ಹಿಂದೂ ಜನಜಾಗೃತಿ ಸಮಿತಿಯಿಂದ ಹುಬ್ಬಳ್ಳಿ, ಬೆಳಗಾವಿ, ಮತ್ತು ಶಿವಮೊಗ್ಗದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ

(ಎಡದಿಂದ) ಶ್ರೀ. ಚೇತನ ರಾಜಹಂಸ, ನ್ಯಾಯವಾದಿ ಅಶೋಕ ಪೋತದಾರ, ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ. ಹೃಷಿಕೇಶ ಗುರ್ಜರ್

ಹುಬ್ಬಳ್ಳಿ

ಲ್ಯಾಂಡ್ ಜಿಹಾದ್ ಮೂಲಕ ಹಿಂದೂಗಳ ಆಸ್ತಿ ಕಸಿದುಕೊಳ್ಳುವ ಷಡ್ಯಂತ್ರ !- ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹುಬ್ಬಳ್ಳಿ : ‘ಕರ್ನಾಟಕದಲ್ಲಿ ೨೦೧೪ ರಿಂದ ೨೦೧೯ ರವರೆಗೆ ಸುಮಾರು ೨೧ ಸಾವಿರ ಹಿಂದೂ ಯುವತಿಯರು ನಾಪತ್ತೆಯಾಗಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿಯರನ್ನು ಮತಾಂತರಿಸಿ, ಹಿಂದೂ ಧರ್ಮವನ್ನು ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಲ್ಯಾಂಡ್ ಜಿಹಾದ್ ಮೂಲಕ ಹಿಂದೂಗಳ ಆಸ್ತಿ ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ’, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಕಳವಳ ವ್ಯಕ್ತಪಡಿಸಿದರು. ಅವರು ಹುಬ್ಬಳ್ಳಿಯಲ್ಲಿ ಜನವರಿ ೭ ಮತ್ತು ೮ ರಂದು ಆಯೋಜಿಸಿದ್ದ  ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದ ಇವರು ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.

ಬೆಳಗಾವಿ

ಹಿಂದೂ ಧರ್ಮಕ್ಕಾಗಿ ಕಾರ್ಯ ಮಾಡಲು ಸಂವಿಧಾನದ ಅಧ್ಯಯನ ಮಾಡಬೇಕು ! – ಹಿರಿಯ ನ್ಯಾಯವಾದಿ ಅಶೋಕ ಪೋತದಾರ

‘ಪ್ರಸ್ತುತ ಹಿಂದೂಗಳ ಮೇಲಿನ ದಾಳಿಗಳನ್ನು ತಡೆಯಬೇಕಾದರೆ ಹಿಂದೂಗಳನ್ನು ಸಂಘಟಿಸುವುದು ಬಹಳ ಅವಶ್ಯಕ. ಇದಕ್ಕಾಗಿ ಜಿಲ್ಲೆಯ ಎಲ್ಲೆಡೆ ಇಂತಹ ಕಾರ್ಯಕ್ರಮಗಳು (ಹಿಂದೂ ರಾಷ್ಟ್ರ ಅಧಿವೇಶನಗಳು) ನಿರಂತರವಾಗಿ ನಡೆಯಬೇಕು. ಹಿಂದೂ ಧರ್ಮಕ್ಕಾಗಿ ಶ್ರಮಿಸಲು ಎಲ್ಲರೂ ಸಂವಿಧಾನವನ್ನು ಅಧ್ಯಯನ ಮಾಡಬೇಕು’, ಎಂದು ಹಿರಿಯ ನ್ಯಾಯವಾದಿ ಅಶೋಕ ಪೋತದಾರ ಇವರು ಕರೆ ನೀಡಿದರು. ಅವರು ಜನವರಿ ೮ ನೆರವೇರಿದ ಒಂದು ದಿನದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ‘ಹಿಂದೂ ರಾಷ್ಟ್ರ ಏಕೆ ಬೇಕು ?’ ಎಂಬುದನ್ನು ವಿವರಿಸುತ್ತಾ, ”ಇಂದು ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ಥೂಕ ಜಿಹಾದ್ ಎಂಬ ಭಯಾನಕ ಪಿತೂರಿಗಳಿಂದ ಬಳಲುತ್ತಿದ್ದಾರೆ. ಇದನ್ನೆಲ್ಲ ನಿಲ್ಲಿಸಲು ಭಾರತ ಹಿಂದೂ ರಾಷ್ಟ್ರವಾಗುವುದು ಅನಿವಾರ್ಯವಾಗಿದೆ”, ಎಂದರು. ಲೋಕಸೇವಾ ಪ್ರತಿಷ್ಠಾನದ ಶ್ರೀ. ವೀರೇಶ ಹಿರೇಮಠ ಇವರು ‘ದೇವತೆಗಳ ಚಿತ್ರಗಳನ್ನು ಹೇಗೆ ವಿಡಂಬನೆ ಮಾಡಲಾಗುತ್ತಿದೆ’ ಎಂಬುದನ್ನು ವಿವರಿಸಿದರು.

ಶಿವಮೊಗ್ಗ

ಹಿಂದೂಗಳೇ ಧರ್ಮಕ್ಕಾಗಿ ಸಮಯ ನೀಡಿ ! – ಶ್ರೀ. ಸಂದೀಪ, ಹಿಂದೂ ರಾಷ್ಟ್ರ ಸೇನೆ

ಶಿವಮೊಗ್ಗ : ಹಲವಾರು ಸಂಘಟನೆಗಳು ಬೇರೆ ಬೇರೆ ಉದ್ದೇಶಕ್ಕಾಗಿ ಕಾರ್ಯ ಮಾಡುತ್ತಿವೆ. ಆದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲ ಸಂಘಟನೆಗಳು ಒಂದಾಗುವ ಅವಶ್ಯಕತೆಯಿದೆ. ಅದಕ್ಕಾಗಿ ಇಂದು ಧರ್ಮಕ್ಕಾಗಿ ಸಮಯ ನೀಡುವ ಅವಶ್ಯಕತೆಯಿದೆ’, ಎಂದು ಶ್ರೀ. ಸಂದೀಪ ಇವರು ಕರೆ ನೀಡಿದರು. ಅವರು ಜನವರಿ ೭ ಮತ್ತು ೮ ರಂದು ಶಿವಮೊಗ್ಗದಲ್ಲಿ ಆಯೋಜಿಸಿದ್ದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಡಾ. ಮಂಜುನಾಥ ಪಾಂಡೆಯವರು ಮಾತನಾಡುತ್ತಾ ‘ಇಂದಿನ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತಆಕರ್ಷಿತರಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ’, ಎಂದರು. ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಶ್ರೀ. ವಿಜಯ ರೇವಣಕರ್ ಇವರು ಮಾತನಾಡುತ್ತಾ, ‘ಯುಗಯುಗಗಳಿಂದ ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನು ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಜಾತ್ಯತೀತ ರಾಷ್ಟ್ರ ಮಾಡಿದರು, ಈ ಅನ್ಯಾಯವನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆಯೇ ಪರ್ಯಾಯವಾಗಿದೆ’ ಎಂದು ಹೇಳಿದರು.