ಜಿಜ್ಞಾಸುವಿನ ಪ್ರಶ್ನೆ
ಪ್ರಶ್ನೆ : ಸಂತರು ದೇಹತ್ಯಾಗ ಮಾಡಿದ ನಂತರ ಅವರ ದೇಹದ ದಹನ ಮಾಡದಿದ್ದರೆ ಒಳ್ಳೆಯದಾಗುವುದು; ಏಕೆಂದರೆ ಅವರ ದೇಹದಿಂದ ಮುಂದಿನ ಒಂದು ಸಾವಿರ ವರ್ಷಗಳ ಕಾಲ ವಾತಾವರಣದಲ್ಲಿ ಚೈತನ್ಯವು ಪ್ರಕ್ಷೇಪಿಸುತ್ತದೆ. ಕೆಲವು ಪಂಥಗಳಲ್ಲಿ ಸಂತರ ದೇಹವನ್ನು ಹೂಳುತ್ತಾರೆ. ಆದರೂ ಈ ಬಗ್ಗೆ ನಿರ್ದಿಷ್ಟವಾಗಿ ಶಾಸ್ತ್ರ ಏನು ಹೇಳುತ್ತದೆ ?
ಉತ್ತರ
೧. ಸಂತರು ದೇಹತ್ಯಾಗ ಮಾಡಿದ ನಂತರ ‘ಅವರ ಚೈತನ್ಯ ಪೃಥ್ವಿಯಲ್ಲಿ ಎಷ್ಟು ಕಾಲಉಳಿಯುವುದು?’ ಇದರ ಕಾಲಾವಧಿ ಪ್ರತಿಯೊಬ್ಬ ಸಂತರ ವಿಷಯದಲ್ಲಿ ಭಿನ್ನವಾಗಿರುವುದು
ಜಗತ್ತಿನಲ್ಲಿ ಅನೇಕ ಸಂತರಿದ್ದಾರೆ; ಆದರೆ ಪ್ರತಿಯೊಬ್ಬ ಸಂತರ ಸಾಧನಾಮಾರ್ಗ, ಅವರ ಪೃಥ್ವಿಯಲ್ಲಿನ ಕಾರ್ಯ, ಅವರ ಆಧ್ಯಾತ್ಮಿಕ ಸ್ತರ, ಅವರ ಸಿದ್ಧಿ, ಅವರ ಶಕ್ತಿ ಇತ್ಯಾದಿ ವಿಷಯಗಳಲ್ಲಿ ಬಹಳ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಆದುದರಿಂದ ಕೆಲವು ಸಂತರು ದೇಹತ್ಯಾಗ ಮಾಡಿದಾಗ ಅವರ ಚೈತನ್ಯವು ಪೃಥ್ವಿಯಲ್ಲಿ ಕೆಲವು ವರ್ಷಗಳ ಕಾಲ ಉಳಿಯುತ್ತದೆ ಮತ್ತು ಕೆಲವರ ಚೈತನ್ಯವು ಅದಕ್ಕಿಂತಲೂ ಕಡಿಮೆ ಅಥವಾ ಹೆಚ್ಚು ಕಾಲ ಉಳಿಯುತ್ತದೆ. ಈ ಕಾಲಾವಧಿಯು ಪ್ರತಿಯೊಬ್ಬ ಸಂತರ ವಿಷಯದಲ್ಲಿ ಬೇರೆ ಬೇರೆಯಾಗಿರುತ್ತದೆ. ಎಲ್ಲರಿಗಾಗಿ ಅದು ಒಂದು ಸಾವಿರ ವರ್ಷಗಳಷ್ಟೇ ಇರುತ್ತದೆ ಎಂದೇನಿಲ್ಲ.
೨. ಸಂತರ ದೇಹತ್ಯಾಗದ ನಂತರಾವರ ಅಂತ್ಯಸಂಸ್ಕಾರವನ್ನು ಮಾಡುವ ಪದ್ಧತಿಗಳಲ್ಲಿ ವೈವಿಧ್ಯವಿರುವುದು
‘ಸಂತರು ದೇಹತ್ಯಾಗ ಮಾಡಿದ ನಂತರ ಅವರಾಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ?’, ಇದು ಒಂದೆಂದರೆ ಅವರ ಸಾಧನಾಮಾರ್ಗಕ್ಕನುಸಾರ ಪರಂಪರೆಯಿಂದ ನಿರ್ಧರಿತವಾಗಿರುತ್ತದೆ ಅಥವಾ ದೇಹತ್ಯಾಗದ ಮೊದಲು ಸಂತರು ತಾವಾಗಿಯೇ ಆ ಬಗ್ಗೆ ಮಾರ್ಗದರ್ಶನ ಮಾಡಿರುತ್ತಾರೆ ಅಥವಾ ಅವರ ದೇಹತ್ಯಾಗದ ನಂತರ ಅವರ ಉತ್ತರಾಧಿಕಾರಿ ಅಥವಾ ಶಿಷ್ಯೋತ್ತಮರು ಆ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ. ಇತರ ಯಾರೂ ಈ ಬಗ್ಗೆ ನಿರ್ಣಯಿಸುವುದು ಧರ್ಮಶಾಸ್ತ್ರಕ್ಕನುಸಾರ ಯೋಗ್ಯವಲ್ಲ. ಸಾಮಾನ್ಯವಾಗಿ ಸಂತರ ಅಂತ್ಯಸಂಸ್ಕಾರ ಮುಂದಿನ ಮೂರು ಪ್ರಕಾರಗಳಲ್ಲಿ ಮಾಡಲಾಗುತ್ತದೆ.
ಅ. ದೇಹವನ್ನು ಭೂಮಿಯಲ್ಲಿ ಹೂಳುವುದು
ಆ. ದೇಹವನ್ನು ಹರಿಯುವ ನೀರಿನಲ್ಲಿ ವಿಸರ್ಜಿಸುವುದು
ಇ. ದೇಹವನ್ನು ಅಗ್ನಿಯಲ್ಲಿ ಸಮರ್ಪಿಸುವುದು
ಸಾಮಾನ್ಯವಾಗಿ ಸನ್ಯಾಸಿಗಳ ದೇಹವನ್ನು ಭೂಮಿಯನ್ನು ಹೂಳಲಾಗುತ್ತದೆ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
೩. ‘ಸಂತರ ದೇಹವನ್ನು ಅಗ್ನಿಗೆ ಸಮರ್ಪಿಸಿದರೆ ಅದು ನಾಶವಾಗುತ್ತದೆ ಮತ್ತು ಅದರಿಂದ ಅವರ ಚೈತನ್ಯವೂ ಇಲ್ಲದಂತಾಗುತ್ತದೆ’, ಈ ತಪ್ಪು ತಿಳುವಳಿಕೆ ಇರುವುದು
೩ ಅ. ಸಂತರ ಸ್ಥೂಲದೇಹವು ನಾಶವಾದರೂ ಅವರ ಚೈತನ್ಯ ಮತ್ತು ಶಕ್ತಿಯು ನಾಶವಾಗದಿರುವುದು : ದೇಹತ್ಯಾಗದ ನಂತರ ಸಂತರ ಸ್ಥೂಲದೇಹವನ್ನು ಅಗ್ನಿಗೆ ಸಮರ್ಪಿಸಿದರೆ ಮತ್ತು ಅದು ನಾಶವಾದರೂ, ಅವರ ಚೈತನ್ಯ ಮತ್ತು ಅವರ ಸೂಕ್ಷ್ಮ ಶಕ್ತಿ ನಾಶವಾಗುವುದಿಲ್ಲ. ಸಂತರ ಸಾಧನೆಗನುಸಾರ ವಿಶಿಷ್ಟ ಕಾಲಾವಧಿಯವರೆಗೆ ಈ ಎರಡೂ ವಿಷಯಗಳು ಪೃಥ್ವಿಯಲ್ಲಿರುತ್ತವೆ. ಆದುದರಿಂದಲೇ ಎಷ್ಟೋ ಸಂತರ ದೇಹತ್ಯಾಗದ ನಂತರ ಅವರ ದೇಹವನ್ನು ಅಗ್ನಿಯಲ್ಲಿ ಸಮರ್ಪಿಸಿದರೂ, ಆ ಸಂತರ ಬಗ್ಗೆ ಅವರು ಭಕ್ತರಿಗೆ ಮುಂದಿನ ಎಷ್ಟೋ ವರ್ಷಗಳು ಅನುಭೂತಿ ಬರುತ್ತಿರುತ್ತವೆ.
೩ ಆ. ಸಂತರ ಮೇಲೆ ಯಾವುದೇ ರೀತಿಯ ಅಂತ್ಯಸಂಸ್ಕಾರ ಮಾಡಿದರೂ ಅವರ ಭಕ್ತರಿಗೆ ಆ ಸಂತರ ವಿಷಯದಲ್ಲಿ ಬರುವ ಅನುಭೂತಿಗಳಲ್ಲಿ ಯಾವುದೇ ಬದಲಾವಣೆಯಾಗದಿರುವುದು : ಸಂತರ ದೇಹವನ್ನು ಅಗ್ನಿಯಲ್ಲಿ ಸಮರ್ಪಿಸಿದರೆ, ಭೂಮಿಯಲ್ಲಿ ಹೂಳಿದರೆ ಅಥವಾ ನೀರಿನಲ್ಲಿ ಸಮರ್ಪಿಸಿದರೂ ಆ ಕಾರಣಗಳಿಂದ ಅವರ ವಿಷಯದಲ್ಲಿ ಭಕ್ತರಿಗೆ ಅನುಭೂತಿ ಬರುವ ಕಾಲಾವಧಿಯಲ್ಲಿ ಹೆಚ್ಚಳ ಅಥವಾ ಇಳಿಕೆಯಾಗುವುದಿಲ್ಲ. ಅದರಂತೆ ಅನುಭೂತಿಗಳ ಸ್ತರಗಳಲ್ಲಿಯೂ ಯಾವುದೇ ಬದಲಾವಣೆಯಾಗುವುದಿಲ್ಲ. ಸಂತರು ದೇಹದಲ್ಲಿರುವಾಗ ಅವರ ಭಕ್ತರಿಗೆ ಆ ಸಂತರ ವಿಷಯದಲ್ಲಿ ಯಾವ ರೀತಿಯ ಅನುಭೂತಿ ಬರುತ್ತವೆಯೋ ಅದೇ ಪ್ರವಾಸ ಸಂತರ ದೇಹತ್ಯಾಗದ ನಂತರ ಅವರ ದೇಹವು ಅಗ್ನಿಸಮರ್ಪಿಸಿದ ನಂತರವೂ ಮುಂದುವರಿಯುತ್ತದೆ.
– ಸುಶ್ರೀ (ಕುಮಾರಿ) ಸುಪ್ರಿಯಾ ನವರಂಗೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೧೨.೨೦೨೨)