ಪಾಕಿಸ್ತಾನದ ರಾಯಭಾರಿ ಕಚೇರಿಯ ಟ್ವಿಟರ್ ಖಾತೆಯಿಂದ ಉಘುರ ಮುಸಲ್ಮಾನರನ್ನು ಬೆಂಬಲಿಸಿ ಟ್ವೀಟ್ !

ಟೀಕೆಗಳಾದ ಬಳಿಕ ಖಾತೆ `ಹ್ಯಾಕ’ ಆಗಿದೆಯೆಂದು ಹೇಳಿಕೆ !

(`ಹ್ಯಾಕ್’ ಮಾಡುವುದು ಎಂದರೆ ಅಜ್ಞಾತರಿಂದ ನಿಯಂತ್ರಿಸಲ್ಪಡುವುದು)

ಇಸ್ಲಾಮಾಬಾದ (ಪಾಕಿಸ್ತಾನ) – ಚೀನಾದ ಚೆಂದಗೂದಲ್ಲಿರುವ ಪಾಕಿಸ್ತಾನದ ವಾಣಿಜ್ಯ ರಾಯಭಾರ ಕಚೇರಿಯು ಜನವರಿ 12 ರಂದು `ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದಲ್ಲಿ ನೆರೆಹಾವಳಿಗೆ ಒಳಗಾಗಿರುವವರ ಪುನರ್ವಸತಿಗಾಗಿ ಚೀನಾ ಮಾಡಿದ ಸಹಾಯ ಮತ್ತು ಬೆಂಬಲಕ್ಕಾಗಿ ಕೃತಜ್ಞರಾಗಿದ್ದೇವೆ. ನಾವು ಉಘುರ ಸಮಾಜದ ಅಧಿಕಾರ ಮತ್ತು ಸ್ವಾತಂತ್ರ್ಯಕ್ಕಾಗಿ ಪರಸ್ಪರರ ಹಿತದ ಪ್ರಕರಣದಲ್ಲಿ ಚೀನಾದೊಂದಿಗೆ ಕೆಲಸ ಮಾಡುತ್ತೇವೆ. ಉಘುರ ವಿಷಯದಲ್ಲಿ ಚೀನಾ ಮೊದಲಿನಿಂದಲೂ ಸಂವೇದನಾಶೀಲವಾಗಿದೆ. ಚೀನಾದ ಶಿನಜಿಯಾಂಗ ಪ್ರದೇಶದಲ್ಲಿ ಲಕ್ಷಾಂತರ ಉಘುರ ಜನಾಂಗದವರು ಶಿಬಿರಗಳಲ್ಲಿ ಕೈದಿಗಳಾಗಿದ್ದಾರೆ ಎಂಬ ದಾವೆಯನ್ನು ಚೀನಾ ಯಾವಾಗಲೂ ತಿರಸ್ಕರಿಸಿದೆ. ಚೀನಾ ಇದನ್ನು ಪ್ರಶಿಕ್ಷಣ ಕೇಂದ್ರವೆಂದು ಹೇಳಿದೆ’ ಎಂದು ಟ್ವೀಟ್ ಮಾಡಿತ್ತು. ಇದರ ಮೇಲೆ ಟೀಕೆಗಳು ಆಗ ತೊಡಗಿದ ಕೂಡಲೇ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು `ನಮ್ಮ ಟ್ವೀಟ್ ಖಾತೆ `ಹ್ಯಾಕ’ (ಅಜ್ಞಾತರಿಂದ ನಿಯಂತ್ರಿಸಲ್ಪಡುವುದು) ಆಗಿತ್ತು . ಜನೇವರಿ 13 ರಂದು ನಮ್ಮಿಂದ ಯಾವುದೇ ಟ್ವೀಟ್ ಮಾಡಿಲ್ಲ’, ಎಂದು ಹೇಳಿದೆ.