‘ಲವ್ ಜಿಹಾದ್’ನ ವಾಸ್ತವ : ಪ್ರೇಮದ ಆಮಿಷದಿಂದ ಶ್ರದ್ಧಾಳನ್ನು ತುಂಡರಿಸುವವರೆಗೆ

ಇಂದು ಭಾರತದ ರಾಜಧಾನಿ ದೆಹಲಿಯಲ್ಲಿ ಆಫ್ತಾಬ್ ಅಮಿನ್ ಪೂನಾವಾಲಾ ತನ್ನ ಪ್ರೇಯಸಿ ಮತ್ತು ಹಿಂದೂ ಯುವತಿ ಶ್ರದ್ಧಾ ವಾಲಕರಳನ್ನು ೩೫ ತುಂಡುಗಳನ್ನಾಗಿ ಕತ್ತರಿಸಿದ ಘಟನೆ ಚರ್ಚೆಯಲ್ಲಿದೆ. ಈ ಘಟನೆಯಿಂದ ದೇಶದಲ್ಲಿ ‘ಲವ್ ಜಿಹಾದ್’ ಚರ್ಚೆ ಪುನಃ ಆರಂಭವಾಯಿತು. ಸಿಟ್ಟಿಗೆದ್ದ ಹಿಂದೂಗಳು ಹಲವೆಡೆ ನಿಷೇಧ ವ್ಯಕ್ತಪಡಿಸಿದರು ಮತ್ತು ಆಂದೋಲನಗಳು ನಡೆಸಿದರು. ಹಾಗೆಯೇ ಮತಾಂತರನಿಷೇಧ ಕಾನೂನು ರೂಪಿಸುವಂತೆ ಬೇಡಿಕೆಯನ್ನಿಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿತ್ತರವಾದ ಸುದ್ದಿಗಳಿಗನುಸಾರ ಆಫ್ತಾಬ್‍ನು ಶ್ರದ್ಧಾ ಅಲ್ಲದೇ ಇತರ ೨೦ ಹಿಂದೂ ಹುಡುಗಿಯರನ್ನೂ ತನ್ನ ಜಾಲದಲ್ಲಿ ಸಿಲುಕಿಸಿರುವ ಘಟನೆ ಬಹಿರಂಗವಾಗಿದೆ. ಅಲ್ಲದೇ, ಶ್ರದ್ಧಾಳ ಶರೀರದ ತುಂಡುಗಳು ಮನೆಯ ಶೀತಕಪಾಟಿನಲ್ಲಿರುವಾಗ (Fridge) ಅವನು ಇತರ ಹುಡುಗಿಯೊಂದಿಗೆ ಸಂಬಂಧವಿಟ್ಟಿದ್ದನು.
ಇದಕ್ಕೆ ಪ್ರೀತಿ ಎನ್ನಬಹುದೇ ? ಅದಕ್ಕೂ ಮುಂದೆ ಹೋಗಿ ಹತ್ಯೆಯ ತನಿಖೆಗಾಗಿ ಮಾಡಿದ ‘ಪಾಲಿಗ್ರಾಫ್’ (ಒಂದು ಯಂತ್ರವನ್ನು ಬಳಸಿ ಶಂಕಿತನು ಸುಳ್ಳು ಹೇಳುತ್ತಿದ್ದರೆ ಸತ್ಯವನ್ನು ತಿಳಿಯಲು ಮಾಡಿದ ಒಂದು ಪರೀಕ್ಷಣೆ) ಪರೀಕ್ಷಣೆಯಲ್ಲಿ ಆಫ್ತಾಬ್‍ನು, ”ಶ್ರದ್ಧಾಳ ಬರ್ಬರ ಹತ್ಯೆಯ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನಗೆ ಗಲ್ಲುಶಿಕ್ಷೆಯಾದರೂ, ಜನ್ನತದಲ್ಲಿ (ಸ್ವರ್ಗದಲ್ಲಿ) ಹುರೆಂ (ಸುಂದರ ಯುವತಿ) ಸಿಗುವರು’’ ಎಂದು ಹೇಳಿದನು. ಈ ಕೊಲೆಗಡುಕರಿಗೆ ಮತ್ತು ಜಿಹಾದಿಗಳಿಗೆ ಜನ್ನತ್‍ಗೆ (ಸ್ವರ್ಗಕ್ಕೆ) ಹೋಗುವ ಬಗ್ಗೆ ಭರವಸೆಯನ್ನು ಯಾರು ನೀಡುತ್ತಾರೆ ? ಆಫ್ತಾಬ್‍ನ ಜಿಹಾದಿ ಮನಸ್ಥಿತಿಯು ೨೬/೧೧ ರ ಮುಂಬಯಿ ದಾಳಿಯಲ್ಲಿ ಶಿಕ್ಷೆಗೊಳಗಾದ ಭಯೋತ್ಪಾದಕ ಕಸಾಬ್‍ನ ಮನಸ್ಥಿತಿಗಿಂತ ಭಿನ್ನವಾಗಿದೆಯೇ ?

ಶ್ರದ್ಧಾಳ ಹತ್ಯೆ ಇದೊಂದೇ ಪ್ರಕರಣವಲ್ಲ. ಅದಕ್ಕೂ ಮೊದಲು ಮತ್ತು ನಂತರವೂ ನಿಧಿ ಗುಪ್ತಾ, ಅಂಕಿತಾ ಸಿಂಹ, ನಿಕಿತಾ ತೋಮರ್, ಕಾಜಲ್, ಮಾನಸಿ ದೀಕ್ಷಿತ, ತನಿಷ್ಕಾ ಶರ್ಮಾ, ಖುಶಿ ಪರಿಹಾರ, ವರ್ಷಾ ಚೌಹಾನ್, ಹಿನಾ ತಲರೆಜಾ ಮುಂತಾದ ಹಿಂದೂ ಯುವತಿಯರ ಮೇಲೆಯೂ ಇದೇ ರೀತಿಯ ದೌರ್ಜನ್ಯ ನಡೆದಿದೆ. ಅನೇಕ ಹುಡುಗಿಯರ ಮೃತದೇಹಗಳು ಮುಚ್ಚಿದ ಸೂಟಕೇಸ್‍ಗಳಲ್ಲಿ ದೊರಕಿವೆ. ಆದರೂ ದೇಶದ ಜಾತ್ಯತೀತವಾದಿಗಳ ಅಭಿಪ್ರಾಯದಲ್ಲಿ ಇದು ‘ಲವ್ ಜಿಹಾದ್’ ಅಲ್ಲದಿದ್ದರೆ ಮತ್ತೇನಿದೆ ? ಎಂಬ ಬಗ್ಗೆ ತಿಳಿದುಕೊಳ್ಳೋಣ.

೧. ಜಿಹಾದ್‍ನಿಂದ ಲವ್ ಜಿಹಾದ್ ಮತ್ತು ಅದಕ್ಕಾಗಿ ಮಾಡಲಾಗುವ ಒಳಸಂಚುಗಳು

ಜಿಹಾದಿಗಳಿಗನುಸಾರ ಸಂಪೂರ್ಣ ಜಗತ್ತಿನಲ್ಲಿ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸುವುದು, ಅಂದರೆ ಸಂಪೂರ್ಣ ಜಗತ್ತನ್ನು ‘ದಾರ-ಉಲ್-ಹರಬ್’ (ಎಲ್ಲಿ ಇಸ್ಲಾಮಿಕ್ ಆಡಳಿತ ನಡೆಯುವುದಿಲ್ಲವೋ, ಅಂತಹ ಪ್ರದೇಶ) ಭೂಮಿಯನ್ನು ‘ದಾರ-ಉಲ್- ಇಸ್ಲಾಮ್’ (ಎಲ್ಲಿ ಇಸ್ಲಾಮಿಕ್ ಆಡಳಿತವು ನಡೆಯುತ್ತದೆಯೋ, ಅಂತಹ ಪ್ರದೇಶ) ಮಾಡುವುದು, ಇದು ಅವರ ಧಾರ್ಮಿಕ ಕರ್ತವ್ಯವಾಗಿದೆ. ಎಲ್ಲಿಯವರೆಗೆ ಜಗತ್ತಿನ ಕೊನೆಯ ವ್ಯಕ್ತಿ ಇಸ್ಲಾಮ್ ಸ್ವೀಕರಿಸುವುದಿಲ್ಲವೋ, ಅಲ್ಲಿಯವರೆಗೆ ಅವರ ಸಂಘರ್ಷ, ‘ಜಿಹಾದ್’ ಮುಂದುವರಿಯುವುದು. ಇದೇ ಜಿಹಾದ್‍ನ ಮಾರ್ಗದಲ್ಲಿ ಹುತಾತ್ಮರಾಗುವುದು ಸರ್ವೋಚ್ಚವೆಂದು ತಿಳಿಯಲಾಗುತ್ತದೆ. ಈ ಜಿಹಾದ್‍ನ ಧ್ಯೇಯಪ್ರಾಪ್ತಿಗಾಗಿ ವಿವಿಧ ಮಾರ್ಗಗಳನ್ನು ಅನುಸರಿಸಲಾಗುತ್ತಿವೆ. ಇಸ್ಲಾಮಿ ದಾಳಿಕೋರರು ಭಾರತದ ಮೇಲೆ ದಾಳಿ ಮಾಡುವುದು, ದೇವಸ್ಥಾನಗಳನ್ನು ಒಡೆದು ಹಾಕುವುದು, ದೋಚುವುದು, ಪುರುಷರನ್ನು ಕೊಂದು ಹಾಕುವುದು, ಮಹಿಳೆ ಮತ್ತು ಮಕ್ಕಳನ್ನು ವಶಪಡಿಸಿಕೊಂಡು ಅವರನ್ನು ಮಾರುಕಟ್ಟೆಯಲ್ಲಿ ಗುಲಾಮರೆಂದು ಮಾರಾಟ ಮಾಡುವುದು ಅಥವಾ ಅವರನ್ನು ‘ಹರಮ್’ನಲ್ಲಿ (ಬಹಿಷ್ಕೃತ ಪ್ರದೇಶಗಳಲ್ಲಿ) ನೂಕುವುದು, ಸೂಫಿಗಳಿಂದ ಇಸ್ಲಾಮ್‍ನ ಪ್ರಚಾರ ಮಾಡುವುದು, ಮೋಸ, ವಂಚನೆ ಮಾಡಿ ಯುದ್ಧ ಮಾಡುವುದು, ಇಸ್ಲಾಮ್‍ನಲ್ಲಿ ಮತಾಂತರಗೊಳ್ಳಲು ಆಮಿಷ ತೋರಿಸುವುದು, ಜನಸಂಖ್ಯೆಯನ್ನು ಹೆಚ್ಚಿಸುವುದು, ಭಯೋತ್ಪಾದಕ ದಾಳಿ ನಡೆಸಿ ಸರಕಾರದ ವಿರುದ್ಧ ಯುದ್ಧ ಸಾರುವುದು, ಇವೆಲ್ಲ ಜಿಹಾದ್‍ನ ಚಿರಪರಿಚಿತ ಮಾರ್ಗಗಳಾಗಿವೆ.

ಶ್ರೀ. ರಮೇಶ ಶಿಂದೆ

‘ಪಿ.ಎಫ್.ಐ.’ನ (‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ) ‘ವಿಶನ್-೨೦೪೭ ಡಾಕ್ಯುಮೆಂಟ್’ (೨೦೪೭ ರವರೆಗೆ ಭಾರತವನ್ನು ಇಸ್ಲಾಮಿ ದೇಶವನ್ನಾಗಿಸಲು ಮಾಡಲಾದ ಷಡ್ಯಂತ್ರ) ಇದರದ್ದೇ ಭಾಗವಾಗಿದೆ. ಇದರಲ್ಲಿಯೇ ಔತಣ ನೀಡುವುದು, ಅಂದರೆ ಯಾರಿಗೆ ‘ಇಸ್ಲಾಮ್ ಸ್ವೀಕರಿಸಲು ಆಮಂತ್ರಣ’ವೆಂದು ತಿಳಿಯಲಾಗುತ್ತದೆ, ಇದು ಸಹ ಬರುತ್ತದೆ. ಇದೇ ಔತಣದ ಒಂದು ಭಾಗವಾಗಿದೆ ‘ಲವ್ ಜಿಹಾದ್ !’ ‘ಲವ್ ಜಿಹಾದ್’ನಲ್ಲಿ ಪ್ರೀತಿಯ ಸಹಜ ಸುಲಭ ಭಾವನೆಗಳ ಬಳಸಲಾಗುತ್ತದೆ. ಇದಕ್ಕಾಗಿ ಯುವಾವಸ್ಥೆಯಲ್ಲಿ ಮೂಡುವ ಭಾವನೆಗಳ ಮತ್ತು ಶಾರೀರಿಕ ಆಕರ್ಷಣೆಯನ್ನು ಬಳಸಲಾಗುತ್ತದೆ. ಮೀನುಗಳನ್ನು ಹಿಡಿಯಲು ಕೊಕ್ಕೆಗೆ ಆಹಾರವನ್ನು ಸಿಕ್ಕಿಸುವಂತೆಯೇ ಮುಸಲ್ಮಾನ ಯುವಕರು ಶಾಲೆ, ಮಹಾವಿದ್ಯಾಲಯಗಳು ಇತ್ಯಾದಿಗಳ ಹೊರಗೆ ಅಲಂಕೃತಗೊಂಡು ದುಬಾರಿ ವಾಹನಗಳಲ್ಲಿ ಬಂದು ಹಿಂದೂ ಯುವತಿಯರನ್ನು ಪ್ರಭಾವಿತಗೊಳಿಸಿ ಅವರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ಈ ಲವ್ ಜಿಹಾದ್‍ನ ಷಡ್ಯಂತ್ರದಿಂದಾಗಿ ಅಜ್ಞಾತ, ಮುಗ್ಧ, ಆಧುನಿಕ ಮತ್ತು ಪಾಶ್ಚಾತ್ಯ ಪ್ರಭಾವವಿರುವ ಹಿಂದೂ ಹುಡುಗಿಯರು ಅವರ ಜಾಲದಲ್ಲಿ ಸಹಜವಾಗಿ ಸಿಲುಕುತ್ತಾರೆ. ಅನೇಕ ಬಾರಿ ಮುಸಲ್ಮಾನ ಯುವತಿಯರನ್ನೂ ಮಾಧ್ಯಮವೆಂದು ಬಳಸಲಾಗುತ್ತದೆ. ಮುಸಲ್ಮಾನ ಯುವತಿಯರು ಹಿಂದೂ ಸ್ನೇಹಿತೆಯರಿಗೆ ಮುಸಲ್ಮಾನ ಹುಡುಗರನ್ನು ಪರಿಚಯಿಸುವ ಕೆಲಸ ಮಾಡುತ್ತಾರೆ. ಮೊಬೈಲ್ ರಿಚಾರ್ಜ್ ಸೆಂಟರ್, ಕಲಿಕಾಶಿಕ್ಷಣವರ್ಗ ಮತ್ತು ಆಧುನಿಕ ಜಿಮ್ (ವ್ಯಾಯಾಮ) ಪ್ರಶಿಕ್ಷಣವರ್ಗ ಇವುಗಳ ಮಾಧ್ಯಮದಿಂದ ಹಿಂದೂ ಯುವತಿಯರ ಸಂಚಾರವಾಣಿ ಕ್ರಮಾಂಕಗಳನ್ನು ಮುಸಲ್ಮಾನ ಯುವಕರಿಗೆ ಕೊಡಲಾಗುತ್ತದೆ ಮತ್ತು ಅವರೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸಲಾಗುತ್ತದೆ. ನವೆಂಬರ್ ೨೦೨೨ ರಲ್ಲಿ ಮಂಗಳೂರಿನಲ್ಲಿ ಸರಿತಾ ಎಂಬ ಹಿಂದೂ ಹುಡುಗಿ ಖಲೀಲ್‍ನ ಅಂಗಡಿಯಲ್ಲಿ ಸಂಚಾರವಾಣಿಯನ್ನು ರಿಚಾರ್ಜ್ ಮಾಡಿಸಲು ಹೋಗುತ್ತಿದ್ದಳು. ಖಲೀಲ್ ಅವಳೊಂದಿಗೆ ಸ್ನೇಹ ಬೆಳೆಸಿ ಅವಳಿಗೆ ಒಳ್ಳೆಯ ನೌಕರಿ ಕೊಡಿಸುವ ಆಮಿಷವೊಡ್ಡಿದನು ಮತ್ತು ಅವಳನ್ನು ಮತಾಂತರಿಸಿ ಸರಿತಾಳಿಂದ ಆಯೇಶಾ ಮಾಡಿದನು. ಅನಂತರ ಅವಳನ್ನು ಪೀಡಿಸತೊಡಗಿದನು. ಈ ಪ್ರಕರಣದಲ್ಲಿ ಸರಿತಾ ಪೊಲೀಸರಲ್ಲಿ ದೂರು ದಾಖಲಿಸಿದಳು. ಅನಂತರ ಪೊಲೀಸರು ಓರ್ವ ಮಹಿಳಾ ಡಾಕ್ಟರ್ ಸಹಿತ ೩ ಜನರನ್ನು ಬಂಧಿಸಿದ್ದಾರೆ. ಇಲ್ಲಿ ಹಿಂದೂಗಳಲ್ಲಿ ಅಜ್ಞಾನವಿದೆ. ಆದರೆ ಈ ಬಗ್ಗೆ ಮುಸಲ್ಮಾನ ಸಮಾಜ ಜಾಗೃತವಿದೆ. ೨೦೧೪ ರಲ್ಲಿ ಮುಸಲ್ಮಾನರ ‘ವಾಟ್ಸ್‍ಆಪ್’ ಗುಂಪಿನಲ್ಲಿ ‘ಮಿಮ್ ಟು ಮಿಮ್’ (ಮುಸಲ್ಮಾನರಿಂದ ಮುಸಲ್ಮಾನರ ವರೆಗೆ) ಈ ಸಂದೇಶವನ್ನು ಮುಸಲ್ಮಾನ ಯುವತಿಯರು ಕೇವಲ ಮುಸಲ್ಮಾನರ ಅಂಗಡಿಗಳಲ್ಲಿಯೇ ಸಂಚಾರವಾಣಿ ರಿಚಾರ್ಜ್ ಮಾಡಲು ಜಾಗರೂಕ ಮಾಡಲು ಕಳುಹಿಸಲಾಗುತ್ತಿತ್ತು.

೨. ಪ್ರೀತಿ ಮತ್ತು ಜಿಹಾದ್ ನಡುವೆ ವ್ಯತ್ಯಾಸವಿದೆ

ಪ್ರೀತಿಯು ತ್ಯಾಗ ಮತ್ತು ಪಾವಿತ್ರ್ಯದ ಭಾವನೆಯಾಗಿರುತ್ತದೆ. ಪ್ರೀತಿಯಲ್ಲಿ ಪರಸ್ಪರರ ಬಗ್ಗೆ ಸತ್ಯತೆ ಮತ್ತು ವಿಶ್ವಾಸದ ಸಂಬಂಧವಿರುವುದು ಆವಶ್ಯಕವಾಗಿರುತ್ತದೆ; ಆದರೆ ಮುಸಲ್ಮಾನ ಯುವಕರು ತಮ್ಮ ಅಬ್ದುಲ್, ಸಲೀಮ್, ಸಲ್ಮಾನ ಇಂತಹ ಹೆಸರುಗಳನ್ನು ಮುಚ್ಚಿಟ್ಟು ಹಿಂದೂ ಹುಡುಗಿಯರೊಂದಿಗೆ ಹಿಂದೂ ಹೆಸರಿನಿಂದ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಅವರು ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಂಡು ತಮ್ಮನ್ನು ಹಿಂದೂ ಎಂದು ತೋರಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಮನಸ್ಸಿನಲ್ಲಿ ಪ್ರೀತಿಯ ನಿಜವಾದ ಭಾವನೆ ಇದ್ದಿದ್ದರೆ ತಮ್ಮ ನಿಜವಾದ ಹೆಸರನ್ನು ಮುಚ್ಚಿಟ್ಟು ಹಿಂದೂಗಳ ಹೆಸರನ್ನು ಏಕೆ ಇಟ್ಟುಕೊಳ್ಳಬೇಕು ? ಎಲ್ಲಿ ಸ್ನೇಹವು ಸುಳ್ಳು ಮತ್ತು ಮೋಸದಿಂದ ಆರಂಭವಾಗುತ್ತದೆಯೋ ಅಲ್ಲಿ ಪ್ರೀತಿಯ ಭಾವನೆ ಇರಲು ಹೇಗೆ ಸಾಧ್ಯ ? ಅನೇಕ ಪ್ರಕರಣಗಳಲ್ಲಿ, ಹೆಚ್ಚಿನ ಮತಾಂಧರು ಮೊದಲೇ ವಿವಾಹಿತರಿರುತ್ತಾರೆ. ಅವರಿಗೆ ೧-೨ ಮಕ್ಕಳೂ ಇರುತ್ತವೆ ಎಂಬುದು ಗಮನಕ್ಕೆ ಬರುತ್ತದೆ. ಆದರೆ ಇಸ್ಲಾಮ್‍ನಲ್ಲಿರುವ ೪ ಮದುವೆ ಮಾಡಿಕೊಳ್ಳುವ ಸೌಲಭ್ಯದಡಿ ಓರ್ವ ಹಿಂದೂ ಯುವತಿಯ ಜೀವನವನ್ನು ಹಾಳು ಮಾಡಲಾಗುತ್ತದೆ. ಇದಕ್ಕೆ ಪ್ರೀತಿ ಎಂದು ಕರೆಯಬಹುದೇ ? ಇಬ್ಬರ ಮನಸ್ಸಿನಲ್ಲಿಯೂ ನಿಜವಾದ ಪ್ರೀತಿ ಇದ್ದರೆ, ಇಬ್ಬರೂ ತಮ್ಮ ತಮ್ಮ ಧರ್ಮದ ಆಚರಣೆಯನ್ನು ಒಟ್ಟಿಗೆ ಮಾಡಬಹುದು; ಆದರೆ ಹೀಗಾಗದೇ ಹಿಂದೂ ಯುವತಿಯನ್ನು ಮತಾಂತರವಾಗಲು ಏಕೆ ಒತ್ತಾಯಿಸಲಾಗುತ್ತದೆ. ಅದ್ಯಾವ ಕಾರಣದಿಂದ ಆ ಯುವತಿಗೆ ತನ್ನ ಮೂಲ ಧರ್ಮವನ್ನು ಬಿಟ್ಟು ಇಸ್ಲಾಮ್ ಸ್ವೀಕರಿಸಲು ಹೇಳಲಾಗುತ್ತದೆ ? ಅವಳಿಗೆ ಬುರಖಾ ಧರಿಸಲು ಮತ್ತು ಗೋಮಾಂಸ ತಿನ್ನಲು ಏಕೆ ಒತ್ತಾಯಿಸಲಾಗುತ್ತದೆ? ಅವಳ ವೈಯಕ್ತಿಕ ಸ್ವಾತಂತ್ರ್ಯವನ್ನು ಏಕೆ ಗೌರವಿಸಲಾಗುವುದಿಲ್ಲ ? ಪ್ರತಿಯೊಂದು ವಿಷಯದಲ್ಲಿ ಇಸ್ಲಾಂಗನುಸಾರವಾಗಬೇಕೆಂದು ಒತ್ತಾಯಿಸುವುದು ಮತ್ತು ಅದಕ್ಕಾಗಿ ಅತ್ಯಾಚಾರ ಮಾಡುವುದು ಪ್ರೀತಿಯಲ್ಲ ಅದು ಜಿಹಾದ್ ಆಗಿದೆ. ಅದೇ ರೀತಿ ‘ಟಿಂಡರ್’ ಮತ್ತು ‘ಬಂಬಲ್’ ನಂತಹ ‘ಆನ್‍ಲೈನ್ ಡೆಟಿಂಗ್ ಆ್ಯಪ್’ಗಳಲ್ಲಿನ ಹುಡುಕಾಟಗಳು ನಿಜವಾದ ಪ್ರೀತಿಯ ಭಾವನೆಯಿಂದ ಆಗುವ ಸಾಧ್ಯತೆ ಕಡಿಮೆಯೇ ಇರುತ್ತದೆ. ಈ ‘ಆ್ಯಪ್ಸ್’ಗಳಲ್ಲಿ ಸುಳ್ಳು ‘ಪ್ರೊಫೈಲ್’ ತಯಾರಿಸಿ ಮತ್ತು ನಕಲಿ ಛಾಯಾಚಿತ್ರವನ್ನು ಇರಿಸಿ ವಾಸನಾಶಮನದ ಉದ್ದೇಶದಿಂದ ಹುಡುಕಾಡುವವರಿಂದ ಪ್ರೀತಿಯನ್ನು ನಿರೀಕ್ಷಿಸಬಹುದೇ ?

೩. ‘ನನ್ನ ಅಬ್ದುಲ್ ಹಾಗಿಲ್ಲ’, ಎಂಬ ಹಿಂದೂ ಯುವತಿಯರ ಮಾನಸಿಕತೆ ಅಪಾಯಕಾರಿ !

ಭಾರತದಲ್ಲಿ ಜಿಹಾದಿ ಭಯೋತ್ಪಾದನೆಯೇನು ಹೊಸತಲ್ಲ. ಶ್ರದ್ಧಾ ವಾಲಕರಳ ಹತ್ಯೆಯು ಮೊದಲ ಘಟನೆಯಲ್ಲ. ಇದಕ್ಕೂ ಮೊದಲು ಇಂತಹ ಅನೇಕ ಉದಾಹರಣೆಗಳು ಭಾರತದಲ್ಲಿ ನಡೆದಿವೆ; ಆದರೆ ಪ್ರತಿ ಬಾರಿ ಹಿಂದೂ ಯುವತಿಯರು ಬುದ್ಧಿಯಿಂದ ವಿಚಾರ ಮಾಡದೇ, ತಮ್ಮ ಸಂಬಂಧಿಕರು ಹೇಳುವುದನ್ನು ಕೇಳದೇ, ಹಾಗೆಯೇ ಇದರ ಹಿಂದಿನ ಷಡ್ಯಂತ್ರವನ್ನು ತಿಳಿದುಕೊಳ್ಳದೇ ಭಾವನೆಯಲ್ಲಿ ತೇಲಿ ಹೋಗುತ್ತಾರೆ. ಅವಳ ಅಭಿಪ್ರಾಯಕ್ಕನುಸಾರ, ‘ಇತರ ಮುಸಲ್ಮಾನರಲ್ಲಿ ಖಂಡಿತವಾಗಿಯೂ ದೋಷಗಳಿರಬಹುದು, ಆದರೆ ನನ್ನ ಅಬ್ದುಲ ಹಾಗಿಲ್ಲ !’ ಎಂದಿರುತ್ತದೆ. ಸಾಕು, ಇದೇ ‘ನನ್ನ ಅಬ್ದುಲ್’ನ ವಾಸ್ತವಿಕತೆ ಬಯಲಿಗೆ ಬರುವವರೆಗೆ ಅವಳು ಎಷ್ಟು ಮೋಸ ಹೋಗುತ್ತಾಳೆ ಎಂದರೆ, ಯಾವಾಗ ಅಬ್ದುಲ ಅವಳ ಖಾಸಗಿ ಕ್ಷಣಗಳ ಚಿತ್ರಣವನ್ನು ಮಾಡುವನೋ, ಆಗಲೇ ಅವನ ವಾಸ್ತವಿಕ ಸ್ವರೂಪವು ಗೊತ್ತಾಗುತ್ತದೆ; ಆದರೆ ಸಮಯ ಕಳೆದು ಹೋದುದರಿಂದ ಸತ್ಯವು ಬಯಲಿಗೆ ಬಂದಿದ್ದರೂ ಅವಳಿಗೆ ಅವನ ಜಾಲದಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ.

೪. ಹಿಂದೂ ಯುವತಿಯರ ಮೇಲೆ ಹಿಂದಿ ಚಲನಚಿತ್ರೋದ್ಯಮದ ಪ್ರಭಾವವಿರುವುದು

ಇಂದು ಜೀವನದಲ್ಲಿ ವಾಸ್ತವಕ್ಕಿಂತ ತೋರಿಕೆಗೆ ಬಹಳ ಮಹತ್ವವಿದೆ. ಆದುದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಬಲಿದಾನ ನೀಡುವ ರಾಷ್ಟ್ರಪುರುಷರಿಗಿಂತ ಚಲನಚಿತ್ರದ ನಟ-ನಟಿಯರಿಗೆ ಹೆಚ್ಚು ಮಹತ್ವ ಸಿಗುತ್ತಿದೆ. ಅವರ ದುಬಾರಿ ಹವ್ಯಾಸಗಳು, ವಾಹನಗಳು, ಫ್ಯಾಶನ್, ಗಾಸಿಪ್ (ಚರ್ಚೆ), ‘ಲಿವ್ ಇನ್ ರಿಲೇಶನ್‍ಶಿಪ್’ (ವಿವಾಹ ಮಾಡಿಕೊಳ್ಳದೇ ಯುವಕ-ಯುವತಿಯರು ಒಟ್ಟಿಗಿರುವುದು) ಇವೆಲ್ಲವುಗಳ ಪ್ರಭಾವ ಯುವ ಪೀಳಿಗೆಯ ಮೇಲೆ ಹೆಚ್ಚಿದೆ. ಬಾಲಿವುಡ್‍ನ ಕೆಲವು ಜನರು ಈ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಸಾಮಾನ್ಯ ಕುಟುಂಬದ ಹುಡುಗಿಯರ ಮೇಲೆಯೂ ಇದರ ಪರಿಣಾಮವಾಗುತ್ತದೆ ಮತ್ತು ಅವರಿಗೆ ಆ ನಟನಟಿಯರಂತೆ ಜೀವನವನ್ನು ನಡೆಸಬೇಕೆಂದು ಅನಿಸುತ್ತದೆ. ಅದರ ಲಾಭವನ್ನು ಈ ಲವ್ ಜಿಹಾದಿಗಳು ಪಡೆಯುತ್ತಾರೆ. ಅನಂತರ ದೊಡ್ಡ ದೊಡ್ಡ ಕನಸುಗಳನ್ನು ತೋರಿಸಿ ಅವರನ್ನು ಜಾಲದಲ್ಲಿ ಸೆಳೆಯಲಾಗುತ್ತದೆ. ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿ ೧-೨ ವರ್ಷ ಒಟ್ಟಿಗಿದ್ದು ಅವಳಿಂದ ಶಾರೀರಿಕ ವಾಸನೆಯು ಶಮನಗೊಂಡ ನಂತರ ಮತ್ತು ಇಬ್ಬರಲ್ಲಿ ವಾದಗಳು ಆರಂಭವಾದ ನಂತರ ಅವನು ಅದೇ ಪ್ರೇಯಸಿಯನ್ನು ಅಡಚಣೆ ಎಂದು ತಿಳಿಯತೊಡಗುತ್ತಾನೆ. ಅನಂತರ ಒಂದು ದಿನ ಅವಳನ್ನು ಕೊಲ್ಲಲು ನಿಶ್ಚಿಯಿಸುತ್ತಾನೆ. ಲಿವ್ ಇನ್ ರಿಲಶನ್‍ಶಿಪ್‍ನ ಶಾರೀರಿಕ ಸಂಬಂಧಗಳ ಸಂಕಲ್ಪನೆಯಲ್ಲಿ ವಿವಾಹದ ಯಾವುದೇ ಸಂಸ್ಕಾರ ಮತ್ತು ಬಂಧನಗಳಿರುವುದಿಲ್ಲ. ಇದನ್ನು ಹಿಂದೂ ಹುಡುಗಿಯರು ತಿಳಿದುಕೊಳ್ಳುವುದಿಲ್ಲ ಮತ್ತು ನಂತರ ತಮ್ಮ ಜೀವನವನ್ನು ನಾಶಮಾಡಿಕೊಳ್ಳುತ್ತಾರೆ.

೫. ಲವ್ ಜಿಹಾದಿಗಳಿಗೆ ಹಿಂದೂ ಯುವತಿಯರು ಎಂದರೆ ‘ಮಾಲ್-ಎ-ಗನಿಮತ್ (ಲೂಟಿ ಮಾಡಿದ ಸಂಪತ್ತು)’ !

ಮಧ್ಯಯುಗದ ಕಾಲಾವಧಿಯಲ್ಲಿ ಯಾವಾಗೆಲ್ಲ ಭಾರತದ ಮೇಲೆ ಬಿನ್ ಕಾಸಿಮ್, ಘೋರಿ, ಗಝನಿ, ಖಿಲಜಿ, ಬಾಬರ್ ಮುಂತಾದ ಇಸ್ಲಾಮಿ ದಾಳಿಕೋರರು ದಾಳಿ ಮಾಡಿದರೋ, ಆಗ ಪ್ರತಿಯೊಂದು ನಗರದಲ್ಲಿ ಅವರು ಲೂಟಿ ಮಾಡುವುದರೊಂದಿಗೆ ಕಾಫಿರ್ ಎಂದು ತಿಳಿಯುವ ಹಿಂದೂ ಮಹಿಳೆಯರ ಮೇಲೆ ಕಲ್ಪನೆಗೂ ಮೀರಿದಷ್ಟು ಕ್ರೌರ್ಯ ತೋರಿಸಿದರು. ಈ ಸಾಮೂಹಿಕ ದುಷ್ಕೃತ್ಯಗಳಿಗೇ ‘ಮಾಲ್-ಎ-ಗನಿಮತ್’, ಅಂದರೆ ಲೂಟಿ ಮಾಡಿದ ಸಂಪತ್ತು, ಇದು ಮುಸಲ್ಮಾನರಿಗಾಗಿ ಹಲಾಲ್ ಆಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಹಿಂದೂ ಮಹಿಳೆಯರನ್ನು ಮುಸಲ್ಮಾನರ ಜನಾನಖಾನೆಯಲ್ಲಿ (ಸ್ತ್ರೀಯರಿಗಾಗಿ ಇರುವ ಕೋಣೆ) ‘ಸೆಕ್ಸ್ ಸ್ಲೆವ್’ (ಸಂಭೋಗಕ್ಕಾಗಿ ಗುಲಾಮರು) ರೆಂದು ಭರ್ತಿ ಮಾಡಲಾಗುತ್ತಿತ್ತು ಅಥವಾ ಗುಲಾಮರ ಮಾರುಕಟ್ಟೆಗಳಲ್ಲಿ ಅವರನ್ನು ಮಾರಾಟ ಮಾಡಲಾಗುತ್ತಿತ್ತು. ಅಫ್ಘಾನಿಸ್ತಾನದ ಗಝನಿಯಲ್ಲಿ ಹಿಂದೂ ಮಹಿಳೆಯರ ಹರಾಜು ನಡೆದಿತ್ತು, ಆ ಸ್ಥಳದಲ್ಲಿ ‘ದುಖ್ತರೆ ಹಿಂದೋಸ್ತಾನ, ನೀಲಾಮೆಂ ದೊ ದಿನಾರ್’ ಎಂದು ಬರೆದಿದ್ದಾರೆ, ಅಂದರೆ ಈ ಸ್ಥಳದಲ್ಲಿ ಹಿಂದೂಸ್ತಾನಿ ಸ್ತ್ರೀಯರನ್ನು ತಲಾ ಎರಡು ದಿನಾರ್ಗಳಿಗೆ (ಸ್ಥಳೀಯ ಚಲಾವಣೆಯಲ್ಲಿರುವ ನಾಣ್ಯ) ಹರಾಜು ಹಾಕಲಾಗಿತ್ತು.

೧೯೪೭ ರಲ್ಲಿ ಭಾರತದ ವಿಭಜನೆಯ ಸಮಯದ ವಿಷಯವಾಗಿರಲಿ ಅಥವಾ ೧೯೭೧ ರ ಕಾಲಾವಧಿಯ ಬಾಂಗ್ಲಾದೇಶದ ಯುದ್ಧಕಾಲವಾಗಿರಲಿ, ಆ ಸಮಯದಲ್ಲಿ ಲಕ್ಷಾಂತರ ಹಿಂದೂ ಮಹಿಳೆಯರ ಮೇಲೆ ಅದೇ ಮರುಭೂಮಿಯ ಮನಸ್ಥಿತಿಯ ದಬ್ಬಾಳಿಕೆಯ ಅನೇಕ ಪ್ರಸಂಗಗಳನ್ನು ಇಂದಿಗೂ ಹೇಳಲಾಗುತ್ತದೆ. ಇಂದಿಗೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂ ಮಹಿಳೆ ಮತ್ತು ಹುಡುಗಿಯರೊಂದಿಗೆ ಅಮಾನುಷವಾಗಿ ವರ್ತಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ೧೯೯೦ ರಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಸ್ಥಳಾಂತರಗೊಳ್ಳಲು ಬಲವಂತ ಮಾಡಲಾಯಿತು. ಆ ಸಮಯದಲ್ಲಿ ಮತಾಂಧರ, ‘ಆಸಿ ಗುಚ್ಚ ಪನುನ್ಯು ಪಾಕಿಸ್ತಾನ ಬಟಾವ ರೊಸ್ತುಯ ಬಟೆನಿಯನ್ ಸಾನ್’, ಎಂಬ ಘೋಷಣೆ ಇತ್ತು, ಅಂದರೆ ‘ನಮಗೆ ಕಾಶ್ಮೀರಿ ಪಂಡಿತರನ್ನು ಹೊರತುಪಡಿಸಿ ಆದರೆ ಪಂಡಿತ ಮಹಿಳೆಯರ ಸಹಿತ ನಮ್ಮ ಪಾಕಿಸ್ತಾನ ಬೇಕಿದೆ !’
ಇಂದು ಇಸ್ಲಾಮಿಕ್ ಸ್ಟೇಟ್‍ನ ಭಯೋತ್ಪಾದಕರು ಯಹೂದಿ ಮಹಿಳೆಯರ ಮೇಲೆ ಎಸಗಿದ ಕ್ರೂರ ದೌರ್ಜನ್ಯಗಳ ಸಾಕ್ಷಿ ಲಭ್ಯವಿವೆ. ಅವರ ೧ ಸಾವಿರದ ೪೦೦ ವರ್ಷಗಳಿಂದ ಇದೇ ಮಾನಸಿಕತೆ ಇದೆ ಎಂದಾದರೆ ಅವರು ಓರ್ವ ಕಾಫಿರ್ (ಹಿಂದೂ) ಹುಡುಗಿಯನ್ನು ಹೇಗೆ ಪ್ರೀತಿಸಬಹುದು ? ಅವರಿಗೆ ಕಾಫಿರ್ ಮಿತ್ರನೊಂದಿಗೂ ಸ್ನೇಹ ಬೆಳೆಸಲು ನಿರ್ಬಂಧವಿದೆ, ಹೀಗಿರುವಾಗ ಪ್ರೀತಿಸುವುದು ದೂರದ ಮಾತಾಗಿದೆ. ಒಂದೆಡೆಗೆ
ಅವರು ಅವಳನ್ನು ಸೆಕ್ಸ್ ಸ್ಲೆವ್ ಎಂದು ತಿಳಿಯುತ್ತಾರೆ ಅಥವಾ ಇಸ್ಲಾಮ್‍ಗಾಗಿ ಮಕ್ಕಳನ್ನು ಹೆರುವ ಯಂತ್ರ ! ‘ಲವ್ ಜಿಹಾದ್’ನ ಅನೇಕ ಘಟನೆಗಳಲ್ಲಿ ಆ ಹಿಂದೂ ಹುಡುಗಿಯ ಮೇಲೆ ಅವಳ ಕುಟುಂಬದ ಎಲ್ಲ ಪುರುಷರಿಂದ ಅತ್ಯಾಚಾರವಾದ ಘಟನೆಗಳು ಬೆಳಕಿಗೆ ಬರುತ್ತವೆ, ಇದು ಅದರದ್ದೇ ಪರಿಣಾಮವಾಗಿದೆ. ಕಳೆದ ವಾರದಲ್ಲಿ ೨ ಡಿಸೆಂಬರ್ ೨೦೨೨ ಈ ದಿನದಂದು ಮಹಾರಾಷ್ಟ್ರದ ಧುಳೆಯಲ್ಲಿ ಓರ್ವ ಹಿಂದೂ ಮಹಿಳೆಯೊಂದಿಗೆ ಅರ್ಶದ ಮಲಿಕ್ ಎಂಬ ಮತಾಂಧ ಯುವಕನು ಮದುವೆಯಾದನು. ಅನಂತರ ಅವನ ತಂದೆ ಸಲೀಮ್ ಮಲಿಕ ಸಹ ಆ ಮಹಿಳೆಯ ಮೇಲೆ ಬಲವಂತವಾಗಿ ಅನೈಸರ್ಗಿಕ ಅತ್ಯಾಚಾರ ಮಾಡುತ್ತಿದ್ದನು. ಆ ಮಹಿಳೆಯು ವಿರೋಧಿಸಿದಾಗ, ಅವರೆಲ್ಲರೂ ಅವಳನ್ನು ೭೦ ತುಂಡುಗಳನ್ನಾಗಿ ಮಾಡುವುದಾಗಿ ಬೆದರಿಕೆ ನೀಡಿದರು.’

(ಮುಂದುವರಿಯುವುದು)

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ. (೫.೧೨.೨೦೨೨)