ನೌಶಾದ್ ಮತ್ತು ಜಗ್ಗಾ ಭಯೋತ್ಪಾದಕ ಸಂಘಟನೆ ಜೊತೆ ನಂಟು ! – ದೆಹಲಿ ಪೋಲಿಸ್

ನವದೆಹಲಿ – ಜಹಾಂಗಿರಪುರಿ ಪ್ರಕರಣದಲ್ಲಿ ಬಂಧಿತ ಭಯೋತ್ಪಾದಕ ನೌಶಾದ್ ಮತ್ತು ಜಗಜೀತ್ ಅಲಿಯಾಸ್ ಜಗ್ಗಾ ಇವರು ಕೆಲವು ಭಯೋತ್ಪಾದಕ ಸಂಘಟನೆಗಳ ಮತ್ತು ಗೂಂಡಾಗಳ ಜೊತೆಗೆ ನಂಟನ್ನು ಹೊಂದಿರುವುದು ದೆಹಲಿ ಪೋಲಿಸರು ಬಹಿರಂಗಪಡಿಸಿದ್ದಾರೆ. ದೆಹಲಿ ಪೊಲೀಸರ ವಿಶೇಷ ತಂಡದ ವಿಚಾರಣೆಯಲ್ಲಿ ಇವರು ಭಯೋತ್ಪಾದಕ ‘ಹರಕದ್-ಉಲ್-ಅನ್ಸಾರ್’ ಈ ಸಂಘಟನೆಯ ನಾಜೀರ್ ಭಟ್, ನಾಸಿರ್ ಖಾನ್ ಮತ್ತು ನಾಜೀರ್ ಖಾನ್ ಇವರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಸಂಚು ಬಹಿರಂಗ !

ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ರಕ್ತಪಾತ ನಡೆಸುವ ಸಂಚನ್ನು ರೂಪಿಸಿದ ಪ್ರಕರಣದಲ್ಲಿ ಬಂಧಿಸಲಾಗಿರುವ ಭಯೋತ್ಪಾದಕ ನೌಶಾದ್ ಮತ್ತು ಜಗ್ಗಾ ಇವರು ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದಿನ್ ಜೊತೆ ನಂಟಿರುವುದು ಬಹಿರಂಗವಾಗಿದೆ. ಈ ಆರೋಪಿಗಳ ಬಂಧನದಿಂದ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ‘ಐ.ಎಸ್.ಐ.’ ಖಲಿಸ್ತಾನಿ ಭಯೋತ್ಪಾದಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಭಾರತದಲ್ಲಿನ ಸ್ಥಳೀಯ ಗೂಂಡಾಗಳ ಸಹಾಯದಿಂದ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ರೂಪಿಸುತ್ತಿರುವುದು ಮತ್ತೊಮ್ಮೆ ದೃಢಪಟ್ಟಿದೆ.