ಅಬ್ದುಲ ರೆಹಮಾನ ಮಕ್ಕಿ ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಣೆ !

ಈ ಹಿಂದೆ ಚೀನಾ ಅವನನ್ನು ರಕ್ಷಿಸಲು ಪ್ರಯತ್ನಿಸಿತ್ತು !

ನ್ಯೂಯಾರ್ಕ – ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಪಾಕಿಸ್ತಾನಿ ಜಿಹಾದಿ ಭಯೋತ್ಪಾದಕ ಅಬ್ದುಲ ರೆಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಿದೆ. ಮಕ್ಕಿ ಲಷ್ಕರ-ಎ-ತೋಯ್ಬಾ ಸಂಘಟನೆಯ ಮುಖಂಡ ಮತ್ತು ಮುಂಬಯಿ ಮೇಲೆ ನಡೆದ ದಾಳಿಯ ಪ್ರಮುಖ ಸೂತ್ರಧಾರ ಹಾಫೀಜ ಸಯಿದನ ಸೋದರ ಮಾವನಾಗಿದ್ದಾನೆ. ಅವನನ್ನು ಅಂತರರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಿದ್ದರಿಂದ ಈಗ ಜಗತ್ತಿನಾದ್ಯಂತ ಇರುವ ಅವನ ಸಂಪತ್ತನ್ನು ಸೀಲ್ ಮಾಲಾಗುವುದು. ಮಕ್ಕಿ ಇನ್ನು ಮುಂದೆ ಶಸ್ತ್ರಾಸ್ತ್ರ ಖರೀದಿಸಲು ಸಾಧ್ಯವಿಲ್ಲ ಮತ್ತು ಅವನ ವಾಸಸ್ಥಾನ ವ್ಯಾಪ್ತಿಯಿಂದ ಹೊರಗೆ ಪ್ರವಾಸವನ್ನು ಮಾಡಲು ಸಾಧ್ಯವಿಲ್ಲ. ಭಾರತ ಮತ್ತು ಅಮೇರಿಕಾ ಈ ಹಿಂದೆಯೂ ಮಕ್ಕಿಯನ್ನು ತಮ್ಮ ದೇಶದ ಕಾನೂನಿನ ವ್ಯಾಪ್ತಿಯೊಳಗೆ ಭಯೋತ್ಪಾದಕನೆಂದು ಘೋಷಿಸಿದೆ. ಮಕ್ಕಿ ಹಣವನ್ನು ಸಂಗ್ರಹಿಸಲು, ಯುವಕರನ್ನು ಉಗ್ರರನ್ನಾಗಿ ಮಾಡಲು ಹಾಗೆಯೇ ಭಾರತದಲ್ಲಿ (ವಿಶೇಷವಾಗಿ ಜಮ್ಮೂ ಮತ್ತು ಕಾಶ್ಮೀರದಲ್ಲಿ) ದಾಳಿ ನಡೆಸುವ ಯೋಜನೆಯನ್ನು ತಯಾರಿಸುವಲ್ಲಿ ಮಗ್ನನಾಗಿದ್ದನು. ಕಳೆದ ವರ್ಷ ಜೂನ್ ನಲ್ಲಿ ಮಕ್ಕಿಯನ್ನು ಅಂತರರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸುವಂತೆ ಭಾರತದ ಪ್ರಯತ್ನಗಳಿಗೆ ಚೀನಾ ಅಡ್ಡಿ ಪಡಿಸಿತ್ತು; ಆದರೆ ಈ ಬಾರಿ ಚೀನಾ ಮಕ್ಕಿಯನ್ನು ಬೆಂಬಲಿಸಲಿಲ್ಲ.