ನೇಪಾಳದಲ್ಲಿ ದಕ್ಷಿಣ ಕೋರಿಯಾದ ಪಾದ್ರಿಯಿಂದ ಬಡ ಹಿಂದೂಗಳ ಮತಾಂತರ !

ನೇಪಾಳದಲ್ಲಿ ೨೦ ವರ್ಷಗಳಲ್ಲಿ ೭೦ ಚರ್ಚ್ ನಿರ್ಮಾಣ !

ನೇಪಾಳದ ಝಾರಲಂಗ ಗ್ರಾಮದ ಚರ್ಚ್ ಮತ್ತು ಪಾದ್ರಿ ಪಾಂಗ್ ಚಾಂಗ್

ಕಾಟ್ಮಾಂಡು (ನೇಪಾಳ) – ದಕ್ಷಿಣ ಕೋರಿಯಾದ ಓರ್ವ ಪಾದ್ರಿಯು ಬಡ ಹಿಂದೂಗಳಿಗೆ ಕೆಲವು ಸಲ ಹಣದ ಆಮಿಷ ಒಡ್ಡಿ, ಕೆಲವು ಸಲ ಚಮತ್ಕಾರ ತೋರಿಸುವ ಹೆಸರಿನಲ್ಲಿ ಮತಾಂತರ ಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ. ಪಾಂಗ್ ಚಾಂಗ್ ಎಂದು ಪಾದ್ರಿಯ ಹೆಸರಾಗಿದೆ.

೧. ನೇಪಾಳದಲ್ಲಿ ನಡೆಯುತ್ತಿರುವ ಹಿಂದೂ ಮತ್ತು ಬೌದ್ಧರ ಮತಾಂತರದ ಬಗ್ಗೆ `ಬಿ.ಬಿ.ಸಿ’ ಯ ವಾರ್ತಾ ವಾಹಿನಿಯು ಒಂದು ವರದಿ ತಯಾರಿಸಿದೆ. ಇದರಲ್ಲಿ `ಪಾಂಗ್ ಚಾಂಗ್’ ಇವನು ನೇಪಾಳದಲ್ಲಿನ ಝಾರಲಂಗ ಗ್ರಾಮದಲ್ಲಿ ಒಂದು ಚರ್ಚ್ ನಿರ್ಮಿಸಿ ಅದಕ್ಕೆ `ಯೇಸುವಿನ ವಿಜಯ’ ಎಂಬ ಹೆಸರು ನೀಡಿದ್ದಾನೆ. ಅವನು ಈ ಗ್ರಾಮದಲ್ಲಿನ ಬಡ ಹಿಂದೂ ಮತ್ತು ಬೌದ್ಧರನ್ನು ಕ್ರೈಸ್ತನಾಗಿ ಮತಾಂತರಿಸಿದ್ದಾನೆ’, ಎಂದು ಹೇಳಲಾಗುತ್ತಿದೆ.

೨. ಪಾದ್ರಿ ಪಾಂಗ್ ಚಾಂಗ್ ಇವನು ಕಳೆದ ೨೦ ವರ್ಷಗಳಿಂದ ನೇಪಾಳದಲ್ಲಿ ವಾಸಿಸುತ್ತಿದ್ದು ನೇಪಾಳದಲ್ಲಿ ೭೦ ಚರ್ಚ್ ಗಳನ್ನು ನಿರ್ಮಿಸಿದ್ದಾನೆ. ಸಮಾಜದಲ್ಲಿನ ಜನರು ತಮ್ಮ ಭೂಮಿಯನ್ನು ದಾನ ಮಾಡಿ ಚರ್ಚ್ ನಿರ್ಮಾಣಕ್ಕಾಗಿ ಸಹಾಯ ಮಾಡಿದ್ದಾರೆ ಎಂದು ಪಾಂಗ್ ಚಾಂಗ್ ಹೇಳುತ್ತಿದ್ದಾನೆ.

೩. `ಬಿ.ಬಿ.ಸಿ’ ಯ ವರದಿಯ ಪ್ರಕಾರ ಹಿಂದೂ ಬಹುಸಂಖ್ಯಾತ ನೇಪಾಳದಲ್ಲಿ ೭ ಸಾವಿರದ ೭೫೮ ಚರ್ಚ್ ಕಟ್ಟಲಾಗಿದ್ದೂ ಈ ಬದಲಾವಣೆಯ ಹಿಂದೆ ದಕ್ಷಿಣ ಕೋರಿಯಾದ ಕೈವಾಡವಿದೆ. ಒಂದು ವಾರ್ತೆಯ ಪ್ರಕಾರ ನೇಪಾಳದಲ್ಲಿ ೩೦೦ ಕೊರಿಯನ್ ಮಿಷಿನರಿಯ ಕುಟುಂಬಗಳು ವಾಸಿಸುತ್ತಿವೆ.

೪. ಹಿಂದೂ ಬಹುಸಂಖ್ಯಾತ ನೇಪಾಳದಲ್ಲಿ ಕ್ರೈಸ್ತರ ಸಂಖ್ಯೆ ಪ್ರಸ್ತುತ ಶೇ. ೨ ರಷ್ಟು ಇದೆ ಎಂದು ಹೇಳಲಾಗುತ್ತಿದೆ. 1951 ರಲ್ಲಿ ಒಬ್ಬ ಕ್ರೈಸ್ತ ಕೂಡ ಇರಲಿಲ್ಲ. ಪ್ರಸ್ತುತ ಅವರ ಸಂಖ್ಯೆ ೩ ಲಕ್ಷದ ೭೬ ಸಾವಿರದಷ್ಟು ಆಗಿದೆ.

ಸಂಪಾದಕೀಯ ನಿಲುವು

ಭಾರತವು ನೇಪಾಳದಲ್ಲಿನ ಹಿಂದೂಗಳ ಮತಾಂತರ ತಡೆಯುವುದಕ್ಕೆ ಎಲ್ಲ ರೀತಿಯಿಂದಲೂ ಸಹಾಯ ಮಾಡುವುದು ಅವಶ್ಯಕವಾಗಿದೆ; ಆದರೆ ಕಳೆದ ೭೫ ವರ್ಷಗಳಲ್ಲಿ ಸರಕಾರದಿಂದ ಭಾರತದಲ್ಲಿನ ಹಿಂದೂಗಳ ಮತಾಂತರ ಕೂಡ ತಡೆಯಲಾಗಿಲ್ಲ ಇದು ವಸ್ತುಸ್ಥಿತಿ ಇದೆ. ಇಂತಹ ಹಿಂದೂಗಳಿಗೆ ಕೇವಲ ಹಿಂದೂ ರಾಷ್ಟ್ರವೇ ಕಾಪಾಡಬಹುದು, ಹಿಂದೂಗಳು ಈಗಲಾದರೂ ಇದನ್ನು ಗಮನಕ್ಕೆ ತೆಗೆದುಕೊಂಡು ಅದರ ಸ್ಥಾಪನೆಗಾಗಿ ಕಟಿಬದ್ಧರಾಗಬೇಕು !

 

`ನೇಪಾಳ `ಜಾತ್ಯತೀತ ದೇಶ’ ಆಗಿದ್ದರಿಂದ ಮಿಷನರಿ ಕಾರ್ಯಕ್ಕೆ ಸುವರ್ಣ ಕಾಲ ! (ಅಂತೆ)

ಪಾಂಗ್ ಪ್ರಕಾರ, ಅವನು ೨೦೦೩ ರಲ್ಲಿ ನೇಪಾಳಕ್ಕೆ ಬಂದನು ಆಗ ದೇಶದಲ್ಲಿ ಹಿಂದೂ ರಾಜ ಮನೆತನದ ಆಡಳಿತವಿತ್ತು. ದೇವರ ಇಷ್ಟೊಂದು ಮೂರ್ತಿ ನೋಡಿ ಅವನಿಗೆ ಕಸಿವಿಸಿಯಾಗಿತ್ತು. ೨೦೦೮ ರಲ್ಲಿ ಗೃಹ ಯುದ್ಧದ ನಂತರ ನೇಪಾಳ `ಜಾತ್ಯತೀತ ದೇಶ’ವಾಯಿತು ಮತ್ತು ಅದು ಮಿಷನರಿ ಕಾರ್ಯಕ್ಕೆ ಸುವರ್ಣ ಕಾಲವಾಯಿತು ಎಂದು ಹೇಳಿದನು.

ಸಂಪಾದಕೀಯ ನಿಲುವು

ಇದರಿಂದ ಜಾತ್ಯತೀತ ದೇಶದಲ್ಲಿ ಮಷನರಿಗಳಿಗೆ ಮತಾಂತರ ಮಾಡುವುದು ಸುಲಭವಾಗುತ್ತದೆ, ಇದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದಲೇ ‘ಜಾತ್ಯತೀತ’ ಭಾರತದಲ್ಲಿಯೂ ಕೂಡ ಮಿಷನರಿಗಳಿಂದ ಹಿಂದುಗಳನ್ನು ರಾಜಾರೋಶವಾಗಿ ಮತಾಂತರ ಮಾಡಲಾಗುತ್ತದೆ ಮತ್ತು ಯಾರು ಏನು ಮಾಡಲು ಸಾಧ್ಯವಾಗುವುದಿಲ್ಲ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಅನಿವಾರ್ಯವಾಗಿದೆ !