ಜೋಧಪುರ ಸೆಂಟ್ರಲ್ ಜೈಲಿನಲ್ಲಿ ಜಿಹಾದಿ ಭಯೋತ್ಪಾದಕರಿಂದ ಹಿಂದೂ ಕೈದಿಗಳ ಮೇಲೆ ಅಮಾನುಷವಾಗಿ ಹಲ್ಲೆ

  • ಹಿಂದೂ ಕೈದಿಗಳ ಮೇಲೆ ಮುಸಲ್ಮಾನರಾಗುವಂತೆ ಒತ್ತಡ !

  • ಜೈಲಿನಲ್ಲಿ ಹಿಂದೂವಿರೋಧಿ ಪುಸ್ತಕಗಳ ವಿತರಣೆ !

ಜೋಧಪುರ (ರಾಜಸ್ಥಾನ) – ಸೆಂಟ್ರಲ್ ಜೈಲಿನಲ್ಲಿ ಕೈದಿ ಸುಭಾಷ ವಿಶ್ಣೋಯಿಯು, ತಮ್ಮ ಮೇಲೆ ಮುಸಲ್ಮಾನನಾಗುವಂತೆ ಒತ್ತಡ ಹೇರಲಾಗುತ್ತಿದ್ದು, ಜೈಲಿನಲ್ಲಿ ಹಿಂದೂವಿರೋಧಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿದ್ದಾನೆ. ಈ ಪ್ರಕರಣದಲ್ಲಿ ಸುಭಾಷ ಇವನು ವಖಾರ ಮತ್ತು ಅಶ್ರಫ್ ಸಹಿತ ಇತರ 6 ಜನರ ಮೇಲೆ ಆರೋಪ ಮಾಡಿದ್ದಾನೆ. ಹಾಗೆಯೇ ಅವನ ಮೇಲೆ ಹಲ್ಲೆ ಮಾಡಿದ್ದಾರೆಂದು ಕೂಡ ಹೇಳಿದನು. ಹಲ್ಲೆ ಮಾಡುವ ಈ ಆರೋಪಿ ಜಿಹಾದಿ ಭಯೋತ್ಪಾದಕರಾಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ವಖಾರ ಮತ್ತು ಅಶ್ರಫ್ ಇವರು ಸುಭಾಷನಿಗೆ ಮುಸಲ್ಮಾನ ಆಗುವಂತೆ ಒತ್ತಡ ಹೇರಿದ್ದರಿಂದ ಅವನು ಮಾನಸಿಕ ಒತ್ತಡದಲ್ಲಿದ್ದನು. ಇದೇ ಸಮಯದಲ್ಲಿ ಇವರಿಬ್ಬರೂ ಇನ್ನಿತರರು ಸೇರಿಕೊಂಡು ಸುಭಾಷ ಮೇಲೆ ಹಲ್ಲೆ ಮಾಡಿದರು. ಇದರಲ್ಲಿ ಅವನು ಗಂಭೀರವಾಗಿ ಗಾಯಗೊಂಡನು. ಈ ಕಾರಣದಿಂದ ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಅಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಆಶ್ಚರ್ಯವೇನಿಲ್ಲ !