ಪಾಕಿಸ್ತಾನದಲ್ಲಿನ ಹಿಂದೂಗಳ ದೇವಸ್ಥಾನ ನೆಲಸಮ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಮಲಾಕಂದ ಜಿಲ್ಲೆಯ ದರಗಾಯಿ ತಾಲೂಕಿನಲ್ಲಿರುವ ಹಿಂದೂ ದೇವಸ್ಥಾನ ನೆಲಸಮ ಮಾಡಿದ್ದಾರೆ. ಜೊತೆಗೆ ಓರ್ವ ಹಿಂದೂ ಹುಡುಗನಿಗೆ ಥಳಿಸಿದ್ದಾರೆ. ಈ ಘಟನೆಯಿಂದ ಅಲ್ಲಿಯ ೪ ಕುಟುಂಬದವರು ಪಲಾಯನ ಮಾಡಿದ್ದಾರೆ, ಎಂದು ‘ಹಿಂದೂ ಸಿಂಧ’ ಈ ಸಂಘಟನೆಯು ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಸಂಪಾದಕರು ನಿಲುವು

ಭಾರತದಲ್ಲಿ ಇತರ ಧರ್ಮದವರ ಪ್ರಾರ್ಥನಾ ಸ್ಥಳಗಳ ಮೇಲೆ ಕಲ್ಲು ತೂರಾಟದ ವದಂತಿಯಿಂದ ದೇಶದಲ್ಲಿ ಆಕಾಶ ಪಾತಾಳ ಒಂದು ಮಾಡುತ್ತಾರೆ; ಆದರೆ ಪಾಕಿಸ್ತಾನದಲ್ಲಿ ಹಿಂದೂಗಳ ದೇವಸ್ಥಾನ ನೆಲಸಮ ಮಾಡಿದರು ಕೂಡ ಯಾರೂ ಬಾಯಿ ಬಿಡುವುದಿಲ್ಲ ಇದನ್ನು ತಿಳಿಯಬೇಕು !