ರತಾಲಾಮ (ಮಧ್ಯ ಪ್ರದೇಶ) ಇಲ್ಲಿ ಮುಸಲ್ಮಾನರಿಂದ ಅರ್ಚಕರ ಮನೆಗೆ ನುಗ್ಗಿ ಹಲ್ಲೆ !

ದೇವಸ್ಥಾನದ ಮೇಲಿನ ಧ್ವನಿವರ್ಧಕದ ಧ್ವನಿ ಕಡಿಮೆ ಮಾಡಲು ನಿರಾಕರಿಸಿದ್ದರಿಂದ ಹಲ್ಲೆ

ರತಲಾಮ (ಮಧ್ಯಪ್ರದೇಶ) – ಇಲ್ಲಿಯ ದಿವೇಲ ಗ್ರಾಮದಲ್ಲಿನ ಹನುಮಾನ ದೇವಸ್ಥಾನದ ಮೇಲಿನ ಧ್ವನಿವರ್ಧಕದಲ್ಲಿ ಭಕ್ತಿಗೀತೆಗಳನ್ನು ಹಾಕುತ್ತಿದ್ದರು. ಆ ಸಮಯದಲ್ಲಿ ಮುಸಲ್ಮಾನರಿಂದ ಧ್ವನಿವರ್ಧಕದ ಧ್ವನಿ ಕಡಿಮೆ ಮಾಡಲು ಹೇಳಿದ್ದರಿಂದ ವಿವಾದವಾಗಿ ಮುಸಲ್ಮಾನರು ವೃದ್ಧ ಅರ್ಚಕ ರಾಮಚಂದ್ರ ಶಾಸ್ತ್ರಿ ಇವರ ಮನೆಗೆ ನುಗ್ಗಿ ಅವರಿಗೆ ಮತ್ತು ಅವರ ಕುಟುಂಬದವರಿಗೆ ಥಳಿಸಿದ್ದಾರೆ. ಇದರ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಕ್ಕಿದನಂತರ ಅವರು ಘಟನಾ ಸ್ಥಳಕ್ಕೆ ತಲುಪಿದರು. ಅಲ್ಲಿಯವರೆಗೆ ಪೊಲೀಸರು ಕೂಡ ಘಟನ ಸ್ಥಳಕ್ಕೆ ತಲುಪಿದ್ದರು. ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದ್ದರಿಂದ ಹೆಚ್ಚಿನ ಪೊಲೀಸ ಬಂದೊಬಸ್ತು ಮಾಡಲಾಗಿದೆ. ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ದಿವೆಲ ಗ್ರಾಮದಲ್ಲಿ ಈ ಹಿಂದೆ ಕೂಡ ಈ ರೀತಿಯ ವಿವಾದ ನಡೆದಿತ್ತು. ಇಲ್ಲಿ ದೇವಸ್ಥಾನ ಮತ್ತು ಮಸೀದಿ ಹತ್ತಿರ ಇರುವುದರಿಂದ ಯಾವಾಗಲೂ ವಿವಾದ ನಡೆಯುತ್ತದೆ’, ಎಂದು ಜನರು ಹೇಳಿದರು.

ಮಸೀದಿ ಮೇಲಿನ ಬೋಂಗಾದ ಧ್ವನಿಯೂ ಕಡಿಮೆ ಆಗಬೇಕು ! – ಅರ್ಚಕರು ಒತ್ತಾಯ

ಮುಸಲ್ಮಾನರು ಅರ್ಚಕ ಶರ್ಮಾ ಇವರಿಗೆ ಧ್ವನಿ ಕಡಿಮೆ ಮಾಡಲು ಹೇಳುವುದಕ್ಕೆ ಹೋಗಿದ್ದಾಗ ಶರ್ಮ ಇವರು ಮಸೀದಿ ಮೇಲಿನ ಬೋಂಗಾದಿಂದ ಅಜಾನದ ಧ್ವನಿ ಕೂಡ ಕಡಿಮೆ ಆಗಬೇಕೆಂದು ಒತ್ತಾಯಿಸಿದರು’, ಈ ಸಮಯದಲ್ಲಿ ಅವರಲ್ಲಿ ವಿವಾದ ನಡೆಯಿತು.

ಸಂಪಾದಕರ ನಿಲುವು

ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಮಸೀದಿ ಮೇಲಿನ ಭೊಂಗ ದಿನದಲ್ಲಿ ೫ ಸಲ ಧ್ವನಿಯನ್ನು ಹಿಂದುಗಳು ಹೇಗೆ ಸಹಿಸುತ್ತಾರೆ, ಹಿಂದುಗಳು ಏನಾದರೂ ಈ ರೀತಿ ಕಾನೂನನ್ನು ಕೈಗೆ ಎತ್ತಿಕೊಳ್ಳುವ ಪ್ರಯತ್ನ ಮಾಡಿದ್ದರೆ, ಏನು ಆಗುತ್ತಿತ್ತು ಇದರ ಯೋಚನೆ ಯಾರಾದರೂ ಮಾಡುವರೆ ?