ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಕನ್ನಡ ಭಾಷೆಯಲ್ಲಿ ೩ ದಿನಗಳ ಸಾಧನಾ ಶಿಬಿರ

ದೀಪಪ್ರಜ್ವಲನೆಯನ್ನು ಮಾಡುತ್ತಿರುವಾಗ ಶ್ರೀ. ಶಿವನ ಗೌಡ ಬರಮಗೌಡರ ಮತ್ತು ಸೌ. ಮಂಜುಳಾ ರಮಾನಂದ ಗೌಡ

ರಾಮನಾಥಿ (ಗೋವಾ) – ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯ ಸನಾತನದ ಆಶ್ರಮದ ಚೈತನ್ಯಮಯ ವಾತಾವರಣದಲ್ಲಿ ೬ ಜನವರಿ ೨೦೨೩ ರಂದು ಕನ್ನಡ ಭಾಷೆಯ ಸಾಧನಾ ಶಿಬಿರವು ಜರುಗಿತು. ೩ ದಿನಗಳ ಕಾಲ ನಡೆದ ಈ ಶಿಬಿರವನ್ನು ಶಂಖನಾದದಿಂದ ಆರಂಭಿಸಲಾಯಿತು. ಬಾಗಲಕೋಟೆಯ ಹಿತಚಿಂತಕರಾದ ಶ್ರೀ. ಶಿವನ ಗೌಡ ಬರಮಗೌಡರ (ಆಧ್ಯಾತ್ಮಿಕ ಮಟ್ಟ ಶೇ. ೬೩) ಮತ್ತು ಸನಾತನದ ಸಾಧಕಿ ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೬) ಇವರ ಹಸ್ತದಿಂದ ದೀಪ ಪ್ರಜ್ವಲನೆ ಮಾಡಲಾಯಿತು. ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಜ್ಞಾಸುಗಳು ಮತ್ತು ಹಿತಚಿಂತಕರು ಸಹಭಾಗಿಯಾಗಿದ್ದರು. ಇದರಲ್ಲಿ ಆಧ್ಯಾತ್ಮಿಕ ಸಾಧನೆಯ ಮಹತ್ವ, ಸ್ವಭಾವದೋಷ ನಿರ್ಮೂಲನೆ, ಹಿಂದೂ ರಾಷ್ಟ್ರದ ಅವಶ್ಯಕತೆ, ಸಂಕಟಕಾಲದ ತಯಾರಿ ಮುಂತಾದ, ವಿಷಯಗಳನ್ನು ಕಲಿಸಲಾಯಿತು.

ಅಭಿಪ್ರಾಯ

೧. ಸನಾತನ ಸಂಸ್ಥೆಯ ಆಶ್ರಮವೆಂದರೆ ಹಿಂದೂ ರಾಷ್ಟ್ರದ ಮಾದರಿಯಾಗಿದೆ. ಎಲ್ಲಾ ಕಡೆ ಇಂತಹ ಆದರ್ಶ ಸ್ಥಾಪನೆ ಮಾಡಲು ಪ್ರಯತ್ನಿಸುವೆ. – ಶ್ರೀ. ಅಭಿಷೇಕ, ಬೆಂಗಳೂರು.

೨. ವ್ಯಷ್ಟಿ, ಸಮಷ್ಟಿ ಸಾಧನೆ ತಿಳಿಯಿತು. ರಾಮನಾಥಿ ಆಶ್ರಮ ಎಂದರೆ ಭೂವೈಕುಂಠವಾಗಿದೆ. ಇಲ್ಲಿ ಗುರುದೇವರೆಂದರೆ ಸಾಕ್ಷಾತ್ ಶ್ರೀಕೃಷ್ಣ – ಕು. ಲತಾ ನಾಯ್ಕೋಡಿ, ವಿಜಯಪುರ