ಪಾಕಿಸ್ತಾನದಲ್ಲಿ ತೀವ್ರ ಸ್ವರೂಪ ಪಡೆಯುತ್ತಿರುವ ಸ್ವತಂತ್ರ ಸಿಂಧೂ ದೇಶದ ಬೇಡಿಕೆ !

ಪಾಕಿಸ್ತಾನದ ೪ ಭಾಗವಾಗಿ ವಿಭಜನೆಯಾಗುವ ಸಾಧ್ಯತೆ !

ಇಸ್ಲಾಮಾಬಾದ(ಪಾಕಿಸ್ತಾನ) – ದಿವಾಳಿಯ ಸಾಗುತ್ತಿರುವ ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತದೆ. ಇದರ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಂಧ ಪ್ರಾಂತ್ಯವನ್ನು ಪುನಃ ಸ್ವತಂತ್ರ `ಸಿಂಧೂದೇಶ’ಕ್ಕಾಗಿ ಆಗ್ರಹಿಸುತ್ತಾ ಸಿಂಧ ಪ್ರಾಂತ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಕಳೆದ ವರ್ಷ ಇಲ್ಲಿ ಈ ರೀತಿಯ ಪ್ರತಿಭಟನೆ ನಡೆಸಲಾಗಿತ್ತು. ಆ ಸಮಯದಲ್ಲಿ ಇಲ್ಲಿಯ ಹಿಂದೂಗಳು ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಮತ್ತು ಇತರ ಮುಖಂಡರಿಗೆ ಸಿಂಧಗೆ ‘ಸಿಂಧೂ ದೇಶ’ ಮಾಡುವುದಕ್ಕೆ ಸಹಾಯ ಮಾಡಲು ವಿನಂತಿಸಿತ್ತು.

೧. ಸಿಂಧೂದೇಶ ಆದರೆ ಅಲ್ಲಿ ಹಿಂದೂಗಳಿಗೆ ವಾಸಿಸುವ ಹಕ್ಕು ಸಿಗಲಿದೆ, ಅದಕ್ಕಾಗಿ ಪಾಕಿಸ್ತಾನ ವಿಭಜನೆ ಆಗುವುದು ಅವಶ್ಯಕವಾಗಿದೆ ಎಂದು ಹಿಂದೂಗಳ ಅಭಿಪ್ರಾಯವಾಗಿದೆ.

೨. ಸಿಂಧದಲ್ಲಿನ ಜನರು, ಅವರ ಪ್ರಾಂತ್ಯದ ಮೇಲೆ ಬ್ರಿಟಿಷರು ನಿಯಂತ್ರಣ ಪಡೆದಿದ್ದರು ಮತ್ತು ೧೯೪೭ ರಲ್ಲಿ ಸಿಂಧ ದಲ್ಲಿನ ಸಿಂಧನ ಜನರ ಇಚ್ಛೆಯ ವಿರುದ್ಧ ಈ ಪ್ರದೇಶ ಕಾನೂನ ಬಾಹಿರವಾಗಿ ಪಾಕಿಸ್ತಾನಕ್ಕೆ ನೀಡಿತ್ತು ಎಂದು ಹೇಳಿದ್ದಾರೆ.

೩. ಇಲ್ಲಿಯ ಸಿಂಧ ರಾಷ್ಟ್ರವಾದಿ ಜನರ ಪ್ರಕಾರ, ‘ಮಹಾಭಾರತದಲ್ಲಿನ ಸಿಂಧೂದೇಶದ ಹಾಗೆ ಈ ಪ್ರಾಂತ್ಯ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರವಾಗಿ ಒಂದು ದೇಶ ಆಗಬೇಕು.’ ಈ ಹಿಂದೆ ೧೯೬೭ ರಲ್ಲಿ ಸಿಂಧು ದೇಶಕ್ಕಾಗಿ ಆಗ್ರಹಿಸಲಾಗಿತ್ತು. ಜಿ.ಎಂ. ಸೈಯದ್ ಮತ್ತು ಪಿರ್ ಅಲಿ ಮಹಮ್ಮದ್ ರಶ್ದಿ ಇವರ ನೇತೃತ್ವದಲ್ಲಿ 1971 ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವಾತಂತ್ರವಾದ ನಂತರ ಸಿಂಧ ದೇಶದ ಬೇಡಿಕೆ ಇನ್ನು ಹೆಚ್ಚಾಯಿತು.

೪. ಈಗ ವರ್ಲ್ಡ್ ಸಿಂಧಿ ಕಾಂಗ್ರೆಸ್, ಸಿಂಧು ದೇಶ ಲಿಬ್ರೇಶನ್ ಆರ್ಮಿ, ಜೈ ಸಿಂಧು ಸ್ಟೂಡೆಂಟ್, ಸಿಂಧ ನ್ಯಾಷನಲ್ ಮೂಮೆಂಟ್ ಪಾರ್ಟಿ ಮುಂತಾದವರಿಂದ ಆಗ್ರಹಿಸಲಾಗುತ್ತಿದೆ.

೫. ಸಿಂಧು ದೇಶದ ಬೆಂಬಲಿಗರು ಮತ್ತು ‘ಜಯ ಸಿಂಧ ಫ್ರೀಡಂ ಮೂಮೆಂಟ್’ನ ಸಂಸ್ಥಾಪಕ ಜಫರ್ ಸಾಹಿತೋ ಯುರೋ ಇವರು, ೧೮೪೩ ರಲ್ಲಿ ಬ್ರಿಟಿಷ ಸೈನ್ಯ ದಾಳಿ ಮಾಡಿ ಸಿಂಧೂ ದೇಶ ವಶಕ್ಕೆ ಪಡೆದುಕೊಂಡಿತ್ತು. ಅವರು ಯಾವಾಗ ಭಾರತದಿಂದ ಹೊರ ಹೋದರು, ಅದರ ನಂತರ ನಮ್ಮ ದೇಶ ನಮಗೆ ನೀಡಬೇಕಾಗಿತ್ತು. ಅದು ನಮ್ಮ ಹಕ್ಕಾಗಿತ್ತು. ಬ್ರಿಟಿಷರು ತಮ್ಮ ಸ್ವಾರ್ಥಕ್ಕಾಗಿ ಪಾಕಿಸ್ತಾನದ ನಿರ್ಮಾಣ ಮಾಡಿದರು. ಸಿಂಧ ರಾಜ ದಾಹಿರ್ ಇವರ ಕಾಲಾವಧಿಯಲ್ಲಿ ಅಂದರೆ ೭೧೧ ರಲ್ಲಿ ಇದು ಸ್ವತಂತ್ರ ದೇಶವಾಗಿತ್ತು.

೬. ಪಾಕಿಸ್ತಾನದ ಖೈಬರ್ ಪಾಖ್ಟೂನಖ್ವದಲ್ಲಿ ಅಫಗಾಣಿ ಹಾಗೂ ಬಲೂಚಿಸ್ತಾನದಲ್ಲಿ ಬಲುಚಿ ನಾಗರಿಕರಿಂದ ಕೂಡ ಸ್ವಾತಂತ್ರ್ಯಕ್ಕಾಗಿ ಕೆಲವು ವರ್ಷಗಳಿಂದ ಶಸ್ತ್ರಾಸ್ತ್ರ ಸಹಿತ ಪ್ರತಿಭಟನೆ ಮಾಡುತ್ತಿದೆ. ಆದ್ದರಿಂದ ಈಗ ಪಾಕಿಸ್ತಾನದ ೪ ಭಾಗವಾಗಿ ವಿಭಜನೆಯ ಸಂಕಟ ನಿರ್ಮಾಣವಾಗಿದೆ.

ಸಂಪಾದಕೀಯ ನಿಲುವು

ಭಾರತ ಸರಕಾರವು ಇದಕ್ಕಾಗಿ ಸಿಂಧ ಪ್ರದೇಶದ ಜನರಿಗೆ ಸಹಾಯ ಮಾಡಬೇಕೆಂದು ಭಾರತೀಯರಿಗೆ ಅನಿಸುತ್ತದೆ !