
‘ಸಾಮಾನ್ಯವಾಗಿ ಸಾಧಕರಿಗೆ ಎಂದಿನ ತಮ್ಮ ಸೇವೆಯನ್ನು (ಉದಾ. ಗ್ರಂಥಸಂಕಲನ, ಗಣಕಯಂತ್ರದಲ್ಲಿ ಚಿತ್ರಗಳನ್ನು ಸಿದ್ಧಪಡಿಸುವುದು) ಮಾಡಲು ಇಷ್ಟವಾಗುತ್ತದೆ. ಆದುದರಿಂದ ಅವರು ಈ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಾರೆ. ಈ ಸೇವೆಗಳಲ್ಲಿ ಅವರ ಮನಃಪೂರ್ವಕ ಪಾಲ್ಗೊಳ್ಳುವಿಕೆ ಚೆನ್ನಾಗಿರುವುದರಿಂದ ಅವರಿಂದ ಸೇವೆಯನ್ನು ಮಾಡುವಾಗ ಭಾವದ ಸ್ತರದಲ್ಲಿ ಪ್ರಯತ್ನಗಳಾಗುತ್ತವೆ. ಆದ್ದರಿಂದ ಅವರಿಗೆ ಸೇವೆಯಿಂದ ಹೆಚ್ಚು ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ; ಆದರೆ ಕೆಲವರು ಸಾಧಕರು ಆಶ್ರಮ ಸ್ವಚ್ಛತೆಯ ಸೇವೆ, ಅನಾರೋಗ್ಯದಲ್ಲಿರುವ ಅಥವಾ ವಯಸ್ಕರರ ಸೇವೆ ಇತ್ಯಾದಿ ಸೇವೆಗಳನ್ನು ‘ಸೇವೆಯನ್ನು ಮಾಡಲು ಹೇಳಿದ್ದಾರೆಂದು ಮಾಡುವುದು’, ಈ ರೀತಿಯಲ್ಲಿ ಮಾಡುತ್ತಾರೆ. ಇದರಲ್ಲಿ ಅವರ ಮನಸ್ಸಿನ ಪಾಲ್ಗೊಳ್ಳುವಿಕೆ ಕಡಿಮೆ ಇರುವುದರಿಂದ ಅವರಿಂದ ಸೇವೆಯಲ್ಲಿ ಭಾವದ ಸ್ತರದಲ್ಲಿ ವಿಶೇಷ ಪ್ರಯತ್ನವಾಗುವುದಿಲ್ಲ, ಹಾಗೆಯೇ ‘ಈ ಸೇವೆಯನ್ನು ಹೆಚ್ಚೆಚ್ಚು ಹೇಗೆ ಚೆನ್ನಾಗಿ ಮಾಡಲಿ ?’, ಎಂಬುದರ ಬಗ್ಗೆ ಅವರಿಗೆ ಹೊಳೆಯುವುದಿಲ್ಲ. ಆದುದರಿಂದ ಇಂತಹ ಸೇವೆಗಳಿಂದ ಅವರು ಅಪೇಕ್ಷಿತ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇದರ ಅರ್ಥ, ಸೇವೆ ಮಾಡುವ ಉದ್ದೇಶವೇ ಸಾರ್ಥಕವಾಗುವುದಿಲ್ಲ. ಸಾಧಕರು ‘ತಮ್ಮಿಂದ ಈ ರೀತಿ ಆಗುತ್ತಿಲ್ಲವಲ್ಲ ?’, ಎಂಬುದನ್ನು ಅಂತರ್ಮುಖವಾಗಿ ವಿಚಾರ ಮಾಡಬೇಕು.
ಪ್ರತಿಯೊಂದು ಸೇವೆಯನ್ನು ಮಾಡುವಾಗ ‘ದೇವರು ಈ ಸೇವೆಯಿಂದ ನನ್ನ ಪ್ರೇಮಭಾವ ಮತ್ತು ಸೇವಾಭಾವವನ್ನು ಹೆಚ್ಚಿಸಲಿದ್ದಾನೆ’, ‘ದೇವರು ಈ ಸೇವೆಯಿಂದ ನನ್ನ ಮನೋಲಯ ಮತ್ತು ಬುದ್ಧಿಲಯವನ್ನು ಮಾಡಿಸಿಕೊಳ್ಳಲಿದ್ದಾನೆ’, ಇತ್ಯಾದಿ ದೃಷ್ಟಿಕೋನವನ್ನಿಟ್ಟರೆ ಆ ಸೇವೆಯಲ್ಲಿ ಮನಃಪೂರ್ವವಾಗಿ ತೊಡಗಿ ಆ ಸೇವೆಯು ಭಾವಪೂರ್ಣವಾಗಲು ಸಹಾಯವಾಗುತ್ತದೆ.’
– (ಪೂ.) ಸಂದೀಪ ಆಳಶಿ (೧೪.೧೨.೨೦೨೨)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು