೆಲವು ಮತಾಂಧರ ಸಮೂಹಗಳು ಅಥವಾ ಪಾಕಿಸ್ತಾನಿ ಮೂಲದ ಸುಂದರ ಮುಸಲ್ಮಾನ ಯುವಕರು ಕ್ರೈಸ್ತ, ಸಿಕ್ಖ್ ಮತ್ತು ಹಿಂದೂ ಹುಡುಗಿಯರ ಮೇಲೆ ಪ್ರಭಾವ ಬೀರಿ ತಮ್ಮ ಜಾಲದಲ್ಲಿ ಸಿಲುಕಿಸಲು, ಹಾಗೆಯೇ ಅವರನ್ನು ಇಸ್ಲಾಮ್‌ಗೆ ಮತಾಂತರಿಸಿ ಇಸ್ಲಾಮಿಕ್‌ ಸ್ಟೇಟ್‌ಗೆ ಕಳುಹಿಸಲು ಪ್ರಯತ್ನಿಸುತ್ತಿದ್ದರು. ಕೆಲವು ಹುಡುಗಿಯರನ್ನು ಮುಸಲ್ಮಾನರಾಗಿ ಮತಾಂತರಿಸಿ ಪಾಕಿಸ್ತಾನಕ್ಕೆ ಕರೆದೊಯ್ದು ಅಲ್ಲಿಯೇ ಬಿಡಲಾಗುತ್ತಿತ್ತು ಮತ್ತು ಅಲ್ಲಿ ಮನೆಯಲ್ಲಿ ಗುಲಾಮರಂತೆ ಇರಬೇಕಾಗುತ್ತಿತ್ತು.

ಆ. ಈ ಬಗ್ಗೆ ೨೦೦೯ ರಲ್ಲಿ ಲಂಡನ್‌ನ ಪೊಲೀಸ್‌ ಆಯುಕ್ತರಾದ ಸರ್‌ ಇಯಾನ್‌ ಬ್ಲೆಯರ್‌ ಇವರು ಹೇಳುತ್ತಾ, ‘ಅಪ್ರಾಪ್ತ ಹುಡುಗಿಯರನ್ನು ಇಸ್ಲಾಮ್‌ಗೆ ಮತಾಂತರಿಸಲು ಒತ್ತಾಯಿಸುವ ಮತಾಂಧರನ್ನು ಪೊಲೀಸರು ಗುರುತಿಸುತ್ತಿದ್ದಾರೆ. ಪೊಲೀಸರು ಇಂತಹ ಆಕ್ರಮಕ ಮತಾಂತರಕ್ಕೆ ಕಡಿವಾಣ ಹಾಕಲು ವಿಶ್ವವಿದ್ಯಾಲಯಗಳ ಜೊತೆ ಸೇರಿ ಕ್ರಮಕೈಗೊಳ್ಳುತ್ತಿದ್ದಾರೆ’ ಎಂದು ಬಹಿರಂಗಪಡಿಸಿದ್ದರು.

ಇ. ಕೆಲವು ಭಯೋತ್ಪಾದಕ ಇಸ್ಲಾಮಿ ಸಂಘಟನೆಗಳ ಯುವಕರು ಸಿಕ್ಖ್ ಮತ್ತು ಹಿಂದೂ ಯುವತಿಯರನ್ನು ಮತಾಂತರಿಸಲು ಒಳಸಂಚು ರೂಪಿಸುತ್ತಿದ್ದಾರೆ ಮತ್ತು ಮಾನಹಾನಿ ಮಾಡುವುದಾಗಿ ಬೆದರಿಸುತ್ತಾರೆ. ಅಲ್ಲದೇ ಅವರನ್ನು ಥಳಿಸುತ್ತಾರೆ. ಹಾಗಾಗಿ ಅಲ್ಲಿನ ಅನೇಕ ಯುವತಿಯರು ಶಿಕ್ಷಣವನ್ನು ತೊರೆಯಬೇಕಾಯಿತು. ಅವರು ಕ್ರೈಸ್ತ ಯುವತಿಯರನ್ನು ಮೋಸದಿಂದ ಮುಸಲ್ಮಾನ ಧರ್ಮಕ್ಕೆ ಮತಾಂತರಿಸುತ್ತಿದ್ದರು. ಅದಕ್ಕಾಗಿ ಯುವತಿಯರನ್ನು ಸೆಳೆಯಲು ಪ್ರೇಮದ ನಾಟಕವಾಡುವುದು, ‘ಬ್ಲ್ಯಾಕ್‌ ಮೇಲಿಂಗ್’ ಮಾಡುವುದು ಮತ್ತು ತಮ್ಮನ್ನು ಕ್ರೈಸ್ತರೆಂದು ಸುಳ್ಳು ಹೇಳಿ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳುವುದು, ಇಂತಹ ಅನೇಕ ಸಂಚನ್ನು ಮಾಡುತ್ತಿದ್ದರು. ಎಷ್ಟು ಗೌರವಾನ್ವಿತ ಕುಟುಂಬದ ಹುಡುಗಿಯರನ್ನು ಜಾಲದಲ್ಲಿ ಸಿಲುಕಿಸಲಾಗುತ್ತಿತ್ತೋ, ಅಷ್ಟೇ ಬಹುಮಾನವೆಂದು ಹೆಚ್ಚು ಮೊತ್ತವನ್ನು ಅವರಿಗೆ ನೀಡಲಾಗುತ್ತಿತ್ತು.

ಈ. ಮಿಸ್ರ ದೇಶದಲ್ಲಿ ಕ್ಯಾಪ್ಟಿಕ್‌ ಕ್ರೈಸ್ತರು (ಇಜಿಪ್ತ್‌ನಲ್ಲಿ ಕ್ರೈಸ್ತರ ಜಾತಿ) ವಿಶೇಷವಾಗಿ ಯುವ ಕ್ರೈಸ್ತ ಹುಡುಗಿಯರ ವಿರುದ್ಧ ದೌರ್ಜನ್ಯದ ಹೆಚ್ಚಳದ ಬಗ್ಗೆ ಚರ್ಚಿಸಲು ೨೨ ಜುಲೈ ೨೦೧೧ ರಂದು ‘ಅಮೇರಿಕಿ ಹೆಲಸಿಂಕಿ ಆಯೋಗ’ವನ್ನು ಸ್ಥಾಪಿಸಿದರು. ‘೨೦೦೯ ರಿಂದ ೨೦೧೧ ರ ವರೆಗೆ ಸುಮಾರು ೮೦೦ ಕ್ಯಾಪ್ಟಿಕ್‌ ಕ್ರೈಸ್ತ ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರ ಮಾಡಿ ಅವರನ್ನು ಇಸ್ಲಾಮ್‌ಗೆ ಮತಾಂತರಿಸಲಾಗಿದೆ’, ಎಂದು ಫ್ರಾನ್ಸ್‌ನ ಮಿಸ್ರದ ಮಾನವಾಧಿಕಾರಿ ಸಂಘಟನೆಯಾಧ್ಯಕ್ಷ ಜೀನ್‌ ಮೆಹರ ಇವರು ಹೇಳಿದ್ದಾರೆ.

೭. ಹತ್ತಿರ ಸಂಬಂಧಿಕರೊಂದಿಗೆ ಮದುವೆಯಾಗುವುದರಿಂದ ಉಂಟಾಗುವ ಅನುವಂಶಿಕ ರೋಗಗಳ ಸಮಸ್ಯೆಯನ್ನು ತಡೆಗಟ್ಟಲು ಲವ್‌ ಜಿಹಾದ್‌ !

ಅ. ಇಸ್ಲಾಮ್‌ ತನ್ನ ಅನುಯಾಯಿಗಳಿಗೆ ಸೋದರಸಂಬಂಧಿಗಳೊಂದಿಗೆ ಮದುವೆಯಾಗಲು ಅನುಮತಿ ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ಇದನ್ನು ರೂಢಿ ಎಂದು ಸ್ವೀಕರಿಸಿದ್ದರಿಂದ ಅನೇಕ ಅನುವಂಶಿಕ ರೋಗಗಳ ಪ್ರಕರಣಗಳು ಹೆಚ್ಚಾಗಿವೆ. ಈ ರೂಢಿಯಾನುಸರಿಸುವ ಪಾಕಿಸ್ತಾನಿ ಜನರ ಬಗ್ಗೆ ಜರ್ಮನಿಯ ‘ಡಿ ಡಬ್ಲ್ಯೂ ನ್ಯೂಸ್’ ಒಂದು ವರದಿಯನ್ನು ತಯಾರಿಸಿದೆ. ಪಾಕಿಸ್ತಾನದ ೫೬ ವರ್ಷ ವಯಸ್ಸಿನ ಗಫೂರ ಹುಸೈನ್‌ ಶಾಹ್‌ ೮ ಮಕ್ಕಳ ತಂದೆಯಾಗಿದ್ದಾನೆ. ಅವನು ‘ಡಿ ಡಬ್ಲ್ಯೂ ನ್ಯೂಸ್‌’ನೊಂದಿಗೆ ಮಾತನಾಡುತ್ತಾ, ”ನಮ್ಮಲ್ಲಿ ಸಂಬಂಧಿಕರನ್ನು ಮದುವೆಯಾಗದಿದ್ದರೆ ಅಂತಹವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತದೆ. ನಮ್ಮ ಕುಟುಂಬದ ವೈದ್ಯಕೀಯ ಇತಿಹಾಸದಲ್ಲಿ ರಕ್ತ ಸಂಬಂಧಿತ ಕಾಯಿಲೆ, ಕಲಿಯುವ ಕ್ಷಮತೆಯ ಅಭಾವ, ಕುರುಡುತನ, ಕಿವುಡುತನ ಮುಂತಾದ ಸಮಸ್ಯೆಗಳಿವೆ” ಎಂದು ಹೇಳಿದನು. ಆಧುನಿಕ ವೈದ್ಯರ ಅಭಿಪ್ರಾಯಕ್ಕನುಸಾರ ಇದು ‘ಇಂಬ್ರಿಡಿಂಗ್‌’ನಿಂದಾಗಿ (ಹತ್ತಿರದ ಸಂಬಂಧದಲ್ಲಿನ ಸಂತಾನೋತ್ಪತ್ತಿಯಿಂದ) ಆಗುತ್ತದೆ.

ಆ. ಪಾಕಿಸ್ತಾನದಲ್ಲಿ ‘ಜೆನೆಟಿಕ್‌ ಮ್ಯುಟೆಶನ್’ ಬಗ್ಗೆ (ಅನುವಂಶಿಕ ರೂಪಾಂತರದ ಬಗ್ಗೆ) ೨೦೧೭ರಲ್ಲಿ ಒಂದು ವರದಿಯನ್ನು ತಯಾರಿಸಲಾಯಿತು. ಅದರಲ್ಲಿ ‘ಮ್ಯುಟೆಶನ್‌’ನ ವಿಧಗಳು ಮತ್ತು ಅದಕ್ಕೆ ಸಂಬಂಧಿಸಿದ ರೋಗಗಳ ಬಗ್ಗೆ ವಿವರಿಸಲಾಗಿದೆ. ಈ ವರದಿಯ ಮಾಹಿತಿಗನುಸಾರ ಪಾಕಿಸ್ತಾನದಲ್ಲಿ ರಕ್ತಸಂಬಂಧಿ ವಿವಾಹಗಳಿಂದ ಅನುವಂಶಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಒಂದು ಮಾಹಿತಿಗನುಸಾರ ಪಾಕಿಸ್ತಾನದಲ್ಲಿ ಕಂಡುಬರುವ ೧೩೦ ವಿಧದ ಅನುವಂಶಿಕ ರೋಗಗಳಲ್ಲಿ ೧ ಸಾವಿರಕ್ಕಿಂತ ಹೆಚ್ಚು ‘ಮ್ಯುಟೇಶನ್’ ಕಂಡು ಬಂದಿದೆ.

ಇ. ಇಂದು ಮುಸಲ್ಮಾನರಲ್ಲಿ ಹೆಚ್ಚುತ್ತಿರುವ ಅನುವಂಶಿಕ ರೋಗಗಳ ಸಮಸ್ಯೆಯನ್ನು ನೋಡಿದರೆ ಇಸ್ಲಾಮನ ಜಾಗತಿಕ ಪ್ರಾಬಲ್ಯದ ಕನಸು ಸಹ ಅನುಮಾನಾಸ್ಪದವಾಗುತ್ತಿದೆ. ಈ ಕಾರಣದಿಂದಲೂ ಇಸ್ಲಾಮನ್ನು ಮುಂದುವರಿಸಲು ಈಗ ‘ಲವ್‌ ಜಿಹಾದ್’ ಅಥವಾ ಬಲವಂತದ ಮತಾಂತರ ಇವುಗಳ ಮಾಧ್ಯಮದಿಂದ ಮುಸಲ್ಮಾನೇತರ ಹುಡುಗಿಯರನ್ನು ಮುಸಲ್ಮಾನರನ್ನಾಗಿಸಿ ಅವರ ಗರ್ಭದಿಂದ ಸದೃಢೈಸ್ಲಾಮಿ ವಂಶೋತ್ಪತ್ತಿಯ ಪ್ರಯತ್ನಗಳಾಗುತ್ತಿವೆ.

೮. ಭಾರತದಿಂದ ನಾಪತ್ತೆಯಾದ ಮಹಿಳೆಯರ ವಿಷಯದಲ್ಲಿ ಮುಂದೇನಾಗುತ್ತದೆ ?

ಅ. ಒಂದೆಡೆ ‘ಲವ್‌ ಜಿಹಾದ್‌’ನ ಘಟನೆಗಳು ಹೆಚ್ಚುತ್ತಿವೆ ಮತ್ತೊಂದೆಡೆ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಒಂದು ಅಧ್ಯಯನಕ್ಕನುಸಾರ ದೇಶದಲ್ಲಿ ನಾಪತ್ತೆಯಾಗುವ ಮಹಿಳೆ ಮತ್ತು ಮಕ್ಕಳ ಸಂಖ್ಯೆಯು ಹೆಚ್ಚಳವಾಗುತ್ತಿದೆ. ೨೦೧೬ ರಿಂದ ೨೦೧೮ ನೇ ವರ್ಷದ ಕಾಲಾವಧಿಯಲ್ಲಿ ಎಲ್ಲ ರಾಜ್ಯಗಳ ತುಲನೆಯಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಇವೆರಡು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾದ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ.

ಆ. ರಾಷ್ಟ್ರೀಯ ಅಪರಾಧ ದಾಖಲೆ ಇಲಾಖೆಯ ವರದಿಗನುಸಾರ ಮಹಾರಾಷ್ಟ್ರ, ಬಂಗಾಲ ಮತ್ತು ಮಧ್ಯಪ್ರದೇಶ ಈ ೩ ರಾಜ್ಯಗಳಲ್ಲಿ ೩ ವರ್ಷಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ. ೨೦೧೬ರಲ್ಲಿ ಮಹಾರಾಷ್ಟ್ರದಲ್ಲಿ ೨೮ ಸಾವಿರದ ೩೧೬, ೨೦೧೭ ರಲ್ಲಿ ೨೯ ಸಾವಿರದ ೨೭೯ ಮತ್ತು ೨೦೧೮ ರಲ್ಲಿ ೩೩ ಸಾವಿರದ ೯೬೪ ಮಹಿಳೆಯರು ನಾಪತ್ತೆಯಾಗಿದ್ದಾರೆ. ಮುಂಬಯಿಯಲ್ಲಿ ೨೦೧೭ ಮತ್ತು ೨೦೧೮ ರಲ್ಲಿ ೪ ಸಾವಿರದ ೭೧೮ ಮತ್ತು ೫ ಸಾವಿರದ ೨೦೧ ಮಹಿಳೆಯರು ನಾಪತ್ತೆಯಾಗಿದ್ದು, ಇಲ್ಲಿ ಹೆಚ್ಚಾಗಿ ಇಂತಹ ಘಟನೆಗಳು ದಾಖಲಿಸಲಾಗಿವೆ. ಬಂಗಾಲದಲ್ಲಿ ೨೦೧೬ ರಿಂದ ೨೦೧೮ ಈ ಕಾಲಾವಧಿಯಲ್ಲಿ ನಾಪತ್ತೆಯಾದ ಮಹಿಳೆಯರ ಸಂಖ್ಯೆ ಅನುಕ್ರಮವಾಗಿ ೨೪ ಸಾವಿರದ ೯೩೭, ೨೮ ಸಾವಿರದ ೧೩೩ ಮತ್ತು ೩೧ ಸಾವಿರದ ೨೯೯ ರಷ್ಟಿತ್ತು. ಮಧ್ಯಪ್ರದೇಶದಲ್ಲಿ ಈ ೩ ವರ್ಷಗಳಲ್ಲಿ ಮಹಿಳೆಯರು ನಾಪತ್ತೆಯಾದ ಬಗ್ಗೆ ಅನುಕ್ರಮವಾಗಿ ೨೧ ಸಾವಿರದ ೪೩೫, ೨೬ ಸಾವಿರದ ೫೮೭ ಮತ್ತು ೨೯ ಸಾವಿರದ ೭೬೧ ದೂರುಗಳನ್ನು ದಾಖಲಿಸಲಾಯಿತು.

ಇ. ರಾಷ್ಟ್ರೀಯ ಅಪರಾಧ ದಾಖಲೆ ಇಲಾಖೆಯ ವರದಿಯಲ್ಲಿ ನಮೂದಿಸಿದಂತೆ, ಕೆಲವು ಯುವತಿಯರ ಮನೆಯಲ್ಲಿ ಅನುಚಿತ ವರ್ತನೆ ಮತ್ತು ಮನೆಯ ಅಸಹನೀಯ ಪರಿಸ್ಥಿತಿಗಳಿಂದ ಮನೆಯಿಂದ ಓಡಿ ಹೋಗುತ್ತಾರೆ. ಅವರು ಮಾನವರ ಕಳ್ಳಸಾಗಾಣಿಕೆ, ಹಿಂಸಾಚಾರ, ಮಾದಕ ಪದಾರ್ಥಗಳ ವ್ಯಸನ, ವೇಶ್ಯಾವಾಟಿಕೆ ಮತ್ತು ಶೋಷಣೆ ಮುಂತಾದ ಅಪಾಯಗಳಿಗೆ ತುತ್ತಾಗುತ್ತಾರೆ. ನಾಪತ್ತೆಯಾದ ಅನೇಕ ವ್ಯಕ್ತಿಗಳ ಕಳ್ಳಸಾಗಾಣಿಕೆಯಂತೂ ನಿಶ್ಚಿತವಾಗಿಯೂ ಆಗುತ್ತಿದೆ.’

ದೇಶದ ಆರ್ಥಿಕ ರಾಜಧಾನಿ ಮುಂಬಯಿ ಮತ್ತು ಇತರ ರಾಜ್ಯಗಳಲ್ಲಿನ ಮಹಿಳೆಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಾಪತ್ತೆಯಾಗುತ್ತಿದ್ದಾರೆ, ಈ ವಿಷಯವನ್ನು ಗಂಭೀರವಾಗಿ ಏಕೆ ತೆಗೆದುಕೊಳ್ಳುವುದಿಲ್ಲ ? ಇದಕ್ಕೂ ‘ಲವ್‌ ಜಿಹಾದ್‌’ಗೂ ಏನಾದರೂ ನಂಟಿದೆಯೇ ? ನಾಪತ್ತೆಯಾದ ಮಹಿಳೆಯರ ಸ್ಥಿತಿ ಮುಂದೇ ನಾಗುತ್ತದೆ ? ಅವರ ಜೀವನಕ್ಕೆ ಶ್ರದ್ಧಾಳಂತಹ (ದೆಹಲಿಯಲ್ಲಿ ಆಫ್ತಾಬ್‌ ಅಮಿನ್‌ ಪೂನಾವಾಲಾ ಇವನ ಪ್ರೇಯಸಿ ಮತ್ತು ಹಿಂದೂ ಯುವತಿ ಶ್ರದ್ಧಾ ವಾಲಕರಳ ೩೫ ತುಂಡುಗಳನ್ನು ಮಾಡಿದಂತೆ) ಅಪಾಯವಿಲ್ಲವಲ್ಲ ? ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿಲ್ಲವಲ್ಲ ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಆಗಲೇ ದೇಶವು ಮಹಿಳೆ ಮತ್ತು ಮಕ್ಕಳ ದೃಷ್ಟಿಯಿಂದ ಸುರಕ್ಷಿತವಾಗಿದೆ ಎಂದು ಹೇಳಬಹುದಾಗಿದೆ.

೯. ಪ್ರೇಮವಿದ್ದರೆ ಮತಾಂತರದ ಆವಶ್ಯಕತೆಯೇನಿದೆ ?

ಭಾರತದಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ಎರಡು ಸಮಾನಾಂತರ ಕಾನೂನು ವ್ಯವಸ್ಥೆಗಳು ಮತ್ತು ಒಂದು ವಿವಾಹದ ಒಪ್ಪಂದದ ವ್ಯವಸ್ಥೆ ಇದೆ. ಭಾರತದಲ್ಲಿ ‘ಪರ್ಸನಲ್‌ ಲಾ’ದ (ವೈಯಕ್ತಿಕ ಕಾನೂನಿನ) ಆಶ್ಚರ್ಯಕರ ವ್ಯವಸ್ಥೆ ಇದೆ. ಮುಸಲ್ಮಾನರಿಗೆ ‘ಶರಿಯತ್‌ ಕಾನೂನಿ’ನ ಅಂತರ್ಗತ ಮತ್ತು ಹಿಂದೂಗಳಿಗೆ ‘ಹಿಂದೂ ವಿವಾಹ ಅಧಿನಿಯಮದ’ ಅಂತರ್ಗತ ವಿವಾಹವನ್ನು ನೋಂದಾಯಿಸಲು ಅನುಮತಿ ಇದೆ. ಅದೇ ರೀತಿ ಇತರ ಧರ್ಮಗಳ ದಂಪತಿಗಳಿದ್ದರೆ, ಆಗ ಅವರಿಗಾಗಿ ಒಂದು ‘ವಿಶೇಷ ವಿವಾಹ ಅಧಿನಿಯಮ’ (ಸ್ಪೆಶಲ್‌ ಮ್ಯಾರೆಜ್‌ ಯಾಕ್ಟ್‌) ಇದೆ, ಅದನ್ನು ವಿಶೇಷ ಸ್ವರೂಪದ ‘ರಿಜಿಸ್ಟರ್‌ ವಿವಾಹ’ (ನೋಂದಣಿಕೃತ ವಿವಾಹ) ವೆಂದು ತಿಳಿಯಲಾಗುತ್ತದೆ.

‘ಹಿಂದೂ ವಿವಾಹ ಅಧಿನಿಯಮ’ ಮತ್ತು ‘ವಿಶೇಷ ವಿವಾಹ ಅಧಿನಿಯಮ’ ಇವುಗಳಲ್ಲಿ ಪತಿ ಮತ್ತು ಪತ್ನಿಯರ ಅಧಿಕಾರ ಮತ್ತು ಜವಾಬ್ದಾರಿ ಹೆಚ್ಚು ಕಡಿಮೆ ಸಮಪ್ರಮಾಣದಲ್ಲಿರುತ್ತದೆ; ಆದರೆ ಶರಿಯಾ ಕಾನೂನಿಗನುಸಾರ ಹಾಗಿಲ್ಲ. ಇಸ್ಲಾಮ್‌ನಲ್ಲಿ ಪತ್ನಿಗೆ ಅಧಿಕಾರಗಳು ಕಡಿಮೆ ಇರುತ್ತವೆ. ‘ಲವ್‌ ಜಿಹಾದ್‌’ನ ಉದಾಹರಣೆಗಳಲ್ಲಿ ಯಾವಾಗಲೂ ಓರ್ವ ಮುಸಲ್ಮಾನೇತರ ಹುಡುಗಿಯ ಸಹಭಾಗವಿರುತ್ತದೆ, ಎಂಬುದನ್ನು ನೀವು ನೋಡಿರಬಹುದು. ವಾಸ್ತವದಲ್ಲಿ ಶರಿಯಾ ಕಾನೂನಿನ ಅಂತರ್ಗತ ಮದುವೆಗಾಗಿ ಮಹಿಳೆ ಮತ್ತು ಪುರುಷರಿಬ್ಬರೂ ಮುಸಲ್ಮಾನರಾಗಿರುವುದು ಆವಶ್ಯಕವಾಗಿದೆ. ಈ ಸಂದರ್ಭದಲ್ಲಿ ಕುರಾನ್‌ನಲ್ಲಿ (೨.೨೨೧) ಅನೇಕೇಶ್ವರವಾದಿ (ಅನೇಕ ದೇವತೆಗಳನ್ನು ಪೂಜಿಸುವ ಹಿಂದೂ) ಸ್ತ್ರೀಯರೊಂದಿಗೆ ಮದುವೆ ಮಾಡಿಕೊಳ್ಳಬಾರದು. ಅವಳು ನಿಮಗೆ ಬಹಳ ಇಷ್ಟವಾಗಿದ್ದರೂ ಸರಿ, ಎಲ್ಲಿಯವರೆಗೆ ಅವಳು ಇಸ್ಲಾಮ್‌ ಮೇಲೆ ಸಂಪೂರ್ಣ ವಿಶ್ವಾಸವನ್ನು ಇಡುವುದಿಲ್ಲವೋ, ಅಲ್ಲಿಯ ವರೆಗೆ ಅವಳು ಓರ್ವ ಇಸ್ಲಾಮ್‌ ದಾಸಿಗಿಂತಲೂ ಕೆಳ ಮಟ್ಟದವಳಾಗಿರುತ್ತಾಳೆ ಎಂದು ತಿಳಿದುಕೊಳ್ಳಬೇಕು’, ಎನ್ನಲಾಗಿದೆ.

ಈ ಕಾರಣದಿಂದ ಲವ್‌ ಜಿಹಾದ್‌ನ ಅನೇಕ ಪ್ರಕರಣಗಳಲ್ಲಿ ಮತಾಂಧ ಯುವಕರು ‘ಸ್ಪೆಶಲ್‌ ಮ್ಯಾರೆಜ್‌ ಯಾಕ್ಟ್‌’ ಬದಲು ಶರಿಯಾ ಕಾನೂನಿಗನುಸಾರವೇ ಮದುವೆಯನ್ನು ಮಾಡಿಕೊಳ್ಳಲು ಹುಡುಗಿಯರನ್ನು ಒತ್ತಾಯಿಸುತ್ತಾರೆ. ಒಂದು ವೇಳೆ ಹುಡುಗಿಯು ‘ಶರಿಯಾ ಕಾನೂನಿ’ಗನುಸಾರ ಸ್ವೈಚ್ಛೆಗನುಸಾರ ಮದುವೆಯನ್ನು ಮಾಡಿಕೊಂಡರೆ ಅವಳು ತನ್ನ ಸದ್ಯದ ಎಲ್ಲ ಅಧಿಕಾರಗಳಿಂದ ವಂಚಿತಳಾಗುತ್ತಾಳೆ. ಇಸ್ಲಾಮಿ ಶರಿಯಾ ಕಾನೂನಿಗನುಸಾರ ‘ಮದುವೆಯು ಒಂದು ಒಪ್ಪಂದ (ಕಾಂಟ್ರಾಕ್ಟ್‌)ವಾಗಿರುತ್ತದೆ. ಅದು ಹಿಂದೂ ಸಂಸ್ಕೃತಿಗನುಸಾರ ಒಂದು ಸಂಸ್ಕಾರವಲ್ಲ’, ಎಂದು ಹೇಳಲಾಗುತ್ತದೆ. ವಿಶೇಷ ವಿವಾಹ ಅಧಿನಿಯಮದಡಿಯಲ್ಲಿ ವಿವಾಹವಾಗುವ ಪ್ರಮಾಣ ಅತ್ಯಲ್ಪವಿರುತ್ತದೆ. ಹುಡುಗ-ಹುಡುಗಿಯರಿಂದ ಒಂದು ಪ್ರತಿಜ್ಞಾಪತ್ರ(ಅಫೆಡೆವಿಟ್‌)ವನ್ನು ತಯಾರಿಸಲಾಗುತ್ತದೆ, ಇದರಿಂದ ಹುಡುಗಿಗೆ, ‘ವಿಶೇಷ ವಿವಾಹ ಅಧಿನಿಯಮದ’ ಅಂತರ್ಗತ ನಾವು ವಿವಾಹಿತಳಿದ್ದೇನೆ ಎಂದು ಅನಿಸುತ್ತದೆ. ಕೆಲವು ವರ್ಷಗಳ ನಂತರ ಅವಳಿಗೆ, ತನ್ನ ‘ನಿಕಾಹ’ (ಮದುವೆ) ಆಗದೇ ಇದ್ದುದರಿಂದ ಶರಿಯಾನುಸಾರ ಅವಳಿಗೆ ಯಾವುದೇ ಕಾನೂನುಬದ್ಧ ಸ್ಥಿತಿ ಇಲ್ಲ ಅಥವಾ ಅವಳಲ್ಲಿ ಯಾವುದೇ ಅಧಿಕಾರವಿಲ್ಲ ಎಂಬುದು ತಿಳಿಯುತ್ತದೆ.

೧೦. ಲವ್‌ ಜಿಹಾದ್‌ನ ಬೆಂಬಲಕ್ಕೆ ಜಾತ್ಯತೀತ ಕಾನೂನುವ್ಯವಸ್ಥೆ ಇರುವುದರಿಂದ ಯಾವುದೇ ರೀತಿಯಲ್ಲಿ ಅವರ ತನಿಖೆಯಾಗುವುದಿಲ್ಲ

ತಾಯಿ-ತಂದೆಯರು ತಮ್ಮ ಮಗಳನ್ನು ಚಿಕ್ಕವಳಿರುವಾಗಿನಿಂದ ಬಹಳ ಅಕ್ಕರೆಯಿಂದ ಬೆಳೆಸುತ್ತಾರೆ, ಅವಳಿಗೆ ಉತ್ತಮ ಶಿಕ್ಷಣ ನೀಡುತ್ತಾರೆ ಮತ್ತು ಅವಳ ಎಲ್ಲ ಇಚ್ಛೆಗಳನ್ನು ಪೂರ್ಣಗೊಳಿಸುತ್ತಾರೆ. ‘ಅವಳು ಮದುವೆಯ ನಂತರ ಬೇರೊಂದು ಕುಟುಂಬಕ್ಕೆ ಹೋಗುವವಳಿದ್ದಾಳೆ, ಆದುದರಿಂದ ಅವಳಿಗೆ ಯಾವುದೇ ಕೊರತೆಯಾಗಬಾರದೆಂಬ ಭಾವ ಅವರಲ್ಲಿಯಿರುತ್ತದೆ. ಈ ಹುಡುಗಿಯು ‘ಲವ್‌ ಜಿಹಾದ್‌’ನಲ್ಲಿ ಸಿಲುಕಿದಾಗ ಅವಳು ಇವೆಲ್ಲ ವಿಷಯಗಳನ್ನು ಮರೆಯುತ್ತಾಳೆ. ಒಂದು ದಿನ ಅವಳು ಯಾವುದಾದರೊಬ್ಬ ಪೇಂಟರ್, ಮೆಕ್ಯಾನಿಕ್, ರಿಕ್ಷಾಚಾಲಕ ಅಥವಾ ಪಂಕ್ಚರ್‌ ತೆಗೆಯುವವನ ಜೊತೆಗೆ ಓಡಿ ಹೋಗುತ್ತಾಳೆ. ಹುಡುಗಿ ನಾಪತ್ತೆಯಾದ ನಂತರ ಅವಳ ಕುಟುಂಬದವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡುತ್ತಾರೆ. ಲವ್‌ ಜಿಹಾದ್‌ನ ಷಡ್ಯಂತ್ರದ ಬಗ್ಗೆ ತಿಳುವಳಿಕೆ ಇಲ್ಲದ ಹುಡುಗಿ ಸ್ವಲ್ಪ ಸಮಯದ ಹಿಂದೆಯೇ ಪರಿಚಯವಾದ ಮತಾಂಧ ಯುವಕನ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟು ತನ್ನ ತಾಯಿತಂದೆಯರ ವಿರೋಧದಲ್ಲಿ ಮೆಜಿಸ್ಟ್ರೇಟ್‌ರ ಎದುರಿಗೆ (ನ್ಯಾಯಾಧೀಶರ ಎದುರು ಅಥವಾ ದಂಡಾಧಿಕಾರಿಗಳ ಎದುರು) ಸಾಕ್ಷಿ ನೀಡುತ್ತಾಳೆ. ಹಾಗೆಯೇ ೧೮ ವರ್ಷಗಳು ಪೂರ್ಣವಾದ ಬಗ್ಗೆ ಸಾಕ್ಷಿ ನೀಡಿ ತನ್ನ ಜೀವನದ ನಿರ್ಣಯವನ್ನು ತೆಗೆದುಕೊಳ್ಳುತ್ತಾಳೆ.

೧೮ ವರ್ಷಗಳ ವರೆಗೆ ತಮ್ಮ ಮಗಳನ್ನು ಹೂವಿನಂತೆ ಕಾಪಾಡಿದ ತಾಯಿ-ತಂದೆಗೆ ಮಗಳ ಮೇಲೆ ಸ್ವಲ್ಪವೂ ಅಧಿಕಾರ ಉಳಿಯುವುದಿಲ್ಲ. ಕೇವಲ ೧೮ ವರ್ಷ ಪೂರ್ಣವಾಗಿದೆ ಎಂದು ಅವಳಿಗೆ ಸಮಾಜದಲ್ಲಿ ಜೀವಿಸುವ ಮತ್ತು ತನ್ನ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ತಿಳುವಳಿಕೆ ಬರುತ್ತದೆಯೇ ? ತಾಯಿ ತಂದೆಯರ ಅನುಭವಕ್ಕೆ ಯಾವುದೇ ಮಹತ್ವ (ಬೆಲೆ) ಇಲ್ಲವೇ ? ಸಮಾಜದಲ್ಲಿ ನಿಯಮಿತವಾಗಿ ನಡೆಯುವ ವಿವಾಹಗಳಲ್ಲಿ, ಅನೇಕ ರೀತಿಯಲ್ಲಿ ವಿಚಾರವಿನಿಮಯಗಳನ್ನು ಮಾಡುವುದು, ಮಗಳ ಒಪ್ಪಿಗೆ ಇರುವುದು – ಇಲ್ಲದಿರುವುದನ್ನು ನೋಡಲಾಗುತ್ತದೆ; ಆದರೆ ಇಲ್ಲಿ ಒಂದು ಕ್ಷಣದಲ್ಲಿ ತಾಯಿ-ತಂದೆಯರು ತನ್ನ ವೈರಿಗಳಾಗಿದ್ದಾರೆ ಎಂಬಂತೆ ವರ್ತಿಸಲಾಗುತ್ತದೆ. ಇಲ್ಲಿ ದೇಶದ ಧರ್ಮನಿರಪೇಕ್ಷ ಕಾನೂನು ಹುಡುಗಿಯು ಕೇವಲ ೧೮ ವರ್ಷದವಳಾದಳೆಂದು ಅವಳನ್ನು ಪ್ರಜ್ಞಾವಂತಳೆಂದು/ಸಜ್ಞಾನಳೆಂದು ತಿಳಿದು ಸಂರಕ್ಷಣೆ ನೀಡುತ್ತದೆ ಮತ್ತು ತಾಯಿ-ತಂದೆಯರ ಹಿತದ ನಿರ್ಣಯವನ್ನು ನಿರಾಕರಿಸುತ್ತದೆ. ನಾವು ನಮ್ಮ ವಾಹನವನ್ನು ಇತರರಿಗೆ ಕೊಡುವಾಗಲೂ ಹಳೆಯ ಮಾಲೀಕನ ‘ಎನ್‌.ಓ.ಸಿ.’ (ಆಕ್ಷೇಪಣೆ ಇಲ್ಲದ ಪ್ರಮಾಣಪತ್ರ) ಯನ್ನು ಪಡೆಯಬೇಕಾಗುತ್ತದೆ; ಆದರೆ ಈ ಜೀವಂತ ಹುಡುಗಿಯ ಜೀವನದ ಮೇಲೆ ತಾಯಿ-ತಂದೆಯರ ಯಾವುದೇ ಅಧಿಕಾರವಿಲ್ಲ, ಇದು ಬಹುದೊಡ್ಡ ಮತ್ತು ವಿಚಿತ್ರ ಕಾಯಿದೆ ಆಗಿದೆ ! ದುರ್ದೈವದಿಂದ ಲವ್‌ ಜಿಹಾದಿಗಳ ಹಿತಕ್ಕಾಗಿ ಇದು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

೧೧. ಲವ್‌ ಜಿಹಾದ್‌ನ ಮಾಧ್ಯಮದಿಂದ ಮುಸಲ್ಮಾನರ ಜನಸಂಖ್ಯೆಯನ್ನು ಹೆಚ್ಚಿಸುವ ಷಡ್ಯಂತ್ರ !

ಇಂದು ಮುಸಲ್ಮಾನರು ‘ಗಝವಾ-ಎ-ಹಿಂದ್’ (ಇಸ್ಲಾಮಿಸ್ತಾನ್) ಮತ್ತು ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದವರ ‘ವಿಶನ್‌-೨೦೪೭’ನ ಸಂಕಲ್ಪನೆಗನುಸಾರ ಸಂಪೂರ್ಣ ಭಾರತ ಭೂಮಿಯ ಮೇಲೆ ಇಸ್ಲಾಮಿ ಆಡಳಿತವನ್ನು ಸ್ಥಾಪಿಸುವ ಧ್ಯೇಯವನ್ನಿಟ್ಟುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಭಾರತದಲ್ಲಿ ಫಲವತ್ತಾದ ಭೂಮಿಯ ತುಲನೆಯಲ್ಲಿ ಜನಸಂಖ್ಯೆಯಲ್ಲಾಗುವ ಹೆಚ್ಚಳದ ವಿಚಾರವನ್ನು ಮಾಡದೇ ಮುಸಲ್ಮಾನರು ‘ಜನಸಂಖ್ಯಾ ನಿಯಂತ್ರಣ ಕಾನೂನು’ ಮತ್ತು ‘ಸಮಾನ ನಾಗರಿಕ ಕಾಯಿದೆ’ ಇವುಗಳನ್ನು ವಿರೋಧಿಸುತ್ತಾರೆ. ಜನಸಂಖ್ಯೆಯನ್ನು ಹೆಚ್ಚಿಸಲು ಶರಿಯತ್‌ನ ಆಧಾರ ಪಡೆದು ೩-೪ ಮದುವೆಗಳನ್ನು ಮಾಡಿಕೊಳ್ಳುವ ಅವಕಾಶವನ್ನು ಬಳಸಲಾಗುತ್ತದೆ. ಹಿಂದೂ ಹುಡುಗಿಯನ್ನು ಮದುವೆ ಮಾಡಿಕೊಂಡು ಅವಳನ್ನು ಇಸ್ಲಾಮ್‌ ಪದ್ಧತಿಯಲ್ಲಿ ಮುಸಲ್ಮಾನಳನ್ನಾಗಿಸಲಾಗುತ್ತದೆ. ನಂತರ ಅವಳಿಗೆ ೨-೩ ಮಕ್ಕಳಾದ ನಂತರ ತಲಾಕ್‌ (ವಿವಾಹವಿಚ್ಛೇದನೆ) ನೀಡಲಾಗುತ್ತದೆ. ನಂತರ ಅವರ ಹೊಸ ಹುಡುಗಿಯ ಹುಡುಕಾಟ ಪುನಃ ಆರಂಭವಾಗುತ್ತದೆ. ಈ ರೀತಿ ಹೆಚ್ಚೆಚ್ಚು ಮುಸಲ್ಮಾನ ಮಕ್ಕಳಿಗೆ ಜನ್ಮ ನೀಡಲು ಹಿಂದೂ ಹುಡುಗಿಯರ ಗರ್ಭಾಶಯದ ಬಳಕೆಯನ್ನು ಮಾಡಲಾಗುತ್ತದೆ. ಲವ್‌ ಜಿಹಾದನ ‘ಗರ್ಭಾಶಯ ಜಿಹಾದ್‌’ನ ಸ್ವರೂಪದಲ್ಲಿಯೂ ಬಳಕೆ ಮಾಡಲಾಗುತ್ತಿದೆ.

೧೨. ಲವ್‌ ಜಿಹಾದ್‌ನಲ್ಲಿ ಹಿಂದೂ ಸೊಸೆ ಬೇಕು; ಆದರೆ ಹಿಂದೂ ಯುವಕನಿಗೆ ಮುಸಲ್ಮಾನ ಯುವತಿಯನ್ನು ವಿವಾಹವಾಗುವ ಅನುಮತಿ ಇಲ್ಲ

ಅನೇಕ ಜಾತ್ಯತೀತವಾದಿಗಳು ಮತ್ತು ಮುಸಲ್ಮಾನ ಮುಖಂಡರು ಲವ್‌ ಜಿಹಾದ್‌ನ ವಿಷಯದಲ್ಲಿ ಮಾತನಾಡುವಾಗ ‘ಇದು ಇಬ್ಬರು ಪ್ರೇಮಿಗಳ ಪ್ರೇಮವಾಗಿದೆ. ಎಲ್ಲ ಧರ್ಮದ ಜನರು ಸಹೋದರಭಾವದಿಂದ ಇರಬೇಕು’, ಈ ರೀತಿಯಲ್ಲಿ ಹೇಳಿ ಹಿಂದೂ ಯುವತಿಯರು ಮುಸಲ್ಮಾನ ಯುವಕರನ್ನು ಪ್ರೇಮಿಸುವುದು ಮತ್ತು ಮದುವೆಯಾಗುವುದನ್ನು ಸಮರ್ಥಿಸುತ್ತಾರೆ, ಆದರೆ ಅದೇ ಜನರು ಯಾವಾಗ ಹಿಂದೂ ಯುವಕನು ಯಾವುದಾದರೊಬ್ಬ ಮುಸಲ್ಮಾನ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲಿಕ್ಕಿದ್ದರೆ, ಅವರು ಬಾಯಿ ಮುಚ್ಚಿಕೊಂಡಿರುತ್ತಾರೆ. ಇತ್ತೀಚೆಗೆ ಈ ರೀತಿ ಕೇವಲ ಮುಸಲ್ಮಾನ ಹುಡುಗಿಯನ್ನು ಪ್ರೀತಿಸಿದನೆಂದ ಮಾತ್ರಕ್ಕೆ ಸುಮಾರು ೩೫ ಹಿಂದೂ ಯುವಕರ ಮೇಲೆ ಮತ್ತು ಮುಸಲ್ಮಾನ ಹುಡುಗಿಯರ ಮೇಲೆ ಮುಸಲ್ಮಾನರು ದಾಳಿ ಮಾಡಿ ಅವರ ಹತ್ಯೆಯನ್ನು ಮಾಡಿದರು. ಯಾವಾಗ ಅಂಕಿತ ಸಕ್ಸೇನಾ, ಖೆತಾರಾಮ ಭೀಲ್, ಅಂಶು ಸಾಹನಿ, ನಾಗರಾಜು, ದೀಪಕ ಬರ್ಡೆ ಇವರಂತಹ ಅನೇಕ ಹಿಂದೂಗಳಿಗೆ ಜೀವವನ್ನು ಕಳೆದುಕೊಳ್ಳಬೇಕಾಯಿತೋ, ಆಗ ಪ್ರೇಮದ ಮಹತ್ವವನ್ನು ಹೇಳಲು ಯಾವುದೇ ಜಾತ್ಯತೀತವಾದಿ ಅಥವಾ ಮುಸಲ್ಮಾನ ಮುಖಂಡರು ಮುಂದೆ ಬರಲಿಲ್ಲ.

(ಮುಂದುವರಿಯುವುದು)

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (೫.೧೨.೨೦೨೨)

‘ಲವ್‌ ಜಿಹಾದ್’ ಅಸ್ತಿತ್ವದಲ್ಲಿ ಇಲ್ಲದಿದ್ದರೆ ‘ಲವ್‌ ಜಿಹಾದ್’ ವಿರೋಧಿ ಕಾಯಿದೆಗೆ ವಿರೋಧವೇಕೆ ? – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ವಿವಿಧ ಪ್ರಕಾರದ ‘ಜಿಹಾದ’ನಂತೆ ‘ಲವ್‌ ಜಿಹಾದ’ ಕೂಡ ಜಿಹಾದಿಗಳು ಹಿಂದೂ ಸಮಾಜದ ವಿರುದ್ಧ ಘೋಷಿಸಿದ ಯುದ್ಧವೇ ಆಗಿದೆ. ಸಾಮಾನ್ಯ ಮನೆಯ ಹಿಂದೂ ಯುವತಿಯಿಂದ ಹಿಡಿದು ಕ್ರೀಡಾ ಕ್ಷೇತ್ರ, ಚಿತ್ರರಂಗ ಮುಂತಾದ ಕ್ಷೇತ್ರದ ಅನೇಕ ಹಿಂದೂ ಯುವತಿ ಹಾಗೂ ಮಹಿಳೆಯರು ಈವರೆಗೆ ‘ಲವ್‌ ಜಿಹಾದ್‌’ಗೆ ಬಲಿಯಾಗಿದ್ದಾರೆ. ಅವರನ್ನು ಮೋಸಗೊಳಿಸಲಾಗಿದೆ ಹಾಗೆಯೇ ಅವರ ಅಪಾರ ಶೋಷಣೆಯಾಗುತ್ತಿದೆ. ಇದರ ಅನೇಕ ಉದಾಹರಣೆಗಳು ವಿವಿಧ ಮಾಧ್ಯಮದಿಂದ ಹೊರಬರುತ್ತಿದೆ. ಲವ್‌ ಜಿಹಾದ್’ನಿಂದ ದೊಡ್ಡ ಪ್ರಮಾಣದಲ್ಲಿ ಭಾರತದ ಮಾತ್ರವಲ್ಲ ಭಾರತದ ಹೊರಗಿನ ಹಿಂದೂಗಳ ಸಹಿತ ಸಿಖ್‌ ಯುವತಿಯರ ಮತಾಂತರವಾಗಿದ್ದು ಹಿಂದೂ ಕುಟುಂಬ ವ್ಯವಸ್ಥೆಯ ಮೇಲೆ ಇದರಿಂದ ಗಂಭೀರ ಪರಿಣಾಮವಾಗುತ್ತಿದೆ. ಕೆಲವು ರಾಜ್ಯಸರಕಾರಗಳು ಲವ್‌ ಜಿಹಾದ್‘ ವಿರೋಧದ ಕಾಯಿದೆಯನ್ನು ಮಾಡಿದೆ ‘ಲವ್‌ ಜಿಹಾದ್‌ ಅಸ್ತಿತ್ವದಲ್ಲಿ ಇಲ್ಲ’, ಎಂದು ಹೇಳುವವರು ಲವ್‌ ಜಿಹಾದ್‌ನ ಕಾಯಿದೆಯನ್ನು ಯಾಕೆ ವಿರೋಧಿಸುತ್ತಿದ್ದಾರೆ ?