ಔರಂಗಜೆಬ್ ನನ್ನು ವೈಭವೀಕರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ವಾಶಿಂನಲ್ಲಿ ಪಾಕಿಸ್ತಾನದ ಧ್ವಜ ಮತ್ತು ಔರಂಗಜೇಬ್ ಚಿತ್ರವಿರುವ ಫಲಕ ಹಾರಿಸಿದ ಪ್ರಕರಣ !

ಮಂಗರುಳಪಿರ, ವಾಶಿಂನಲ್ಲಿರುವ ಬಾಬಾ ಹಯಾತ್ ಕಲಂದರ್ ದರ್ಗಾದಲ್ಲಿ ಉರೂಸ್ ನಿಮಿತ್ತ ನಡೆಸಲಾದ ಮೆರವಣಿಗೆಯಲ್ಲಿ ಜನರು ಪಾಕಿಸ್ತಾನ ಧ್ವಜಗಳು ಮತ್ತು ಕ್ರೂರ ಔರಂಗಜೇಬ್‌ನ ಚಿತ್ರವಿರುವ ಫಲಕಗಳೊಂದಿಗೆ ಕುಣಿಯುತ್ತಿದ್ದರು. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕೆಲವು ಮತಾಂಧರು ಉದ್ದೇಶಪೂರ್ವಕವಾಗಿ ಔರಂಗಜೇಬನನ್ನು ವೈಭವೀಕರಿಸಿ, ರಾಜ್ಯದಲ್ಲಿ ಶಾಂತಿ ಕದಡಲು ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸುತ್ತಿದ್ದಾರೆ. ಇಂತಹವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅದಕ್ಕಾಗಿ ಸರಕಾರವು ಪೂರ್ವಾನ್ವಯವಾಗುವಂತೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಬೇಕು ಮತ್ತು ಪಾಕಿಸ್ತಾನದ ಧ್ವಜವನ್ನು ಹಾರಿಸಿದ ಪ್ರಕರಣದಲ್ಲಿ ಸಂಬಂಧಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ರಾಜ್ಯದ ಮುಖ್ಯಮಂತ್ರಿ ಗೌ. ಏಕನಾಥ ಶಿಂದೆ ಇವರಲ್ಲಿ ಒತ್ತಾಯಿಸಿದೆ.

ಈ ಪ್ರಕರಣದಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದರೂ, ಈ ರೀತಿಯ ಔರಂಗಜೇಬನನ್ನು ವೈಭವಿಕರಿಸುವ ಹಾಗೂ ಪಾಕಿಸ್ತಾನದ ಧ್ವಜ ಹಾರಿಸುವುದರ ಹಿಂದೆ ಏನಾದರೂ ಷಡ್ಯಂತ್ರವಿದೆಯೇ, ಎಂಬ ಬಗ್ಗೆಯೂ ಸರಕಾರ ಆಳವಾಗಿ ತನಿಖೆ ನಡೆಸಬೇಕು. ಛತ್ರಪತಿ ಶಿವಾಜಿ ಮಹಾರಾಜರ ಚಿನ್ನದ ಸಿಂಹಾಸನವನ್ನು ಒಡೆದ, ಹಿಂದೂ ದೇವಾಲಯಗಳನ್ನು ಹಾನಿಗೆಡವಿದ, ಹಿಂದೂ ಸ್ವರಾಜ್ಯದ ಮೇಲೆ ದಾಳಿ ಮಾಡಿ ಜನರ ಮೇಲೆ ದೌರ್ಜನ್ಯವಸಗಿದ, ಛತ್ರಪತಿ ಸಂಭಾಜಿ ಮಹಾರಾಜರನ್ನು ಹಿಂಸಿಸಿ ಕೊಂದಂತಹ ಕ್ರೂರ ಔರಂಗಜೇಬನ ವೈಭವಿಕರಿಸುವುದು ಮಹಾರಾಷ್ಟ್ರ ಎಂದಿಗೂ ಸಹಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ, ಅಫಜಲ್ ಖಾನ್ ಹತ್ಯೆಯ ಚಿತ್ರವನ್ನು ಹಾಕಿದ್ದರಿಂದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿತು, ಆದ್ದರಿಂದ ಆ ಚಿತ್ರವನ್ನು ನಿಷೇಧಿಸಲು ಅಂದಿನ ಗೃಹ ಸಚಿವರಿಂದ ಆದೇಶವನ್ನು ರವಾನಿಸಿತ್ತು. ಅದೇ ರೀತಿ ಔರಂಗಜೇಬನ ವೈಭವಿಕರಣವನ್ನು ತಡೆಯಲು ಸರಕಾರ ಕೂಡಲೇ ಕಟ್ಟುನಿಟ್ಟಿನ ಸರಕಾರಿ ಆದೇಶ ಹೊರಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.