ಮದ್ಯಪಾನ ಮಾಡುತ್ತಿದ್ದ ಶ್ರೀರಾಮನು ಹೇಗೆ ಆದರ್ಶ ? (ಅಂತೆ) – ಲೇಖಕ ಕೆ. ಎಸ್. ಭಗವಾನ್

ಲೇಖಕ ಕೆ. ಎಸ್. ಭಗವಾನ್ ಇವರ ಹಿಂದೂದ್ವೇಷಿ ಹೇಳಿಕೆ !

ಮಂಡ್ಯ – ಶ್ರೀರಾಮನು ಮಧ್ಯಾಹ್ನ ಸೀತೆಯ ಜೊತೆ ಕುಳಿತು ಮದ್ಯಪಾನ ಮಾಡುತ್ತಿದ್ದನು. ಸೀತೆಗೆ ವನವಾಸಕ್ಕೆ ಕಳುಹಿಸಿದನು. ಅವನಿಗೆ ಸೀತೆಯ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ. ಮರದ ಕೆಳಗೆ ಕುಳಿತು ಪ್ರಾಯಶ್ಚಿತ್ತ ತೆಗೆದುಕೊಳ್ಳುವ ಶಂಬುಕನ ತಲೆ ಕಡಿದನು. ಹಾಗಾದರೆ ಅವನನ್ನು ಆದರ್ಶ ಎಂದು ಹೇಗೆ ಅನ್ನುವುದು ? ಎಂದು ನಿವೃತ್ತ ಪ್ರಾಧ್ಯಾಪಕ ಮತ್ತು ಲೇಖಕ ಕೆ.ಎಸ್. ಭಗವಾನ್ ಇವರು ಹೇಳಿದ್ದಾರೆ. ಅವರು ಜನವರಿ ೨೦ ರಂದು ಇಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕೆ.ಎಸ್. ಭಗವಾನ ಮಾತು ಮುಂದುವರೆಸುತ್ತಾ, ರಾಮ ರಾಜ್ಯ ಸ್ಥಾಪನೆ ಮಾಡುವ ಚರ್ಚೆ ನಡೆಯುತ್ತಿದೆ. ಯಾರಾದರೂ ವಾಲ್ಮೀಕಿ ರಾಮಾಯಣದ ಉತ್ತರಕಾಂಡವನ್ನು ಓದಿದರೆ ಅವರಿಗೆ ಶ್ರೀರಾಮ ಆದರ್ಶ ವ್ಯಕ್ತಿ ಅಲ್ಲ ಎಂದು ತಿಳಿಯುತ್ತದೆ. ಅವನು ೧೧ ಸಾವಿರ ವರ್ಷ ಅಲ್ಲ ಕೇವಲ ೧೧ ವರ್ಷ ರಾಜ್ಯಭಾರ ಮಾಡಿದನು”, ಎಂದಿದ್ದಾರೆ.

ಸರಕಾರವು ಕೆ. ಎಸ್. ಭಗವಾನ ಇವರನ್ನು ಕಾರಾಗೃಹಕ್ಕೆ ಆಟ್ಟಬೇಕು ! – ಭಾಜಪ ಆಗ್ರಹ

ಭಗವಾನ ಇವರ ಹೇಳಿಕೆಯನ್ನು ಟೀಕಿಸಿದ ಭಾಜಪ ನಾಯಕ ವಿವೇಕ ರೆಡ್ಡಿ ಇವರು, ಇದು ಅತ್ಯಂತ ಕೀಳ್ಮಟ್ಟದ ಮತ್ತು ತಿರಸ್ಕಾರದ ಹೇಳಿಕೆಯಾಗಿದೆ. ಇದರಿಂದ ಅವರ ಕೊಳಕು ಮಾನಸಿಕತೆ ಕಾಣುತ್ತದೆ. ಅವರು ಈ ವಿಷಯ ಇತರ ದೇಶದಲ್ಲಿ ಹೇಳಿದ್ದರೆ ಅವರಿಗೆ ಏನೇನೋ ಅನುಭವಿಸಬೇಕಾಗುತ್ತದೆ ? ಭಾರತ ಸಹಿಷ್ಣು ದೇಶವಾಗಿದೆ; ಆದರೆ ನಾವು ನಮ್ಮ ದೇವತೆಗಳ ಅವಮಾನ ಸಹಿಸುವುದಿಲ್ಲ. ಪ್ರತಿಯೊಂದು ವಿಷಯಕ್ಕೆ ಒಂದು ಮಿತಿ ಇರುತ್ತದೆ. ಸರಕಾರ ಅವರನ್ನು ತಕ್ಷಣ ಕಂಬಿ ಹಿಂದೆ ತಳ್ಳಬೇಕು, ಎಂದಿದ್ದಾರೆ.

ಕೆ. ಎಸ್. ಭಗವಾನ ಇವರು ಈ ಹಿಂದೆ ನೀಡಿದ ಆಕ್ಷೇಪಾರ್ಯ ಹೇಳಿಕೆಗಳು !

೧. ಕೆ ಎಸ್ ಭಗವಾನ್ ಇವರು ೨೦೧೯ ರಲ್ಲಿಯೂ ಹೇಳಿ ನೀಡುತ್ತಾ, ಭಗವಾನ ಶ್ರೀರಾಮ ನಿಯಮಿತವಾಗಿ ಮದ್ಯಪಾನ ಮಾಡುತ್ತಿದ್ದನು. ಅವನು ಸೀತಾ ಮಾತೆಗೂ ಮದ್ಯ ಕುಡಿಸಿದ್ದನು. ಇದರ ಬಗ್ಗೆ ಭಗವಾನ್ ಇವರು ಅವರ ಪುಸ್ತಕದಲ್ಲಿ ಕೂಡ ಬರೆದಿದ್ದಾರೆ. ಈ ಪುಸ್ತಕದ ಕೆಲವು ಭಾಗದ ಬಗ್ಗೆ ವಿವಾದ ನಡೆದಿತ್ತು. ಅದರಿಂದ ಸರಕಾರಕ್ಕೆ ಅವರಿಗೆ ಭದ್ರತೆ ಪೂರೈಸುವ ಸ್ಥಿತಿ ಬಂದಿತ್ತು. ಸರಕಾರದಿಂದ ಭಗವಾನ ಇವರ ಆಕ್ಷೇಪಾರ್ಯ ಹೇಳಿಕೆಯ ನಂತರ ಅವರ ಪುಸ್ತಕಗಳನ್ನು ಸರಕಾರಿ ಗ್ರಂಥಾಲಯದಿಂದ ತೆರವುಗೊಳಿಸಲಾಗಿತ್ತು.

೨. ೨೦೧೫ ರಲ್ಲಿ ಭಗವಾನ ಇವರು ‘ನಾನು ಶ್ರೀಮದ್ ಭಗವದ್ಗೀತೆಯ ಕೆಲವು ಪುಟಗಳನ್ನು ಸುಡುವವನಿದ್ದೇನೆ’, ಎಂದು ಘೋಷಿಸಿದ್ದರು. ಅನಂತರ ಪೊಲೀಸರು ಅವರ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದರ ಬಗ್ಗೆ ದೂರು ದಾಖಲಿಸಿದ್ದರು.

ಭಗವಾನ್ ಇವರ ಮೇಲೆ ಮಸಿ ಎಸೆದ ವಕೀಲೆ !

೨೦೨೧ ರಲ್ಲಿ ಕೆ.ಎಸ್. ಭಗವಾನ ಇವರ ಮೇಲೆ ಬೆಂಗಳೂರಿನ ಒಬ್ಬ ಮಹಿಳಾ ನ್ಯಾಯವಾದಿ ಮಸಿ ಎಸೆದಿದ್ದರು. ಭಗವಾನ ಇವರು ಹಿಂದೂ ಧರ್ಮದ ಅವಮಾನ ಮಾಡುತ್ತಾರೆ ಆದ್ದರಿಂದ ಅವರ ಮುಖಕ್ಕೆ ಮಸಿ ಬಳದಿದ್ದೆ, ಎಂದು ಆ ಮಹಿಳೆ ಹೇಳಿದ್ದರು.

ಸಂಪಾದಕೀಯ ನಿಲುವು

  • ಲೇಖಕ ಭಗವಾನ ಇವರು ಈ ಮೊದಲು ಸಹ ಅನೇಕ ಸಲ ಹಿಂದೂ ದೇವತೆಗಳನ್ನು ಅವಮಾನಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಆಗ ಅವರ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ಅವರು ಈ ರೀತಿಯ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಭಾಜಪ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹಿಂದೂದ್ವೇಷ ತಡೆಯುವುದು ಅವಶ್ಯಕವಾಗಿದೆ, ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !
  • ಪಾಕಿಸ್ತಾನದಲ್ಲಿ ಅಲ್ಲಾ, ಪೈಗಂಬರ್, ಕುರಾನ್ ಮುಂತಾದವರ ಅವಮಾನ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಅದೇ ರೀತಿ ಶಿಕ್ಷೆ ಈಗ ಕೇಂದ್ರದ ಭಾಜಪ ಸರಕಾರವು ಭಾರತದಲ್ಲಿಯೂ ಹಿಂದೂ ಧರ್ಮದ ವಿಷಯದಲ್ಲಿ ಕಾರ್ಯರೂಪಕ್ಕೆ ತರುವ ಕಾನೂನನ್ನೂ ರೂಪಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
  • ಕೆ.ಎಸ್. ಭಗವಾನ್ ಇವರಿಗೆ ಇತರ ಧರ್ಮದವರ ಶ್ರದ್ಧಾಸ್ಥಾನದ ಬಗ್ಗೆ ಈ ರೀತಿ ಪ್ರಶ್ನಿಸುವ ಧೈರ್ಯ ಎಂದಾದರೂ ತೋರುವರೆ ?