‘ಚಾಟ್ ಜಿಪಿಟಿ’ ತಂತ್ರಜ್ಞಾನ ವ್ಯವಸ್ಥೆಯಿಂದ ಹಿಂದೂ ದೇವತೆಗಳ ಮತ್ತು ಧರ್ಮ ಗ್ರಂಥಗಳ ಅಪಮಾನ

ನವ ದೆಹಲಿ – ‘ಚಾಟ್ ಜೆಪಿಟಿ’ (ಜನರೇಟಿವ್ ಪ್ರಿ-ಟ್ರೆಂಡ್ ಟ್ರಾನ್ಸ್ಫರ್ಮರ್) ಈ ತಂತ್ರಜ್ಞಾನ ವ್ಯವಸ್ಥೆಯಿಂದ ಹಿಂದೂ ಧರ್ಮ ಗ್ರಂಥಗಳ ಅಪಮಾನ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ತಂತ್ರಜ್ಞಾನ ವ್ಯವಸ್ಥೆಯು ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ನ (ಕೃತಕ ಬುದ್ದಿವಂತಿಕೆ) ಕಾರ್ಯ ಮಾಡುತ್ತದೆ. ಇದೊಂದು ರೋಬೋಟನಂತೆ ವ್ಯವಸ್ಥೆಯಾಗಿದೆ. ನಮಗೆ ಪ್ರತಿಯೊಂದು ಪ್ರಶ್ನೆಯ ಉತ್ತರ ನೀಡಬಹುದು. ಯಾರಿಗಾದರೂ ರಜೆಗಾಗಿ ಅರ್ಜಿ ಬೇಕಿದ್ದರೆ, ಅದು ಕೂಡಲೇ ಬರೆದು ಕೊಡುತ್ತದೆ. ಈ ರೀತಿ ಪ್ರತಿಯೊಂದು ವಿಷಯ ಮಾಡುವ ಕ್ಷಮತೆ ಈ ವ್ಯವಸ್ಥೆಯಲ್ಲಿದೆ.

೧. ಈಗ ಇದೆ ವ್ಯವಸ್ಥೆಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ, ಭಗವಾನ್ ಬುದ್ಧ ಮುಂತಾದ ದೇವತೆಗಳು ಹಾಗೂ ರಾಮಾಯಣದಂತಹ ಗ್ರಂಥಗಳ ಬಗ್ಗೆ ಅಪಮಾನ ಮಾಡುವ ಕುಚೇಷ್ಟೆ ಕೇಳಿಸಲಾಗುತ್ತದೆ; ಆದರೆ ಇನ್ನೊಂದು ಕಡೆ ಬೈಬಲ್, ಕುರಾನ್, ಏಸು ಮುಂತಾದ ವಿಷಯಗಳ ಬಗ್ಗೆ ತಮಾಷೆಯಾಗಿ ವಿಚಾರಿಸಿದರೆ ಈ ಪ್ರಶ್ನೆ ಆಕ್ಷೇಪಾರ್ಹವಾಗಿದೆ ಎಂದು ಈ ವ್ಯವಸ್ಥೆಯು ಉತ್ತರಿಸುತ್ತದೆ. ಅಂದರೆ ಹಿಂದೂಗಳ ಧರ್ಮಗ್ರಂಥಗಳ ಬಗ್ಗೆ ತಮಾಷೆ ಮಾಡುವುದು ಈ ವ್ಯವಸ್ಥೆಯಲ್ಲಿ ಇದೆ ಹಾಗೂ ಇತರ ಧರ್ಮದ ಬಗ್ಗೆ ಇಲ್ಲ. ಇದರಿಂದ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮದ ಅಪಮಾನ ಮಾಡಲಾಗುತ್ತದೆ.

೨. ರಾಮಾಯಣದ ಬಗ್ಗೆ ತಮಾಷೆ ಬಗ್ಗೆ ಕೇಳಿದರೆ ‘ಚಾಟ್ ಜಿಪಿಟಿ’ ವ್ಯವಸ್ಥೆ ತಮಾಷೆ ಹೇಳುತ್ತದೆ; ಆದರೆ ಅದೇ ಸಮಯದಲ್ಲಿ ಅದು ‘ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಏನೆಂದರೆ, ರಾಮಾಯಣ ಇದು ಹಿಂದೂಗಳ ಧಾರ್ಮಿಕ ಗ್ರಂಥವಾಗಿದೆ ಅದನ್ನು ಗೌರವಿಸಬೇಕು’, ಹೀಗೆ ಹೇಳುತ್ತದೆ. ಇತರ ಧರ್ಮದ ಬಗ್ಗೆ ತಮಾಷೆ ಬಗ್ಗೆ ಕೇಳಿದರೆ, ತಮಾಷೆ ಮಾಡದೆ ಪ್ರಶ್ನೆ ಅಯೋಗ್ಯವಾಗಿದೆ ಎಂದು ಹೇಳುತ್ತದೆ; ಅಂದರೆ ಈ ವ್ಯವಸ್ಥೆಗೆ ರಾಮಾಯಣದ ಮಹತ್ವ ತಿಳಿದಿದ್ದರೂ ಕೂಡ ಈ ಕುರಿತು ವಿನೋದ ಕೇಳಿಸುತ್ತದೆ. ಈ ವ್ಯವಸ್ಥೆ ಅದರ ಕೋಡಿಂಗ್ ಪ್ರಕಾರ ಉತ್ತರ ನೀಡುತ್ತದೆ. ಆದ್ದರಿಂದ ಅದರ ಕೋಡಿಂಗ್ ಮಾಡುವಾಗ ಹಿಂದೂ ಧರ್ಮದ ಬಗ್ಗೆ ಪ್ರಶ್ನೆಗಳಿಗೆ ಆಕ್ಷೇಪಾರ್ಹ ಉತ್ತರ ನೀಡಲು ಹೇಳಲಾಗಿದೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರ ಕೂಡಲೇ ಇದರ ಕಡೆಗೆ ಗಮನಹರಿಸಿ ಅಪಮಾನವನ್ನು ತಡೆಗಟ್ಟಲು ಪ್ರಯತ್ನಿಸಬೇಕು !