ರಾಯಪುರ – ಛತ್ತೀಸ್ ಗಡನ ಮಹಾಸಮುಂದ ಜಿಲ್ಲೆಯ ಬಸನಾದಲ್ಲಿ ೧ ಸಾವಿರದ ೧೦೦ ಮತಾಂತರ ಗೊಂಡಿರುವ ಕ್ರೈಸ್ತರು ಮತ್ತೆ ಹಿಂದೂ ಧರ್ಮಕ್ಕೆ ಹಿಂತಿರುಗಿದ್ದಾರೆ. ಬಸನಾದಲ್ಲಿ ಆಯೋಜಿಸಲಾದ ಶ್ರೀಮದ್ ಭಾಗವತ ಕಥೆಯ ಸಮಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈ ಮತಾಂತರಗೊಂಡಿರುವ ಕ್ರೈಸ್ತರು ಹಿಂದೂ ಧರ್ಮಕ್ಕೆ ಪ್ರವೇಶ ಮಾಡಿದ್ದಾರೆ. ಭಾಜಪದ ನಾಯಕ ಪ್ರಬಲ ಪ್ರತಾಪ ಸಿಂಹ ಜುವೆದ ಇವರು ಗಂಗಾಜಲದಿಂದ ಕಾಲು ತೊಳೆದು ಎಲ್ಲರನ್ನೂ ಹಿಂದೂ ಧರ್ಮಕ್ಕೆ ಪುನರ್ ಪ್ರವೇಶ ಮಾಡಿಸಿದ್ದಾರೆ. ಹಿಂದೂ ಧರ್ಮಕ್ಕೆ ಪ್ರವೇಶ ಮಾಡಿದ ಜನರು, ‘ಸುಳ್ಳು ಆಶ್ವಾಸನೆಕ್ಕೆ ಬಲಿಯಾಗಿ ನಾವು ಮತಾಂತರ ಗೊಂಡಿದ್ದೆವು; ಆದರೆ ನಮ್ಮ ತಪ್ಪು ತಿಳಿದ ನಂತರ ನಾವು ಹಿಂದೂ ಧರ್ಮಕ್ಕೆ ಹಿಂತಿರುಗಿದ್ದೇವೆ.’ ಎಂದು ಹೇಳಿದರು. ಪ್ರವಚನಕಾರ ಹಿಮಾಂಶು ಕೃಷ್ಣ ಮಹರಾಜ ಇವರು ಈ ಜನರಿಗೆ ಪ್ರಮಾಣ ಮಾಡಿಸಿದರು. ಜುವೆದ ಇವರು, ಸುಮಾರು ೩೨೫ ಕುಟುಂಬದಲ್ಲಿನ ೧ ಸಾವಿರದ ೧೦೦ ಜನರು ಸನಾತನ ಹಿಂದೂ ಧರ್ಮಕ್ಕೆ ಹಿಂತಿರುಗಿದ್ದಾರೆ ಎಂದು ಹೇಳಿದರು.
ईसाई से हिन्दू बने 1100 लोगों की हुईं घर वापसी…लोगों ने कहा- सभी भटक गए थे इसलिए सनातन धर्म छोड़ दिया था#Conversion #Hindus #homecoming @prabaljudevBJP
https://t.co/p5UGfDcrHA— Sudarshan News (@SudarshanNewsTV) January 20, 2023
೧. ಈ ಹಿಂದೆ ಕೂಡ ಮಾರ್ಚ್ ೨೦೨೨ ರಲ್ಲಿ ಮಹಾಸಮುಂದದ ಕಟಂಗಪಲಿ ಗ್ರಾಮದಲ್ಲಿ ಆಯೋಜಿಸಲಾದ ವಿಶ್ವಕಲ್ಯಾಣ ಮಹಾಯಜ್ಞದ ಸಮಯದಲ್ಲಿ ೧ ಸಾವಿರದ ೨೫೦ ಜನರು ಹಿಂದೂ ಧರ್ಮಕ್ಕೆ ಹಿಂತಿರುಗಿದ್ದರು.
೨. ಕಳೆದ ವರ್ಷ ಕ್ರಿಸ್ಮಸ್ ಸಮಯದಲ್ಲಿ ಪಾಥಳಗಾವ ಇಲ್ಲಿಯ ೫೦ ಕ್ರೈಸ್ತ ಕುಟುಂಬಗಳು ಅವರ ಮೂಲ ಹಿಂದೂ ಧರ್ಮಕ್ಕೆ ಹಿಂತಿರುಗಿದ್ದರು.
ಮತಾಂತರಗೊಂಡಿರುವವರನ್ನು ಹಿಂದೂ ಧರ್ಮಕ್ಕೆ ಹಿಂತರುವ ಕಾರ್ಯ ಮಾಡುವ ಭಾಜಪದ ನಾಯಕ ಪ್ರಬಲ ಪ್ರತಾಪಸಿಂಹ ಜುವೇದ ವಾಜಪೇಯಿಸರಕಾರದ ಕಾಲದಲ್ಲಿ ಸಚಿವರಾಗಿದ್ದ ದಿಲೀಪ ಸಿಂಹ ಜುವೇದ ಇವರು ಆ ಸಮಯದಲ್ಲಿ ಕ್ರೈಸ್ತ ಮಷೀನರಿಗಳ ಸುಳ್ಳು ಆಶ್ವಾಸನೆಗೆ ಬಲಿಯಾಗಿ ಮತಾಂತರಗೊಂಡಿರುವ ಆದಿವಾಸಿ ಸಮಾಜದ ಜನರನ್ನು ಮತ್ತೆ ಮೂಲ ಹಿಂದೂ ಧರ್ಮಕ್ಕೆ ತರುವ ಕಾರ್ಯ ಮಾಡಿದ್ದರು. ದಿಲೀಪಸಿಂಹ ಜುವೆದ ಇವರು ೨೦೧೩ ರಲ್ಲಿ ನಿಧನರಾದರು. ಅದರ ನಂತರ ಅವರ ಪುತ್ರ ಪ್ರಬಲ ಪ್ರತಾಪ ಸಿಂಹ ಜುವೆದ ಈ ಕಾರ್ಯ ಮುಂದುವರಿಸಿದ್ದಾರೆ. ಛತ್ತಿಸ್ ಗಢ, ಜಾರ್ಖಂಡ್ ಮತ್ತು ಒರಿಸ್ಸಾ ಈ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಅವರು ೧೦ ಸಾವಿರಗಿಂತಲೂ ಹೆಚ್ಚಿನ ಜನರನ್ನು ಹಿಂದೂ ಧರ್ಮಕ್ಕೆ ಕರೆ ತಂದಿದ್ದಾರೆ. ‘ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಬಂದ ನಂತರ ಮತಾಂತರದ ಷಡ್ಯಂತ್ರ ನಿರಂತರವಾಗಿ ಹೆಚ್ಚುತ್ತಿದೆ, ಎಂದು ಜುವೆದ ಹೇಳಿದರು. |