ದೆಹಲಿಯಿಂದ ಬಂಧಿಸಲಾದ ಜಿಹಾದಿ ಮತ್ತು ಖಲಿಸ್ತಾನಿ ಉಗ್ರವಾದಿಗಳಿಂದ ಹಿಂದುತ್ವನಿಷ್ಠರ ಹತ್ಯೆಯ ಸಂಚು !

ದೆಹಲಿಯಲ್ಲಿ ಓರ್ವ ಹಿಂದೂವಿನ ಶಿರಚ್ಛೇದಗೊಳಿಸಿ ಹತ್ಯೆ ಮಾಡಿ 9 ತುಂಡುಗಳನ್ನಾಗಿ ಮಾಡಿದ್ದರು !

ನವದೆಹಲಿ – ಇಲ್ಲಿಯ ಭಲಸ್ವಾ ಡೇರಿ ಕ್ಷೇತ್ರದಿಂದ ಬಂಧಿಸಲಾಗಿರುವ ಭಯೋತ್ಪಾದಕ ಜಗಜೀತ ಉರ್ಫ ಯಾಕೂಬ ಮತ್ತು ನೌಶಾದ ಇವರಿಬ್ಬರು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ.ಎಸ್.ಐ.ನ ‘ಕಾಶ್ಮೀರ- ಖಲಿಸ್ತಾನ’ ಗುಂಪಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಭಾರತದಲ್ಲಿರುವ ಹಿಂದುತ್ವನಿಷ್ಠ ಮುಖಂಡರನ್ನು ಗುರಿ ಮಾಡಿದ್ದರು. ಅವರು ದೆಹಲಿಯ ರಾಜಕುಮಾರ ಹೆಸರಿನ ಓರ್ವ ಹಿಂದೂ ವ್ಯಕ್ತಿಯ ಹತ್ಯೆ ಮಾಡಿ ಅವನ ತುಂಡುಗಳಾಗಿ ಕತ್ತರಿಸಿದ್ದರು. ಹಾಗೂ ಈ ಘಟನೆಯ ವಿಡಿಯೋ ಮಾಡಿದ್ದರು ಎನ್ನುವ ಮಾಹಿತಿ ಈಗ ಬಹಿರಂಗವಾಗಿದೆ. ಈ ಇಬ್ಬರೂ ಭಯೋತ್ಪಾದಕರಿಗೆ ಪಂಜಾಬಿನ 4 ಹಿಂದುತ್ವನಿಷ್ಠ ಮುಖಂಡರನ್ನು ಹತ್ಯೆ ಮಾಡುವ ಜವಾಬ್ದಾರಿಯನ್ನು ಒಪ್ಪಿಸಲಾಗಿತ್ತು. ಇದರಲ್ಲಿ ಒಬ್ಬ ಶಿವಸೇನೆಯ ಮುಖಂಡ ಸೇರಿದ್ದಾರೆ. ಐ.ಎಸ್. ಐ.ಯು `ಕಾಶ್ಮೀರ-ಖಲಿಸ್ತಾನ’ ಗುಂಪು ಕಾಶ್ಮೀರದಂತೆಯೇ ಪಂಜಾಬಿನಲ್ಲಿಯೂ ಜಿಹಾದಿ ಭಯೋತ್ಪಾದಕ ಕೃತ್ಯ ನಡೆಸಲು ರಚಿಸಲಾಗಿದೆ.

೧. ಇದೀಗ ದೆಹಲಿ ಪೊಲೀಸರು ಇಬ್ಬರ ಮಾಹಿತಿಯನ್ನು ಪಂಜಾಬ್ ಪೊಲೀಸರಿಗೆ ನೀಡಲಿದ್ದಾರೆ. ಇಬ್ಬರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನು ಅವರು ಎಲ್ಲಿಂದ ಸಿಕ್ಕಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಕಳೆದ 1 ತಿಂಗಳಿಂದ ನೌಶಾದ್ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೂ ಆತ ಈ ಅವಧಿಯಲ್ಲಿ ಹಿಂದೂವನ್ನು ಹೇಗೆ ಕೊಂದಿದ್ದಾನೆ ಎಂಬುದನ್ನೂ ತನಿಖೆ ನಡೆಸಲಾಗುತ್ತಿದೆ. (ಕಣ್ಣಿಟ್ಟಿದ್ದರೂ ಈ ರೀತಿ ಹತ್ಯೆಗಳು ನಡೆಯುತ್ತಿದ್ದರೆ, ಪೊಲೀಸರು ಯಾವ ರೀತಿ ನಿಗಾ ವಹಿಸುತ್ತಿದ್ದಾರೆ ಎಂಬುದು ತನಿಖೆಯಾಗಬೇಕು ! – ಸಂಪಾದಕರು)

೨. ನೌಶಾದ ಮತ್ತು ಜಗ್ಗಾನು ರಾಜಕುಮಾರನನ್ನು ಡಿಸೆಂಬರ 15, 2022 ರಂದು ಮದ್ಯ ಸೇವಿಸುವ ಆಮಿಷವೊಡ್ಡಿ ಭಲಸ್ವಾ ಡೇರಿಯ ಮನೆಗೆ ಕರೆದೊಯ್ದರು ಮತ್ತು ಅವರ ಶಿರಚ್ಛೇದಗೊಳಿಸಿ ಅವನ ಮೃತದೇಹವನ್ನು 9 ತುಂಡುಗಳಾಗಿ ಮಾಡಿದರು. ಈ ಘಟನೆಯ ವಿಡಿಯೋ ತಯಾರಿಸಿ ಅವರು ಪಾಕಿಸ್ತಾನದಲ್ಲಿರುವ ಮುಖಂಡರಿಗೆ ಕಳುಹಿಸಿದರು. ಈ ವಿಡಿಯೋ ಕಳುಹಿಸಿರುವವನ ಹೆಸರು ಸಲಮಾನ ಎಂದು ತಿಳಿದು ಬಂದಿದೆ. ಇವರಿಬ್ಬರಿಗೂ ಉದ್ದೇಶಿಸಿರುವವರ ಹತ್ಯೆ ಮಾಡಿ ಅದರ ವಿಡಿಯೋ ತಯಾರಿಸುವ ಆದೇಶ ನೀಡಲಾಗಿತ್ತು. ಹಾಗೆಯೇ ದೇಶದಲ್ಲಿ ಗಲಭೆ ಮತ್ತು ಧಾರ್ಮಿಕ ಒತ್ತಡ ನಿರ್ಮಾಣ ಮಾಡುವ ಆದೇಶವೂ ಇತ್ತು.

೩. ಇವರಿಬ್ಬರಿಗೂ ದೆಹಲಿಯ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿರುವ ಭಯೋತ್ಪಾದಕ ಮಹ್ಮದ ಆರಿಫ ಮತ್ತು ಲಷ್ಕರ-ಎ-ತೊಯಬಾ ಉಗ್ರ ಸೊಹೆಲನು ಪಾಕಿಸ್ತಾನದೊಂದಿಗೆ ಸಂಪರ್ಕ ಮಾಡಿ ಕೊಟ್ಟಿದ್ದನು. ಆರಿಫನನ್ನು ಕೆಂಪು ಕೋಟೆಯ ಮೇಲಿನ ದಾಳಿಯ ಪ್ರಕರಣದಲ್ಲಿ ದೋಷಿಯಾಗಿದ್ದಾನೆ. ನೌಶಾದ ಆ ಸಮಯದಲ್ಲಿ ಇದೇ ಕಾರಾಗೃಹದಲ್ಲಿ ಬಂಧನದಲ್ಲಿದ್ದನು. 2018 ರಲ್ಲಿ ಬಿಡುಗಡೆಯಾದ ಬಳಿಕ ಸೊಹೆಲ ಪಾಕಿಸ್ತಾನಕ್ಕೆ ಹೋಗಿದ್ದನು. 2022 ರಲ್ಲಿ ನೌಶಾದ ಕಾರಾಗೃಹದಿಂದ ಹೊರಗೆ ಬಂದ ಕೂಡಲೇ ಅವನು ಸೊಹೆಲನನ್ನು ಸಂಪರ್ಕಿಸಿದ್ದನು. ನೌಶಾದನಿಗೆ 56 ವರ್ಷವಾಗಿದ್ದು, ಅವನು ಪಾಕಿಸ್ತಾನಿ ಭಯೋತ್ಪಾದಕ ಸಂಗಟನೆ ಹರಕತ-ಉಲ್- ಅನ್ಸಾರ ನೊಂದಿಗೆ ಸಂಪರ್ಕದಲ್ಲಿದ್ದಾನೆ.

ಸಂಪಾದಕೀಯ ನಿಲುವು

ಜಿಹಾದಿ ಮತ್ತು ಖಲಿಸ್ತಾನಿ ಉಗ್ರವಾದಿಗಳ ಮೈತ್ರಿ ದೇಶಕ್ಕೆ ಹೆಚ್ಚು ಅಪಾಯಕಾರಿಯಾಗಿದೆ. ಎರಡೂ ಉಗ್ರವಾದಗಳನ್ನು ಸಮಯವಿರುವಾಗಲೇ ನಷ್ಟಗೊಳಿಸದೇ ಇರುವ ಪರಿಣಾಮವೇ ಇದಾಗಿದೆ. ಈಗಲಾದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇವರಿಬ್ಬರ ಹಿಂದಿರುವ ಪಾಕಿಸ್ತಾನವನ್ನು ನಷ್ಟಗೊಳಿಸಲು ಹೆಜ್ಜೆಯನ್ನಿಡುವುದು ಆವಶ್ಯಕವಿದೆ !