ದಾವೂದ ಇಬ್ರಾಹಿಂ ಎರಡನೇ ಮದುವೆ ಮಾಡಿಕೊಂಡ !

ಸೋದರಳಿಯ ಅಲಿಶಾಹಾನಿಂದ ಮಾಹಿತಿ

ನವದೆಹಲಿ – ಅಂತರರಾಷ್ಟ್ರೀಯ ಭಯೋತ್ಪಾದಕ ಮತ್ತು ಮುಂಬಯಿನ 1993 ರಂದು ನಡೆದ ಬಾಂಬ ಸ್ಫೋಟದ ಮುಖ್ಯ ಸೂತ್ರಧಾರ ದಾವೂದ ಇಬ್ರಾಹಿಂ ಪಾಕಿಸ್ತಾನದಲ್ಲಿ ಎರಡನೇ ಮದುವೆಯಾಗಿದ್ದಾನೆ. ಅವನ ಎರಡನೇ ಪತ್ನಿ ಪಾಕಿಸ್ತಾನದ ಪಠಾಣ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ದಾವೂದನ ಸಹೋದರಿ ಹಸೀನಾ ಪಾರ್ಕರ ಇವಳ ಪುತ್ರ ಅಲಿಶಾಹ ಕಳೆದ ವರ್ಷ ಸಪ್ಟೆಂಬರ ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ.ಗೆ) ನೀಡಿರುವ ಉತ್ತರದಲ್ಲಿ ಹೇಳಿರುವುದಾಗಿ ಈಗ ಬಹಿರಂಗವಾಗಿದೆ.

೧. ಎನ್.ಐ.ಎ. ಮುಂಬಯಿಯಲ್ಲಿ ಕೆಲವು ತಿಂಗಳುಗಳ ಹಿಂದೆ ದಾಳಿ ನಡೆಸಿತ್ತು. ಅದರಲ್ಲಿ ಅನೇಕರನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ಅಲೀಶಾಹನ ಉತ್ತರವನ್ನು ದಾಖಲಿಸಲಾಗಿತ್ತು. ಎನ್.ಐ.ಎ.ಯು ಈ ಸಂದಬಂಧದಲ್ಲಿ ಆರೋಪ ಪತ್ರವನ್ನು ದಾಖಲಿಸಿದ್ದು ಅದರಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಅಲಿಶಾಹ ತನ್ನ ಹೇಳಿಕೆಯಲ್ಲಿ, ದಾವೂದ ಎರಡನೇ ಮದುವೆಯಾಗಿದ್ದು, ಅವಳ ಮೊದಲನೇ ಪತ್ನಿ ಮಹಜಬೀನ ಸ್ವತಃ ನನಗೆ ಹೇಳಿದ್ದಾಳೆ ಎಂದು ತಿಳಿಸಿದ್ದಾನೆ. ದಾವೂದನು ಎರಡನೇ ಮದುವೆಯಾಗುವ ಮೊದಲು ಮೊದಲ ಪತ್ನಿಗೆ ತಲಾಕ್ ನೀಡಿಲ್ಲ.

೨. ದಾವೂದ ಇಬ್ರಾಹಿಂನ ಎರಡನೇ ಪತ್ನಿ ಎಲ್ಲಿ ವಾಸಿಸುತ್ತಾಳೆ ? ಅವಳೊಂದಿಗೆ ದಾವೂದನ ವಿವಾಹ ಯಾವಾಗ ಆಯಿತು ? ಎನ್ನುವ ಮಾಹಿತಿಯನ್ನು ಅಲಿಶಾಹ ನೀಡಿರುವುದಿಲ್ಲವೆಂದು ಈ ಆರೋಪಪತ್ರದಲ್ಲಿ ನಮೂದಿಸಲಾಗಿದೆ. ಅಲಿಶಾಹನ ಮಾಹಿತಿಯನುಸಾರ ದಾವೂದ ಇಬ್ರಾಹಿಂ ಕರಾಚಿಯ ಗಾಝಿ ಬಾಬಾ ದರ್ಗಾದ ಸಮೀಪದಲ್ಲಿರುವ ಡಿಫೆನ್ಸ ಇಲಾಖೆಯ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ.

ಸಂಪಾದಕೀಯ ನಿಲುವು

ದಾವೂದ ಎಷ್ಟು ವಿವಾಹ ಮಾಡಿಕೊಂಡಿದ್ದಾನೆ ಎನ್ನುವುದಕ್ಕಿಂತ ಅವನನ್ನು ಭಾರತಕ್ಕೆ ಕರೆತಂದು ಎಂದು ಗಲ್ಲಿಗೆ ಏರಿಸಲಾಗುವುದು ಎನ್ನುವುದು ಹೆಚ್ಚು ಮಹತ್ವದ್ದಾಗಿದೆ. ಆ ದೃಷ್ಟಿಯಿಂದ ಕೇಂದ್ರ ಸರಕಾರ ಪ್ರಯತ್ನಿಸಬೇಕು, ಎಂದು ಭಾರತೀಯರಿಗೆ ಅನಿಸುತ್ತದೆ.