ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರನಿಂದ ಕಾಂಗ್ರೆಸ್‌ಗೆ ತ್ಯಾಗಪತ್ರ !

ಪ್ರಧಾನಿ ಮೋದಿಯವರಿಗೆ ಸಂಬಂಧಿಸಿದ ‘ಬಿ.ಬಿ.ಸಿ. ನ್ಯೂಸ್’ನ ಸಾಕ್ಷ್ಯಚಿತ್ರಕ್ಕೆ ಅವರ ವಿರೋಧ !

ನವದೆಹಲಿ – ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರ ಅನಿಲ್ ಆಂಟನಿ ಇವರು ಕಾಂಗ್ರೆಸ್ ಪಕ್ಷಕ್ಕೆ ತ್ಯಾಗಪತ್ರ ಸಲ್ಲಿಸಿದ್ದಾರೆ. ಅನಿಲ್ ಆಂಟನಿ ಇವರು ಪ್ರಧಾನಿ ಮೋದಿ ಮತ್ತು ಗುಜರಾತ ದಂಗೆಗೆ ಸಂಬಂಧಿಸಿದ ‘ಬಿ.ಬಿ.ಸಿ. ನ್ಯೂಸ್’ನ ಸಾಕ್ಷ್ಯಚಿತ್ರವನ್ನು ವಿರೋಧಿಸಿದ್ದರು. ಅವರು ಭಾಜಪದ ಜೊತೆಗೆ ನಮ್ಮ ವೈಚಾರಿಕ ಭೇದಭಾವವಿದ್ದರೂ, ಈ ಸಾಕ್ಷ್ಯಚಿತ್ರದಿಂದ ದೇಶದ ಸಾರ್ವಭೌಮತ್ವಕ್ಕೆ ಅಪಾಯ ಉಂಟಾಗಬಹುದು, ಎಂದು ಟ್ವೀಟ್ ಮಾಡಿದ್ದರು. ಬಿ.ಬಿ.ಸಿ ಹಾಗೂ ಬ್ರಿಟನ್ ನ ಮಾಜಿ ವಿದೇಶಾಂಗ ಸಚಿವ ಜಾಕ್ ಸ್ಟ್ರಾ ಇವರನ್ನು ಬೆಂಬಲಿಸುವವರು ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಈ ವಿಷಯದಲ್ಲಿ ಅನಿಲ ಆಂಟನಿ ಇವರು, ನನಗೆ ಆ ಸಾಕ್ಷ್ಯಚಿತ್ರವನ್ನು ವಿರೋಧಿಸುವ ನನ್ನ ಟ್ವೀಟ್ ಅಳಿಸಬೇಕೆಂದು (ಡಿಲೀಟ್ ಮಾಡಬೇಕೆಂದು) ಒತ್ತಡ ಹೇರಲಾಗಿತ್ತು. ಭಾರತೀಯ ಸಂಸ್ಥೆಗಳ ತುಲನೆಯಲ್ಲಿ ಬ್ರಿಟೀಶ್ ಪ್ರಸಾರಮಾಧ್ಯಮಗಳ ವಿಚಾರಗಳಿಗೆ ಮಹತ್ವ ನೀಡಿದರೆ ದೇಶದ ಸಾರ್ವಭೌಮತ್ವದ ಮೇಲೆ ಪರಿಣಾಮವಾಗಬಹುದು ಎಂದು ಹೇಳಿದರು.