‘ಹಿಂದೂ ರಾಷ್ಟ್ರ ಸ್ಥಾಪಿಸುವವರು ಎಷ್ಟೋ ಆಗಿ ಹೋದರು !’ (ಅಂತೆ) – ಮೌಲಾನ ತೌಕಿರ ರಝಾ

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಹಿಂದೂ ರಾಷ್ಟ್ರದ ಹೇಳಿಕೆಯ ಬಗ್ಗೆ ಮೌಲಾನ ತೌಕಿರ ರಝಾ ಇವರ ಕೂಗಾಟ !

ಮೌಲಾನ ತೌಕಿರ ರಝಾ

ಬರೆಲಿ (ಉತ್ತರಪ್ರದೇಶ) – ಹಿಂದೂ ರಾಷ್ಟ್ರ ಸ್ಥಾಪಿಸುವವರು ಎಷ್ಟೋ ಆಗಿ ಹೋದರು. ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ದೇಶದ ವಿಭಜನೆಯಾಯಿತು; ಆದರೆ ಹಿಂದೂ ರಾಷ್ಟ್ರ ಆಗಲು ಸಾಧ್ಯವಾಗಲಿಲ್ಲ. ಇದು ಶ್ರದ್ಧೆಯ ದೇಶವಾಗಿದೆ. ನಮ್ಮ ದೇಶ ಹೂಗುಚ್ಛವಾಗಿದ್ದು ಅದರಲ್ಲಿ ಎಲ್ಲಾ ಬಣ್ಣದ ಹೂಗಳು ಇದೆ, ಎಂದು ಮೌಲಾನ ತೌಕಿರ ರಝಾ ಇವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದರ ಕುರಿತಾದ ಹೇಳಿಕೆಯ ಬಗ್ಗೆ ಹೇಳಿಕೆ ನೀಡಿದರು.

(ಸೌಜನ್ಯ : VK News)

೧. ಮೌಲಾನ ರಝಾ ಇವರು ಈ ಸಮಯದಲ್ಲಿ ಪ್ರಧಾನಮಂತ್ರಿ ಮೋದಿ ಅವರನ್ನು ಪ್ರಸ್ತುತ ‘ಭಗವಂತ’ ಎಂದು ಹೇಳಿದರು. ಇದರ ಜೊತೆಗೆ ಅವರು ‘ಜಿನ್ನ ಮುಸಲ್ಮಾನ ಆಗಿರಲಿಲ್ಲ, ಅವರು ಮುಸಲ್ಮಾನರಾಗಿ ಭಾರತದ ವಿಭಜನೆ ಮಾಡಿದರು’, ಎಂದು ದಾವೆ ಮಾಡಿದರು.

೨. ಮೌಲಾನ ರಝಾ ಮಾತು ಮುಂದುವರೆಸುತ್ತಾ, ಯಾವುದೇ ಮುಸಲ್ಮಾನನು ಗಾಂಧಿಯ ಹತ್ಯೆ ಮಾಡಲಿಲ್ಲ, ಅದು ಗೊಡ್ಸೆ ಮಾಡಿದರು. ಗಾಂಧೀಜಿಯವರ ಹತ್ಯೆ ಇದು ಸಂಘದ ಷಡ್ಯಂತ್ರವಾಗಿತ್ತು. ಸಂಘದ ಯೋಜನೆಯಿಂದ ಗಾಂಧಿಯವರ ಹತ್ಯೆ ಆಯಿತು ಮತ್ತು ಮುಸಲ್ಮಾನರ ಕಗ್ಗೊಲೆಯಾಯಿತು. ಜನರಿಗೆ ಗಾಂಧಿಯವರ ಹತ್ಯೆ ಮುಸಲ್ಮಾನರು ಮಾಡಿದ್ದಾರೆ ಎಂದು ಅನಿಸಿತು. ಆದರೆ ಸಂಘದ ಈ ಯೋಜನೆ ಮುಸಲ್ಮಾನರು ವಿಫಲಗೊಳಿಸಿದರು.

೩. ಮೌಲಾನ ರಝಾ ಇವರು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ‘ರಾಮಾಚರಿತಮಾನಸ’ದ ಮೇಲೆ ನಿಷೇಧದ ಒತ್ತಾಯವನ್ನು ಬೆಂಬಲಿಸಿದರು. ‘ರಾಮಾಚಾರಿತಮಾನಸ’ದಲ್ಲಿ ಏನು ಬರೆದಿದ್ದಾರೆ ಅದು ಈಗ ಹಾಗೆಯೇ ನಡೆಯುತ್ತಿದೆ. ಇಂದು ಶೂದ್ರ, ಗ್ರಾಮಸ್ಥರನ್ನು ಈಗ ಥಳಿಸುತ್ತಾರೆ. ಹುಡುಗಿಯರ ಅಪಹರಣ ನಡೆಯುತ್ತದೆ, ಅವರ ಅವಮಾನ ಆಗುತ್ತಿದೆ.

೪. ಬಾಗೇಶ್ವರಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮತಾಂತರ ಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಜನಪ್ರಿಯವಾಗುವುದಿದೆ, ಅದರಿಂದ ಅವರು ಈ ರೀತಿಯ ಕಾರ್ಯ ಮಾಡುತ್ತಾರೆ, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ, ಎಂದು ಮೌಲಾನ ರಝಾ ಹೇಳಿದರು.

ಸಂಪಾದಕರ ನಿಲುವು

* ಮುಸಲ್ಮಾನರಿಗೆ ಹಿಂದುಗಳ ಮಾನಸಿಕತೆ ತಿಳಿದಿದ್ದರಿಂದ ಅವರು ಈ ರೀತಿಯ ಹೇಳಿಕೆ ನೀಡಲು ಹಿಂಜರಿಯುವುದಿಲ್ಲ. ಹಿಂದುಗಳಿಗೆ ಈ ಮಾನಸಿಕತೆ ಬದಲಾಯಿಸುವ ಅವಶ್ಯಕತೆ ಇದೆ. ಆದ್ದರಿಂದ ಹಿಂದುಗಳು ರಝಾ ಇವರ ಹೇಳಿಕೆ ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರ ಸ್ಥಾಪಿಸಬೇಕು !

* ಭಾರತದಲ್ಲಿ ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅನೇಕ ಮುಸಲ್ಮಾನ ದೇಶಗಳಿಗೆ ‘ಭಾರತ ಇಸ್ಲಾಮಿ ದೇಶ ಆಗಬೇಕೆಂದು’ ಅನಿಸುತ್ತದೆ. ಅವರು ಅದಕ್ಕಾಗಿ ಸದ್ದಿಲ್ಲದೇ ಎಲ್ಲಾ ರೀತಿಯ ಸಹಾಯ ಕೂಡ ಮಾಡುತ್ತಾರೆ ಇದನ್ನು ಅರಿತು ಹಿಂದೂಗಳು ಈ ರೀತಿಯ ಉದ್ದೇಶಗಳನ್ನು ಕಿತ್ತೊಗೆದು ಹಿಂದೂ ರಾಷ್ಟ್ರ ಸ್ಥಾಪಿಸಬೇಕು !