ಕಾಲಕ್ಷೇಪೋ ನ ಕರ್ತವ್ಯಃ ಕ್ಷೀಣಮಾಯುಃ ಕ್ಷಣೇ ಕ್ಷಣೇ |
ಯಮಸ್ಯ ಕರುಣಾ ನಾಸ್ತಿ ಕರ್ತವ್ಯಂ ಹರಿಕೀರ್ತನಮ್ ||
ಅರ್ಥ : ಸಮಯವನ್ನು ವ್ಯರ್ಥಗೊಳಿಸಬಾರದು; ಏಕೆಂದರೆ ಆಯುಷ್ಯವು ಕ್ಷಣಕ್ಷಣಕ್ಕೆ ಕಡಿಮೆ ಆಗುತ್ತಿರುತ್ತದೆ. ಯಮರಾಜನು (ಮೃತ್ಯು ದೇವತೆ) ದಯೆ ತೋರಿಸುವುದಿಲ್ಲ; ಆದ್ದರಿಂದ ಹರಿಕೀರ್ತನೆಯಲ್ಲಿ (ನಾಮಜಪದಲ್ಲಿ) ಸಮಯವನ್ನು ಕಳೆಯಬೇಕು.
ಯಾವಾಗಲೂ ಅನಾವಶ್ಯಕ ವಿಷಯ ಮಾಡುವುದರಲ್ಲಿ ನಮ್ಮ ಸಮಯವನ್ನು ವ್ಯರ್ಥಗೊಳಿಸಬಾರದು. ಅದಕ್ಕೆ ಮೊದಲನೇ ಕಾರಣವೆಂದರೆ – ‘ಕ್ಷೀಣಮ್ ಆಯುಃ ಕ್ಷಣೆ ಕ್ಷಣೆ’, ನಮ್ಮ ಆಯುಷ್ಯವು ಪ್ರತಿಯೊಂದು ಕ್ಷಣ ಕಡಿಮೆಯಾಗುತ್ತಿದೆ. ನಮ್ಮ ವಯಸ್ಸು ಅಥವಾ ಹೊರಟು ಹೋದ ಸಮಯವು ಪುನಃ ಬರುವುದಿಲ್ಲ. ಆದುದರಿಂದ ಸಮಯವನ್ನು ವ್ಯರ್ಥಗೊಳಿಸಬೇಡಿರಿ.
ಏಕೆಂದರೆ ‘ಯಮಸ್ಯ ಕರುಣಾ ನಾಸ್ತಿ |’, ಯಮರಾಜನಿಗೆ ದಯೆ ಇಲ್ಲ. ಯಾವಾಗ ಅವನು ಬರುತ್ತಾನೆಯೋ, ಆಗ ನಾವು ಅವನಿಗೆ, ದಯವಿಟ್ಟು ನಿಲ್ಲು, ನನಗೆ ಮೊದಲು ಬ್ಯಾಂಕಿಗೆ ಹೋಗಿ ಹಣವನ್ನು ತೆಗೆದುಕೊಳ್ಳಲಿಕ್ಕಿದೆ. ಎಂದು ಹೇಳಲು ಸಾಧ್ಯವಿಲ್ಲ. ಅವನು ಕೇಳುವುದಿಲ್ಲ ಮತ್ತು ನಾವು ಅವನ ಜೊತೆಗೆ ಹೋಗಲೇಬೇಕು. ನಮ್ಮ ಕರ್ತವ್ಯ ಏನಿರಬೇಕು ? ‘ಕರ್ತವ್ಯ ಹರಿ ಕೀರ್ತನಮ್ |’ ಎಂದರೆ ಹರಿಕೀರ್ತನೆ ಮಾಡುವುದು. ಇದರಿಂದ ವ್ಯಷ್ಟಿ ಸಾಧನೆಯೇ ಮಹತ್ವದ್ದಾಗಿದೆ ಮತ್ತು ಅದನ್ನು ಆಯಾ ಸಮಯದಲ್ಲಿ ಮಾಡುವುದು ಎಷ್ಟು ಆವಶ್ಯಕವಾಗಿದೆ ? ಎಂಬುದು ಗಮನಕ್ಕೆ ಬರುತ್ತದೆ.
(ಆಧಾರ : ಸಾಮಾಜಿಕ ಮಾಧ್ಯಮ)