ಅಮೇರಿಕಾದ ಹಲವು ನಗರಗಳಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರ ಧರ್ಮ ಸಮಾನವಾಗಿರುವ ಫಲಕ !

ಸ್ವಯಂ ಸೇವೆ ಇಸ್ಲಾಮಿ ಸಂಸ್ಥೆಯ ನೇತೃತ್ವ

ವಾಷಿಂಗ್ಟನ್ (ಅಮೆರಿಕಾ) – ಅಮೇರಿಕಾದ ಕೆಲವು ನಗರಗಳಲ್ಲಿ ರಸ್ತೆಯ ಪಕ್ಕದಲ್ಲಿರುವ ಕಂಬಗಳ ಮೇಲೆ ‘ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಇದರಲ್ಲಿ ಸಮಾನತೆ ಇದೆ’, ಈ ರೀತಿಯ ಫಲಕಗಳು ಹಾಕಿದೆ. ಯುಸ್ಟನ್ ನಗರದಲ್ಲಿ ಒಂದು ಹೋರ್ಡಿಂಗ್ ಮೇಲೆ, ಮುಸ್ಲಿಮ್ಸ್ ಲವ್ ಜೀಸಸ್.’ ಎಂದು ಬರೆದಿದ್ದಾರೆ. ಅಂದರೆ ಮುಸ್ಲಿಮರು ಯೇಸುನನ್ನು ಪ್ರೀತಿಸುತ್ತಾರೆ ಎಂದು ಬರೆಯಲಾಗಿದೆ. ಅದರ ಕೆಳಗೆ, ‘ಒಬ್ಬ ಈಶ್ವರ ಮತ್ತು ಅವನ ಸಂದೇಶ,’ ಈ

೧. ಇಲಿನೋಯಿಸ್ ನಗರದಲ್ಲಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಆಗಿರುವ ‘ಗೆನಪೀಸ್’ ಈ ಸ್ವಯಂಸೇವಿ ಸಂಸ್ಥೆಯಿಂದ ಡಲಾಸ್, ಶಿಕಾಗೋ ಮತ್ತು ಮಿಡಲ್ ನ್ಯೂ ಜರ್ಸಿ ಇಂತಹ ಅನೇಕ ನಗರಗಳಲ್ಲಿ ಹಾಕಿರುವ ಫಲಕಗಳಲ್ಲಿ ಎಲ್ಲಾ ಧರ್ಮ ಸಮಾನ ತೋರಿಸುವುದರ ಜೊತೆಗೆ ಅದರಲ್ಲಿ ತಪ್ಪು ತಿಳುವಳಿಕೆ ದೂರಗೊಳಿಸಬೇಕು ಎಂಬ ಸಂದೇಶ ಬರೆದಿದ್ದಾರೆ.

೨. ಒಂದು ಹೋರ್ಡಿಂಗ್ ನಲ್ಲಿ ಮದರ್ ಮೇರಿ ಹಿಜಾಬ್ ಧರಿಸಿರುವುದು ತೋರಿಸಿದ್ದಾರೆ, ಅದರ ಮೇಲೆ, ‘ಭಾಗ್ಯಶಾಲಿ ಮೇರಿ ಹಿಜಾಬ್ ಧರಿಸಿದ್ದರು. ನೀವು ಇದನ್ನು ಗೌರವಿಸುವಿರಿ. ಇನ್ನೊಂದು ಹೋರ್ಡಿಂಗ್ ನಲ್ಲಿ ಸೌದಿ ಅರೇಬಿಯಾದಲ್ಲಿನ ಮಕ್ಕಾದ ಕಾಬಾ ಮಸೀದಿಯ ಛಾಯಾಚಿತ್ರವಿದ್ದು ಅದರ ಮೇಲೆ ‘ಇಬ್ರಾಹಿಂ ಮೂಲಕ ನಿರ್ಮಾಣವಾಗಿರುವ, ಒಂದು ಈಶ್ವರನ ಪೂಜೆ ಮಾಡುವುದಕ್ಕೆ ಸಮರ್ಪಿತ, ಲಕ್ಷಾಂತರ ಮುಸಲ್ಮಾನರ ಪ್ರತಿ ವರ್ಷದ ತೀರ್ಥಯಾತ್ರೆಯ ಸ್ಥಳ’, ಎಂದು ಬರೆದಿದೆ.

ಮುಸಲ್ಮಾನನಾಗಿರಲು ನಮಗೆ ಏಸು ಮತ್ತು ಮೇರಿ ಇವರ ಮೇಲೆಯೂ ವಿಶ್ವಾಸ ಇಡಬೇಕು !

ಯುಸ್ಟನ್ ನಲ್ಲಿ ‘ಗೆನಪಿಸ’ದ ಓರ್ವ ಸದಸ್ಯನು, ನಮಗೆ ಈಗ ಅನೇಕರು ಕರೆ ಮಾಡಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಇದರಲ್ಲಿ ಏನು ಸಮಾನತೆ ಇದೆ ಎಂದು ಕೇಳುತ್ತಿದ್ದಾರೆ ? ನಾನು ಅವರಿಗೆ, ಮುಸಲ್ಮಾನನಾಗಿರಲು ನಾವು ಏಸು ಮತ್ತು ಮೇರಿ ಇವರನ್ನು ಕೂಡ ನಂಬಬೇಕು. ಆಗ ಅವರು ಚಕಿತಗೊಳುತ್ತರೆ. (ಮುಸಲ್ಮಾನ ಆಗುವುದಕ್ಕೆ ಭಗವಾನ್ ಶ್ರೀ ರಾಮ, ಶ್ರೀ ಕೃಷ್ಣ ಇವರನ್ನು ಕೂಡ ನಂಬಬೇಕು ಎಂದು ಭಾರತದಲ್ಲಿನ ಮುಸಲ್ಮಾನ ಸಂಘಟನೆಗಳು ಎಂದಾದರು ಸಂದೇಶ ನೀಡುವರೆ ? – ಸಂಪಾದಕರು)

ಸಂಪಾದಕರ ನಿಲುವು

* ಭಾರತದಲ್ಲಿ ವಿಶೇಷವಾಗಿ ಕಾಶ್ಮೀರ, ಕೇರಳ ಮುಂತಾದ ರಾಜ್ಯಗಳಲ್ಲಿ ಇತರ ಧರ್ಮದ ಜೊತೆ ಸಮಾನತೆ ಇರುವ ಫಲಕ ಹಾಕಲು ಒಂದು ಮುಸಲ್ಮಾನ ಸಂಘಟನೆಯಾದರೂ ನೇತೃತ್ವ ವಹಿಸುವುದೇ ?, ಇಂತಹ ಪ್ರಶ್ನೆ ಭಾರತೀಯರ ಮನಸ್ಸಿನಲ್ಲಿ ಉದ್ಭವಿಸಿದರೆ ಆಶ್ಚರ್ಯವೇನು ಇಲ್ಲ !

* ಅಮೇರಿಕಾದಲ್ಲಿ ಮತಾಂಧ ಮುಸಲ್ಮಾನರ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಅಲ್ಲಿನ ಮುಸಲ್ಮಾನ ಸಮಾಜದ ಬಗ್ಗೆ ತಿರಸ್ಕಾರದ ಭಾವನೆ ಹೆಚ್ಚುತ್ತಿದೆ. ಅದನ್ನು ಕಡಿಮೆಗೊಳಿಸುವುದಕ್ಕಾಗಿಯೇ ಇಸ್ಲಾಮಿ ಸಂಘಟನೆಗಳು ಈ ಕುತಂತ್ರ ನಡೆಸಿದ್ದಾರೆ, ಹೀಗೆ ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ?