ತಮಿಳುನಾಡು ವಿಧಾನಸಭೆಯಲ್ಲಿ ‘ಸೇತುಸಮುದ್ರಂ’ ಯೋಜನೆಗೆ ಬೆಂಬಲವಾಗಿ ಠರಾವಗೆ ಅಂಗೀಕಾರ !

  • ಐತಿಹಾಸಿಕ ರಾಮಸೇತುವೆ ಧ್ವಂಸ ಪ್ರಯತ್ನ ! 

  • ಭಾಜಪ ದಿಂದ ವಿರೋಧ !

  • ರಾಮಸೇತುವೆಗೆ `ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವಂತೆ ಮೊಕದ್ದಮೆ ನಡೆಯುತ್ತಿದೆ !

ಚೆನ್ನೈ (ತಮಿಳುನಾಡು) – ತಮಿಳುನಾಡಿನ ದ್ರಾವಿಡ ಮುನ್ನೆತ್ರ ಕಳಘಮ್ (ದ್ರಮುಕ್ – ದ್ರಾವಿಡ ಪ್ರಗತಿ ಸಂಘ) ಸರಕಾರದ ಮುಖ್ಯಮಂತ್ರಿ ಎಂ .ಕೆ. ಸ್ಟಾಲಿನ್ ಇವರು ಜನವರಿ ೧೨ ರಂದು ವಿಧಾನಸಭೆಯಲ್ಲಿ ರಾಮಸೇತುವೆ ಧ್ವಂಸಗೊಳಿಸಿ `ಸೇತುಸಮುದ್ರಂ ಜಲಮಾರ್ಗ’ ಯೋಜನೆಯನ್ನು ಬೆಂಬಲಿಸುವ ಠರಾವನ್ನು ಅಂಗಿಕರಿಸಿದೆ. ಈ ಠರಾವ್ ಗೆ ಭಾಜಪ ವಿರೋಧಿಸಿದೆ. ರಾಮ ಸೇತುವೆವನ್ನು `ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವುದಕ್ಕಾಗಿ ನ್ಯಾಯಾಲಯದಲ್ಲಿ ಈ ಹಿಂದೆಯೇ ಅರ್ಜಿ ದಾಖಲಿಸಲಾಗಿದೆ.

ಭಾಜಪ ವಿರೋಧಿಸಿದ ಬಗ್ಗೆ ಸ್ಟಾಲಿನ್ ಇವರು, ಈ ಯೋಜನೆಯಿಂದ ೫೦ ಸಾವಿರ ಜನರಿಗೆ ಉದ್ಯೋಗ ಸಿಗುವುದು. ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಇವರು ಕೂಡ ಇದನ್ನೇ ಹೇಳಿದ್ದರು. ಅಟಲ್ ಬಿಹಾರಿ ವಾಜಪೇಯಿ ಇವರು ಪ್ರಧಾನಮಂತ್ರಿ ಆಗಿರುವಾಗ ಯೋಜನೆಗಾಗಿ ನಿಧಿಯ ವ್ಯವಸ್ಥೆ ಮಾಡಿದ್ದರು. ಭಾಜಪ ಸೇತುಸಮುದ್ರಂ ಯೋಜನೆಗೆ ಕೇವಲ ರಾಜಕೀಯ ಕಾರಣದಿಂದ ವಿರೋಧಿಸುತ್ತಿದೆ. ಆಗಿನ ಮುಖ್ಯಮಂತ್ರಿ ಜೈಲಲಿತಾ ಇವರು ಕೂಡ ಸೇತುಸಮುದ್ರಂ ಯೋಜನೆಯ ಪರವಾಗಿದ್ದರು; ಆದರೆ ಅನಿರೀಕ್ಷಿತವಾಗಿ ಅವರು ಕೂಡ ತಮ್ಮ ಅಭಿಪ್ರಾಯ ಬದಲಿಸಿ ನಂತರ ಅದರ ವಿರುದ್ಧ ದೂರು ದಾಖಲಿಸಿದರು.

ಸೇತುಸಮುದ್ರಂ ಯೋಜನೆಯ ಲಾಭ ದ್ರಮುಕ ಮುಖಂಡರಿಗೆ ಆಗಲಿದೆ ! – ಭಾಜಪ

ಭಾಜಪದ ತಮಿಳುನಾಡು ಪ್ರದೇಶಾಧ್ಯಕ್ಷ ಅಣ್ಣಾಮಲೈ ಇವರು, ತಮಿಳುನಾಡು ಮುಖ್ಯಮಂತ್ರಿ ಸೇತುಸಮುದ್ರಂ ಯೋಜನೆಯ ಬಗ್ಗೆ ವಿಧಾನಸಭೆಯಲ್ಲಿ ದಾರಿತಪ್ಪಿಸಿದ್ದಾರೆ. ಈ ಯೋಜನೆಗಾಗಿ ನಾವು ರಾಮಸೇತುವೆ ಧ್ವಂಸಗೊಳಿಸಲು ಬಿಡುವುದಿಲ್ಲ. ಈ ಯೋಜನೆಯ ಅಭ್ಯಾಸ ಮಾಡುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಸ್ಥಾಪಿಸಿರುವ ಸಮಿತಿಯಿಂದ ಇಲ್ಲಿಯವರೆಗೆ ರಾಮಸೇತುವೆಯ ಬಗ್ಗೆ ವರದಿ ಪ್ರಸ್ತುತಪಡಿಸಿಲ್ಲ. ಸ್ಟಾಲಿನ್ ಇವರು ಸುನಾಮಿ ತಜ್ಞ ಪ್ರಾಧ್ಯಾಪಕ ಎಸ್. ಮೂರ್ತಿ ಇವರ ಸಲಹೆಯನ್ನು ದುರ್ಲಕ್ಷಿಸಿದ್ದಾರೆ. ‘ರಾಮ ಸೇತುವೆ ಧ್ವಂಸಗೊಳಿಸಿದರೆ ಸುನಾಮಿ ಬರಬಹುದು’, ಎಂದು ಅವರ ಅಭಿಪ್ರಾಯವಿದೆ. ಸೇತುಸಮುದ್ರಮ್ ಯೋಜನೆಯ ಲಾಭ ಕೇವಲ ದ್ರಮುಕನ ಮುಖಂಡ ಟಿ ಆರ್. ಬಾಲು ಮತ್ತು ಕನಿಮೊಳಿ ಇವರ ಸ್ವಾಮ್ಯದ ಹಡಗು ಕಂಪನಿಗೆ ಆಗಲಿದೆ ಎಂದು ಹೇಳಿದರು.

ರಾಮಸೇತುವಿಗೆ ಹಾನಿ ಮಾಡಲು ಪ್ರಯತ್ನಿಸಿದರೆ ಸಂತರು ವಿರೋಧಿಸುವರು ! – ಸಂತ ದಿವಾಕರ ಆಚಾರ್ಯರು

ಸೇತುಸಮುದ್ರಮ್ ಯೋಜನೆಯ ಠರಾವಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಸಂತ ದಿವಾಕರ ಆಚಾರ್ಯರು, ”ಈ ಯೋಜನೆ ಸನಾತನ ಧರ್ಮದ ವಿರುದ್ಧವಾಗಿದೆ. ಸರಕಾರ ರಾಮ ಸೇತುವೆಗೆ ಹಾನಿ ಮಾಡುವ ಪ್ರಯತ್ನ ಮಾಡಿದರೆ ಕಠೋರ ದಂಡಿಸುವೆವು. ರಾಮಸೇತುವೆಗೆ ಹಾನಿ ಮಾಡುವ ಯಾವುದೇ ಪ್ರಯತ್ನಕ್ಕೆ ಸಂತರಿಂದ ಬಲವಾಗಿ ವಿರೋಧ ಮಾಡಲಾಗುವುದು.” ಎಂದು ಹೇಳಿದರು.

ಏನಿದು ಸೇತುಸಮುದ್ರಂ ಜಲಮಾರ್ಗ ಯೋಜನೆ ?

ಭಾರತ ಮತ್ತು ಶ್ರೀಲಂಕಾದರಲ್ಲಿನ ಪಾಲ್ಕ ಜಲಸಂಧಿ ಮತ್ತು ಮನ್ನಾರ್ ಕೊಲ್ಲಿ ಇವುಗಳನ್ನು ಜೋಡಿಸುವ ಪ್ರಸ್ತಾವವಾಗಿದೆ. ಈ ಮೂಲಕ ೪.೯ ನಾಟಿಕಲ್ ಮೈಲ್ (೮೩ ಕಿಲೋಮೀಟರ್) ಜಲ ಸಂಚಾರಕ್ಕೆ ಕಾಲುವೆ ನಿರ್ಮಿಸಲಾಗುವುದು. ಇದಕ್ಕಾಗಿ ರಾಮ ಸೇತುವೆ ಧ್ವಂಸಗೊಳಿಸಲಾಗುವುದು. ರಾಮ ಸೇತುವೆಯಿಂದಾಗಿ ನೌಕೆಗಳು ಶ್ರೀಲಂಕಾದ ಮೂಲಕ ಪ್ರಯಾಣ ಮಾಡಬೇಕಾಗುತ್ತದೆ. ಈ ಯೋಜನೆಯಿಂದ ಆ ಪ್ರಯಾಣ ಮಾಡಬೇಕಾಗುವುದಿಲ್ಲ. ಈ ಕಾಲುವೆಯಿಂದ ಭಾರತ ಮತ್ತು ಶ್ರೀಲಂಕಾದಿಂದ ನೌಕೆಗಳು ಹೋಗಬಹುದು. ಆದ್ದರಿಂದ ಸಮಯ ಉಳಿತಾಯವಾಗುವುದೆಂದು ಹೇಳಲಾಗುತ್ತಿದೆ.

ರಾಮ ಸೇತುವೆಗೆ ಹಾನಿ ಆಗುವುದಿಲ್ಲ ! – ಕೇಂದ್ರ ಸರಕಾರದಿಂದ ೨೦೧೮ ರಲ್ಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ

‘ಭಾರತ ಮತ್ತು ಶ್ರೀಲಂಕಾಇವುಗಳ ನಡುವೆ ಇರುವ ಪೌರಾಣಿಕ ಮಹತ್ವ ಪಡೆದಿರುವ ರಾಮಸೇತುವೆ ರಾಷ್ಟ್ರ ಹಿತ ಗಮನದಲ್ಲಿಟ್ಟು ಯಾವುದೇ ರೀತಿಯ ಹಾನಿ ಆಗುವುದಿಲ್ಲ’, ಎಂದು ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ೨೦೧೮ ರಲ್ಲಿ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಲಾಗಿದೆ. ಅದರಲ್ಲಿ ಇದನ್ನು ದಾಖಲಿಸಲಾಗಿದೆ. ಸೇತುಸಮುದ್ರಂ ಯೋಜನೆಯ ಬಗೆಗಿನ ಸೂತ್ರದ ಬಗ್ಗೆ ಸರಕಾರ ಈ ಪ್ರತಿಜ್ಞಾಪತ್ರ ಪ್ರಸ್ತುತಪಡಿಸಿತ್ತು.

ಸಂಪಾದಕೀಯ ನಿಲುವು

ಕಳೆದ ಅನೇಕ ವರ್ಷಗಳಿಂದ ಈ ಧರ್ಮದ್ರೋಹಿ ಯೋಜನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯಿಂದ ಕಾಂಗ್ರೆಸ್ ಭಗವಾನ್ ಶ್ರೀ ರಾಮನ ಅಸ್ತಿತ್ವವನ್ನೇ ನಿರಾಕರಿಸಿತ್ತು, ಹೀಗೆ ಇರುವಾಗ ನಾಸ್ತಿಕತೆ ಮತ್ತು ಹಿಂದೂ ದ್ವೇಷಿ ದ್ರಾವಿಡ ಮುನ್ನೆತ್ರಿ ಕಳಘಮ್ ಸರಕಾರ ಹಿಂದೂಗಳ ಶ್ರದ್ಧಾ ಸ್ಥಾನಗಳ ಮೇಲೆ ಆಘಾತ ಮಾಡುವ ಪ್ರಯತ್ನ ಮಾಡುತ್ತಿದ್ದರೆ, ಆಗ ಅದು ಕೂಡ ಕಾಂಗ್ರೆಸ್ಸಿನ ಹಾಗೆ ರಾಜಕೀಯ ನಾಶ ಆಗುವುದು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಕೇಂದ್ರ ಸರಕಾರದಿಂದ ತಕ್ಷಣ ರಾಮ ಸೇತುವೆ `ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸಿ ಸೇತುಸಮುದ್ರಂ ಯೋಜನೆಯನ್ನು ರದ್ದುಪಡಿಸುವ ಘೋಷಣೆ ಮಾಡಬೇಕು.