ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಧರ್ಮ ಸಂಕಟದ ಬಗ್ಗೆ ಹೇಳಿದ ಮಾತುಗಳ ಬಗ್ಗೆ ಕು. ತೇಜಸನ ವಿಚಾರಗಳನ್ನು ಇಲ್ಲಿ ಕೊಡುತ್ತಿದ್ದೇವೆ.
ಜಗತ್ತಿನಲ್ಲಿ ಪ್ರತಿ ವ್ಯಕ್ತಿಯ ಜೀವನದಲ್ಲಿ ಈ ಕ್ಷಣ ಬಂದೇ ಬರುತ್ತದೆ. ಯಾವಾಗ ನಮ್ಮ ಕನಸು, ಎಲ್ಲಾ ಆಸೆ ಭಸ್ಮ ಆಗಿಬಿಡುತ್ತದೆ ಮತ್ತು ನಮ್ಮ ಜೀವನದ ಎಲ್ಲಾ ಆ ಯೋಜನೆಗಳು ಚೂರು ಚೂರು ಆಗುತ್ತವೆ. ಒಂದು ಕಡೆ ಧರ್ಮ ಇರುತ್ತದೆ, ಇನ್ನೊಂದು ಕಡೆ ದುಃಖ ಇರುತ್ತದೆ. ಇದನ್ನೇ ಧರ್ಮಸಂಕಟ ಎನ್ನುತ್ತಾರೆ.
ಯಾವತ್ತಾದರೂ ನಮ್ಮವರ ವಿರುದ್ಧವಾಗಿ ಸತ್ಯವನ್ನು ಹೇಳುವ ಅವಕಾಶ ಸಿಗುತ್ತದೆ. ಬಡತನದ ಸಮಯದಲ್ಲಿ ಕಳ್ಳತನ ಮಾಡುವ ಮನಸ್ಸಾಗುತ್ತದೆ. ಹಾಗೆ ರಾಜನ ಅಥವಾ ಅವನ ಕರ್ಮಚಾರಿಯ ಅಧರ್ಮದ ಎದುರು ಹೋರಾಡುವ ಅವಕಾಶ ಸಿಗುತ್ತದೆ. ಎಲ್ಲರ ಜೀವನದಲ್ಲಿ ಈ ಒಂದು ಕ್ಷಣ ಬಂದೇ ಬರುತ್ತದೆ. ಇದೇ ‘ಧರ್ಮಸಂಕಟ’ ಎಂದು ತುಂಬಾ ಜನರಿಗೆ ತಿಳಿದಿರುವುದಿಲ್ಲ. ನಮಗೆ ಯಾವುದೇ ರೀತಿಯ ಸಂಘರ್ಷದ ಅನುಭವವೇ ಆಗುವುದಿಲ್ಲ. ಆಗ ನಾವು ಬೆಲ್ಲದ ಕಡೆ ಹೋಗುವ ಇರುವೆ ಹಾಗೆ ಸುಖದ ಕಡೆ ಹೋಗುತ್ತೇವೆ. ಆದರೆ ಧರ್ಮ ಸಂಕಟದ ಈ ಕ್ಷಣ ವಾಸ್ತವದಲ್ಲಿ ಈಶ್ವರನ ಹತ್ತಿರ ಹೋಗುವ ಕ್ಷಣವಾಗಿರುತ್ತದೆ. ಇಂತಹ ಸಮಯದಲ್ಲಿ ನಾವು ಧರ್ಮ ಸಂಕಟಕ್ಕೆ ಹೆದರದೆ, ಕೇವಲ ಸುಖಕ್ಕಾಗಿ ಹಾತೊರೆಯದೆ ಹಾಗೂ ಧರ್ಮದಲ್ಲಿ ದೃಢವಾಗಿದ್ದರೆ ಈಶ್ವರನ ಸಾಕ್ಷಾತ್ಕಾರ ದೂರ ಇಲ್ಲ .
ಗಾಳಿಯ ವೇಗದಿಂದ ಮರದ ಎಲೆ ಕೆಳಗೆ ಬಿದ್ದರೂ ಬೀಳುವ ಮೊದಲು ಆಕಾಶದೆಡೆಗೆ ಹೋಗಿ ಬೀಳುತ್ತದೆ. ಆದರೆ ಗಾಳಿಯ ವೇಗಕ್ಕೆ ಹೆದರಿದ ಹುಲ್ಲು ಅಲ್ಲೇ ನೆಲದಮೇಲೆ ಇರುತ್ತದೆ. ಇದರ ಅರ್ಥ ನಾವು ಧರ್ಮ ಸಂಕಟದಿಂದ ಸಂಕಟವನ್ನೇ ತೆಗೆದು ಇಟ್ಟರೆ ನಮಗೆ ಸುಖವಂತು ಸಿಗುತ್ತೆ ಜೀವನವೂ ಮುಂದಕ್ಕೆ ಸಾಗುತ್ತದೆ. ಆದರೆ ನಾವು ಚರಿತ್ರೆ ಹೀನರಾಗುವುದಿಲ್ಲದೇ ನಮ್ಮ ಆತ್ಮ ದರಿದ್ರ ಆಗುವುದಿಲ್ಲವೇ ? ಪರಮಾತ್ಮನಿಂದ ಅಂತರ ಆಗುವುದಿಲ್ಲವೇ ನೀವೆ ಯೋಚಿಸಿ ನೋಡಿ.
ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |
– ಕು. ತೇಜಸ್ .ಕೆ, ಹೊಸಪೇಟೆ.