ಉತ್ತರ ಪ್ರದೇಶದಲ್ಲಿ ಹಿಮ್ಮತ ಬಹಾದ್ದೂರ್ ಎಂಬ ಅಧಿಕಾರಿಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ !
ಗಾಜಿಪುರ (ಉತ್ತರಪ್ರದೇಶ) – ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ತಹಸಿಲ್ದಾರ್ ಹಿಮ್ಮದ್ ಬಹಾದ್ದೂರ್ ಇವರು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಬಹಾದ್ದೂರ್ ಇವರು ಅಯೋಧ್ಯೆಯಲ್ಲಿ ನಿರ್ಮಿಸಲಾಗಿತ್ತಿರುವ ರಾಮಮಂದಿರವನ್ನು ದುಕಾನದಾರಿ(ವ್ಯಾಪಾರಿಕರಣ) ಎಂದು ಹೇಳಿದ್ದಾರೆ. ಜೊತೆಗೆ ಅವರು ದೇವಸ್ಥಾನಕ್ಕೆ ಹೋಗುವವರನ್ನು ಮೂರ್ಖರೆಂದು ಹೇಳಿದರು. ಗಾಜೀಪುರ ಜಿಲ್ಲಾಧಿಕಾರಿಯು ಈ ಪ್ರಕರಣದ ವಿಚಾರಣೆ ನಡೆಸುಂತೆ ಆದೇಶ ನೀಡಿದ್ದಾರೆ. ಉಪ ತಹಸಿಲದಾರರ ಹೇಳಿಕೆಯ ಬಗ್ಗೆ ಅಯೋಧ್ಯೆಯ ಸಂತರು ತೀವ್ರ ಅಸಮಧಾನಗೊಂಡಿದ್ದಾರೆ.
(ಸೌಜನ್ಯ : As News apka sach)
ಹಿಮ್ಮತ್ ಬಹಾದ್ದೂರ್ ಇವರ ಈ ಹೇಳಿಕೆಯ ಬಗ್ಗೆ ಹಿಂದುಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಾದ್ದೂರ್ ಇವರು ಹಿಂದೂಗಳ ಧಾರ್ಮಿಕ ಭಾವನೆಯ ಅವಮಾನ ಮಾಡಿರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. ರಾಮುಲಾಲಾನ ಅರ್ಚಕರು ಮಹಾಂತ ಸತ್ಯೇಂದ್ರ ದಾಸ ಇವರು ಬಹಾದ್ದೂರ್ ಇವರನ್ನು ಉಪ ತಹಸಿಲ್ದಾರ್ ಈ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ ಹಾಗೂ ಅವರನ್ನು ಧರ್ಮನಿಂದನೆಯ ಆರೋಪದಲ್ಲಿ ಜೈಲಿಗೆ ಅಟ್ಟುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಸಂಪಾದಕರ ನಿಲುವುಸರಕಾರದಲ್ಲಿ ಇಂತಹ ಹಿಂದೂ ವಿರೋಧಿ ಜನರು ಇದ್ದರೇ ಅವರು ಹಿಂದೂಗಳ ಹಿತ ಹೇಗೆ ಕಾಪಾಡುವರು ? |