‘ಚಿತ್ತಶುದ್ಧಿ ಬೇಗನೇ ಆಗಲು ಪ್ರತಿಯೊಬ್ಬರಿಗೂ ಯಾವ ಯೋಗಮಾರ್ಗದ ಸಾಧನೆ ಆವಶ್ಯಕವಾಗಿದೆ ?’, ಎಂಬುದನ್ನು ಬೇಗನೇ ಗುರುತಿಸುವ ಹಂತಗಳು !

ಶ್ರೀ. ರಾಮ ಹೊನಪ

೧. ಪ್ರತಿಯೊಬ್ಬ ಮನುಷ್ಯನ ಮೂಲಾಧಾರ ಚಕ್ರದಲ್ಲಿರುವ ‘ಜ್ಞಾನ’ದಲ್ಲಿ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗವು ಅಡಕವಾಗಿರುವುದು

‘ಪ್ರತಿಯೊಬ್ಬ ಮನುಷ್ಯನ ಕುಂಡಲಿನಿಯ ಮೂಲಾಧಾರಚಕ್ರದಲ್ಲಿ ಈಶ್ವರೀ ಶಕ್ತಿಯ ವಾಸವಿರುತ್ತದೆ. ಅದರಲ್ಲಿ ‘ಜ್ಞಾನ’ವಿರುತ್ತದೆ. ಈ ಜ್ಞಾನವು ಈಶ್ವರನು ಮನುಷ್ಯನಿಗೆ ನೀಡಿರುವ ದೈವೀ ಕೊಡುಗೆಯಾಗಿದೆ. ಯಾವಾಗ ಸಾಧಕನ ಸಾಧನೆ ವೃದ್ಧಿಯಾಗುತ್ತದೆಯೋ, ಆಗ ಈ ಜ್ಞಾನವು ಜಾಗೃತವಾಗುತ್ತದೆ. ಈ ಜ್ಞಾನದಲ್ಲಿಯೇ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗ ಅಡಕವಾಗಿರುತ್ತದೆ. ಈ ಕುರಿತಾದ ಜ್ಞಾನವು ಸಾಧಕನಿಗೆ ಸಾಧನೆಯಿಂದ ತನಗೇ ಬರಬಹುದು ಅಥವಾ ಆ ಸಾಧಕನಿಗೆ ಈ ಜ್ಞಾನವನ್ನು ಮಾಡಿಕೊಡಲು ಗುರುಗಳ ಅವಶ್ಯಕತೆ ಬೀಳಬಹುದು.

೨. ಸಾಧಕನ ಸಾಧನೆಯಿಂದ ಮೂಲಾಧಾರಚಕ್ರದಲ್ಲಿನ ‘ಜ್ಞಾನ’ವು ಜಾಗೃತವಾದ ಕೂಡಲೇ ಅವನು ಈಶ್ವರಪ್ರಾಪ್ತಿಗಾಗಿ ಆವಶ್ಯಕವಿರುವ ವಿಶಿಷ್ಟಯೋಗಮಾರ್ಗದ ಕಡೆಗೆ ಆಕರ್ಷಿಸಲ್ಪಡುವುದು

ಯಾವಾಗ ಸಾಧಕನ ಸಾಧನೆಯ ವೃದ್ಧಿ ಆಗುತ್ತದೆಯೋ, ಆಗ ಅವನ ಮೂಲಾಧಾರಚಕ್ರದ ಸ್ಥಳದಲ್ಲಿರುವ ಸುಪ್ತ ಜ್ಞಾನ ಜಾಗೃತವಾಗುತ್ತದೆ. ಆ ಜ್ಞಾನದಿಂದಾಗಿ ಸಾಧಕನು ಈಶ್ವರಪ್ರಾಪ್ತಿಗಾಗಿ ಆವಶ್ಯಕವಿರುವ ಯೋಗಮಾರ್ಗದ ಕಡೆಗೆ ಆಕಷಿಸಲ್ಪಡುವನು, ಉದಾ. ಸಾಧಕನ ಮಾರ್ಗ ಭಕ್ತಿಯೋಗವಾಗಿದ್ದರೆ ಅವನ ಮನಸ್ಸು ‘ದೇವರ ಉಪಾಸನೆ ಅಥವಾ ನಾಮಸ್ಮರಣೆ’ಯ ಕಡೆಗೆ ಆಕರ್ಷಿಸಲ್ಪಡುತ್ತದೆ. ಸಾಧಕನು ಧ್ಯಾನ ಯೋಗಿಯಾಗಿದ್ದರೆ ಅವನು ಧ್ಯಾನಯೋಗದ ಕಡೆಗೆ ಆಕರ್ಷಿಸಲ್ಪಡುತ್ತಾನೆ. ಆಗ ಸಾಧಕನು ಇಂತಹ ವಿಶಿಷ್ಟ ಯೋಗಮಾರ್ಗವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ.

೩. ಸಾಧಕನಿಗೆ ವಿಶಿಷ್ಟ ಯೋಗಮಾರ್ಗದ ಆಕರ್ಷಣೆ ನಿರ್ಮಾಣವಾದ ನಂತರ ಹಂತಹಂತವಾಗಿ ಘಟಿಸುವ ಮುಂದಿನ ಪ್ರಕ್ರಿಯೆ

೩ ಅ. ಮನಸ್ಸು ಸಾಧನೆಯಲ್ಲಿ ಬೇಗನೇ ಏಕಾಗ್ರವಾಗುವುದು : ಸಾಧಕನಿಗೆ ವಿಶಿಷ್ಟ ಯೋಗಮಾರ್ಗದ ಆಕರ್ಷಣೆ ನಿರ್ಮಾಣವಾದ ನಂತರ ಅವನು ಆ ಮಾರ್ಗದಿಂದ ಹೋಗುವಾಗ ಅವನ ಮನಸ್ಸು ಆ ಯೋಗಮಾರ್ಗದಲ್ಲಿ ಬೇಗನೇ ಏಕಾಗ್ರವಾಗುತ್ತದೆ.

೩ ಆ. ಸಾಧನೆಯ ‘ಸೆಳೆತ’ ನಿರ್ಮಾಣವಾಗುವುದು : ಸಾಧಕನ ಮನಸ್ಸು ವಿಶಿಷ್ಟ ಯೋಗಮಾರ್ಗದಲ್ಲಿ ಏಕಾಗ್ರವಾಗಲು ಆರಂಭವಾಗತೊಡಗಿದ ನಂತರ ಅವನಿಗೆ ಆ ಯೋಗಮಾರ್ಗದ ‘ಸೆಳೆತ’ ನಿರ್ಮಾಣವಾಗುತ್ತದೆ.

೩ ಇ. ಈಶ್ವರೀತತ್ತ್ವದ ಅನುಭೂತಿ ಬೇಗನೇ ಬರುವುದು : ಸಾಧಕನಿಗೆ ಅನುಕೂಲಕರ ವಿಶಿಷ್ಟ ಯೋಗಮಾರ್ಗದ ಸೆಳೆತ ನಿರ್ಮಾಣವಾಯಿತೆಂದರೆ, ಅವನಿಗೆ ಈಶ್ವರೀ ತತ್ತ್ವದ ಅನುಭೂತಿಯು ಬೇಗನೆ ಬರುತ್ತದೆ. ಇದರಿಂದ ಸಾಧಕನ ಮನಸ್ಸು ಯಾವ ಮಾರ್ಗದ ಕಡೆಗೆ ಆಕರ್ಷಿಸಲ್ಪಡುತ್ತದೆಯೋ, ಅದರಲ್ಲಿ ಬೇಗನೇ ಏಕಾಗ್ರವಾಗುತ್ತದೆ. ಆ ಯೋಗಮಾರ್ಗದ ಸೆಳೆತ ಮೂಡುತ್ತದೆ ಹಾಗೂ ಅವನಿಗೆ ಅಲ್ಪಾವಧಿಯಲ್ಲಿಯೇ ಈಶ್ವರೀ ತತ್ತ್ವದ ಅನುಭೂತಿ ಬರುತ್ತದೆ. ಅದು ಸಾಧಕನ ಈಶ್ವರಪ್ರಾಪ್ತಿಗಾಗಿ ಆವಶ್ಯಕವಿರುವ ವಿಶಿಷ್ಟ ಯೋಗಮಾರ್ಗ ಎಂದು ತಿಳಿಯಬೇಕು.

೪. ವಿಶಿಷ್ಟ ಯೋಗಮಾರ್ಗದಿಂದ ಬಂದ ಅನುಭೂತಿಯಿಂದ ಸಾಧಕನು ಚಿತ್ತಶುದ್ಧಿಗಾಗಿ ಪ್ರಯತ್ನ ಮಾಡುವುದು

ಸಾಧಕನಿಗೆ ವಿಶಿಷ್ಟ ಯೋಗಮಾರ್ಗದಿಂದ ಅನುಭೂತಿಗಳು ಬರತೊಡಗಿದರೆ, ಅವನಿಗೆ ಚಿತ್ತದಲ್ಲಿನ ಸ್ವಭಾವದೋಷ ಹಾಗೂ ಅಹಂನ ಅಡಚಣೆಗಳನ್ನು ದೂರಗೊಳಿಸುವ ತೀವ್ರ ಇಚ್ಛೆ ಮೂಡುತ್ತದೆ ಹಾಗೂ ಅವನು ಅದಕ್ಕಾಗಿ ಪ್ರಯತ್ನಿಸತೊಡಗುತ್ತಾನೆ.’

– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾಗಿರುವ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ. (೨೮.೫.೨೦೨೨)