ಸಕಾರಾತ್ಮಕವಿರುವ ಮತ್ತು ಗುರುದೇವರ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ (೧೧ ವರ್ಷ) !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕು. ಪ್ರಾರ್ಥನಾ ಮಹೇಶ ಪಾಠಕ

‘ಒಮ್ಮೆ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗವು ಲಭಿಸಿತು. ಆಗ ನಮ್ಮಲ್ಲಾದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

೧. ಪ್ರತಿಯೊಂದು ಪ್ರಸಂಗವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುವ ಕು. ಪ್ರಾರ್ಥನಾ !

ಕು. ಪ್ರಾರ್ಥನಾ ಪಾಠಕ : ‘ಪರಮ ಪೂಜ್ಯ, ನಾನು ಈ ಸತ್ಸಂಗಕ್ಕೆ ಬರುವಾಗ ತುಂಬಾ ಮಳೆ ಬರುತ್ತಿತ್ತು. ಆಗ ನನಗೆ ‘ವರುಣದೇವನು ತಮ್ಮ ಸತ್ಸಂಗಕ್ಕೆ ಬಂದಿದ್ದಾನೆ ಮತ್ತು ತಮ್ಮ ಆಶೀರ್ವಾದವನ್ನು ಪಡೆಯುತ್ತಿದ್ದಾನೆ’, ಎಂದೆನಿಸಿತು.

ಪರಾತ್ಪರ ಗುರು ಡಾ. ಆಠವಲೆ : ದೈವೀ ಬಾಲಕರು ಎಲ್ಲ ಪ್ರಸಂಗಗಳ ಕಡೆಗೆ ಹೇಗೆ ಸಕಾರಾತ್ಮಕ ದೃಷ್ಟಿಯಿಂದ ನೋಡುತ್ತಾರಲ್ಲ ! ನಾವಾದರೆ, ‘ಜೋರಾಗಿ ಮಳೆ ಬರುತ್ತಿದೆ, ಸತ್ಸಂಗಕ್ಕೆ ಹೇಗೆ ಹೋಗುವುದು ?’ ಎಂಬ ವಿಚಾರ ಮಾಡುತ್ತಿದ್ದೆವು. ತುಂಬಾ ಚೆನ್ನಾಗಿದೆ !

೨. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಕು. ಪ್ರಾರ್ಥನಾ ಪಾಠಕ ಇವಳಲ್ಲಿ ಇರುವ ಅಪಾರ ಭಾವ

೨ ಅ. ಕು. ಪ್ರಾರ್ಥನಾ ‘ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿಯೊಂದು ಯುಗದಲ್ಲಿರುತ್ತಾರೆ; ಆದ್ದರಿಂದ ನಾನು ಅವರ ಜೊತೆಗೆ ಇರುತ್ತೇನೆ’, ಎಂದು ಹೇಳುವುದು

ಕು. ಪ್ರಾರ್ಥನಾ ಪಾಠಕ : ಸತ್ಯ, ತ್ರೇತಾ ಮತ್ತು ದ್ವಾಪರ ಈ ಯುಗಗಳಲ್ಲಿ ತಾವು ನಮ್ಮ ಜೊತೆಯಲ್ಲಿಯೇ ಇದ್ದೀರಿ.

ಪರಾತ್ಪರ ಗುರು ಡಾ. ಆಠವಲೆ : ಆದರೆ ನೀವು ಪುನಃ ಪುನಃ ಏಕೆ ಜನ್ಮ ಪಡೆಯುತ್ತೀರಿ ? ಮೋಕ್ಷಕ್ಕೆ ಏಕೆ ಹೋಗುವುದಿಲ್ಲ ?

ಕು. ಪ್ರಾರ್ಥನಾ ಪಾಠಕ : ನೀವು ಇರುವುದರಿಂದ ನಾನು ಬರುತ್ತೇನೆ.

೨ ಆ. ಪ್ರಾರ್ಥನಾಳಿಗೆ ಅರಿವಾದ ಪ್ರತಿಯೊಂದು ಯುಗದಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ರೂಪ ಮತ್ತು ಸಾಧಕರ ರೂಪಗಳು

ಕು. ಪ್ರಾರ್ಥನಾ ಪಾಠಕ : ತ್ರೇತಾಯುಗದಲ್ಲಿ ಎಲ್ಲ ಸಾಧಕರು ವಾನರಸೇನೆಗಳಿದ್ದರು.

ಪರಾತ್ಪರ ಗುರು ಡಾ. ಆಠವಲೆ : ಅರೆ, ಪ್ರಾರ್ಥನಾ ಹೇಗೆ ಯೋಗ್ಯವಾದುದನ್ನೇ ಮಾತನಾಡುತ್ತಾಳಲ್ಲ, ಶ್ರೀರಾಮನ ತ್ರೇತಾಯುಗ !

ಕು. ಪ್ರಾರ್ಥನಾ ಪಾಠಕ : ನನಗೆ ‘ನಾನು ಒಂದು ಚಿಕ್ಕ ಅಳಿಲು ಆಗಿದ್ದೇನೆ’, ಎಂದೆನಿಸುತ್ತದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನಿದ್ದನು. ಆಗ ನಾವೆಲ್ಲರೂ ಗೋಪ-ಗೋಪಿಯರಾಗಿದ್ದೆವು. ಈಗ ಕಲಿಯುಗದಲ್ಲಿ ನಾವೆಲ್ಲರೂ ಸಾಧಕರಿದ್ದೇವೆ ಮತ್ತು ತಾವು ವಿಷ್ಣು ಆಗಿರುವಿರಿ.

ಪರಾತ್ಪರ ಗುರು ಡಾ. ಆಠವಲೆ : ವಯಸ್ಸಿನಲ್ಲಿ ದೊಡ್ಡವನಾಗಿರುವ ಯಾರಾದರೊಬ್ಬ ಸಾಧಕನು ಹೀಗೆ ವಿಚಾರವನ್ನು ಮಾಡಬಹುದೇ ?

– ಕು. ಪ್ರಾರ್ಥನಾ ಪಾಠಕ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೧೧), ಪುಣೆ.