-
ಮದರಸಾದ ಶಿಕ್ಷಕ ಸಹಿತ 3 ಜನರ ಬಂಧನ !
-
ಅಬುಧಾಬಿಯಿಂದ ಹಣಕಾಸು ಪೂರೈಕೆ !
ಪ್ರಯಾಗರಾಜ (ಉತ್ತರಪ್ರದೇಶ) – ಮಾಘ ಮೇಳದಲ್ಲಿ ಹಿಂದೂಗಳನ್ನು ಮತಾಂತರಿಸಲು ಇಸ್ಲಾಮಿ ಪುಸ್ತಕಗಳನ್ನು ವಿತರಿಸುತ್ತಿದ್ದ 3 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಮದರಸಾ ಶಿಕ್ಷಕ ಮಹಮೂದ ಹಸನ ಗಾಜಿ ಇವನೂ ಸೇರಿದ್ದಾನೆ. ಇನ್ನಿತರ ಇಬ್ಬರು ಮೊದಲು ಹಿಂದೂ ಆಗಿದ್ದರು ಮತ್ತು ನಂತರ ಅವರು ಮತಾಂತರಗೊಂಡಿದ್ದರು ಎನ್ನುವ ಮಾಹಿತಿ ಕೂಡ ಬಹಿರಂಗವಾಗಿದೆ. ಈ ಮೂವರಿಂದ 204 ಧಾರ್ಮಿಕ ಪುಸ್ತಕಗಳು ಮತ್ತು ಇತರೆ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
Prayagraj: Three Islamists, including a madarsa teacher, arrested for religious conversion attempts at Magh Melahttps://t.co/pa8wtnnIYf
— OpIndia.com (@OpIndia_com) January 17, 2023
೧. ಪೊಲೀಸರು, ಮಹಮೂದ ಹಸನ ಗಾಜಿಯ ವಿಚಾರಣೆ ನಡೆಸಿದಾಗ, ಅವನಿಗೆ ಸಂಯುಕ್ತ ಅರಬ ಅಮಿರಾಟ್ ನ ಅಬುಧಾಬಿಯಿಂದ ಹಣಕಾಸು ಪೂರೈಕೆಯಾಗುತ್ತಿತ್ತು. ಅವನು `ಬದಮೆ ಪೈಗಾಮೆ ಬಹದಾನಿಯತ’ ಸಂಸ್ಥೆಯ ಅಧ್ಯಕ್ಷನಾಗಿದ್ದಾನೆ ಎಂದು ಹೇಳಿದರು.
೨. ಈ ಮೂವರು ಅಲ್ಲಿ ಪುಸ್ತಕಗಳ ಮಾರಾಟ ಕೇಂದ್ರವನ್ನು ಸ್ಥಾಪಿಸಿದ್ದರು. ಅವರು ಹಿಂದೂ ಧರ್ಮದ ಪುಸ್ತಕಗಳ ಕೆಳಗೆ ಇಸ್ಲಾಂ ಪುಸ್ತಕಗಳನ್ನು ಇಟ್ಟಿದ್ದರು ಎನ್ನುವುದು ಪೊಲೀಸರಿಗೆ ಕಂಡು ಬಂದಿದೆ. ಪೊಲೀಸರು ಇಲ್ಲಿ ಉಪಸ್ಥಿತರಿದ್ದ ಇಬ್ಬರ ಹೆಸರನ್ನು ಕೇಳಿದಾಗ ಅವರು ಆಶೀಷ ಕುಮಾರ ಗುಪ್ತಾ ಮತ್ತು ನರೇಶ ಕುಮಾರ ಸರೋಜ ಎಂದು ಹೇಳಿದರು. ಅವರನ್ನು ವಿಚಾರಣೆಗಾಗಿ ಪೊಲೀಸ ಠಾಣೆಗೆ ಕರೆದೊಯ್ದಾಗ ಅವರ ಆಧಾರಕಾರ್ಡ ಮೇಲೆ ಅವರ ಹೆಸರು ಮಹಮ್ಮದ ಮೊನಿಶ ಮತ್ತು ಸಮೀರ ಎಂದಾಗಿತ್ತು. ಇವರಿಬ್ಬರೂ ಇಸ್ಲಾಮಿಯಾ ಹಿಮದಾದಿಯಾ ಮದರಸಾ ಶಿಕ್ಷಕ ಗಾಜಿ ತಿಳಿಸಿದಂತೆ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರು, ಎನ್ನುವ ಮಾಹಿತಿ ಸಿಕ್ಕಾಗ ಪೊಲೀಸರು ಗಾಜಿಯನ್ನು ಅವನ ಮನೆಯಿಂದ ಬಂಧಿಸಿದರು.
೩. ಗಾಜಿ ಹಿಂದೂ ಧರ್ಮವನ್ನು ಕೀಳೆಂದು ಪರಿಗಣಿಸಿ ಇಸ್ಲಾಂಅನ್ನು ಹೊಗಳುವ ಪುಸ್ತಕಗಳನ್ನು ಮತ್ತು ಕರಪತ್ರಗಳನ್ನು ಹಂಚುತ್ತಿರುವುದು ವಿಚಾರಣೆಯ ಸಮಯದಲ್ಲಿ ಕಂಡು ಬಂದಿತು. ಈ ಪುಸ್ತಕಗಳಲ್ಲಿ ಹಿಂದೂ ಧರ್ಮಗ್ರಂಥಗಳ ಶ್ಲೋಕಗಳ ತಪ್ಪು ಅರ್ಥಗಳನ್ನು ಪ್ರಕಟಿಸಲಾಗಿತ್ತು. ತನ್ಮೂಲಕ ಅವರು ಹಿಂದೂಗಳ ಬುದ್ಧಿಭ್ರಷ್ಟಗೊಳಿಸಿ ಅವರ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದರು.
೪. ಪೊಲೀಸರು, ಮಹಮ್ಮದ ಮೊನಿಶ ಮತ್ತು ಸಮೀರ ಇವರು ಇಸ್ಲಾಮಿ ಸಂಘಟನೆಯ ಸಂಪರ್ಕದಲ್ಲಿದ್ದರು. ಮೊನಿಶ `ಸ್ಟುಡೆಂಟ ಇಸ್ಲಾಮಿಕ ಆರ್ಗನೈಸೇಶನ’ ಸಂಘಟನೆಯ ಉತ್ತರ ಪ್ರದೇಶ ಶಾಖೆಯ ವಿಭಾಗೀಯ ಕಾರ್ಯದರ್ಶಿಯಾಗಿದ್ದರೆ, ಸಮೀರ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದನು ಎಂದು ಹೇಳಿದರು. ಇವರಿಬ್ಬರೂ, ಅವರು ಬಹಳ ವರ್ಷಗಳಿಂದ ಸಂಘಟನೆಯ ಕಾರ್ಯವನ್ನು ಮಾಡುತ್ತಿದ್ದು, ಅದಕ್ಕಾಗಿ ಅವರಿಗೆ ಪ್ರತಿ ತಿಂಗಳೂ ಪ್ರತಿಯೊಬ್ಬರಿಗೆ 5 ಸಾವಿರ ರೂಪಾಯಿ ಸಿಗುತ್ತದೆಯೆಂದು ಹೇಳಿದ್ದಾರೆ.
|