ಕಾಶ್ಮೀರ ಪ್ರಶ್ನೆಯ ಬಗ್ಗೆ ಪಾಕಿಸ್ತಾನದಿಂದ ಮತ್ತೊಮ್ಮೆ ಮೂರನೇಯ ಮಧ್ಯಸ್ಥಿಕೆಗೆ ಒತ್ತಾಯ !

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮತಾಜ್ ಝಹರಾ ಬಲೋಜ

ಇಸ್ಲಾಮಾಬಾದ – ಕಾಶ್ಮೀರ ಪ್ರಶ್ನೆಯ ಬಗ್ಗೆ ಪಾಕಿಸ್ತಾನದಿಂದ ಮತ್ತೊಮ್ಮೆ ಮೂರನೇಯ ಮಧ್ಯಸ್ಥಿಕೆಗೆ ಒತ್ತಾಯಿಸಲಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮತಾಜ್ ಝಹರಾ ಬಲೋಜ ಇವರು, ಪಾಕಿಸ್ತಾನ ಈ ಪ್ರದೇಶದಲ್ಲಿ ಶಾಂತಿಯನ್ನು ಸ್ತಾಪಿಸಲು ಅಂತರಾಷ್ಟ್ರೀಯ ಸಂಘಟನೆಯ ನಿಲುವು ಮತ್ತು ಮೂರನೇಯ ಮಧ್ಯಸ್ಥಿಕೆ ಸ್ವಾಗತಿಸಲಿದೆ. ಈ ಹಿಂದೆ ಕೂಡ ಅಮೇರಿಕಾ ಸಹಿತ ಇತರ ಅಂತರರಾಷ್ಟ್ರೀಯ ಸಂಘಟನೆಯಿಂದ ಕಾಶ್ಮೀರದ ಕುರಿತಾದ ನಿಲುವನ್ನು ಪಾಕಿಸ್ತಾನ ಯಾವಾಗಲೂ ಸ್ವಾಗತಿಸಿದೆ, ಎಂದು ಅವರು ಹೇಳಿದರು.

(ಸೌಜನ್ಯ:Hindustan Times )

ಕಾಶ್ಮೀರ ಪ್ರಶ್ನೆಯ ಬಗ್ಗೆ ಮೂರನೇಯ ಮಧ್ಯಸ್ಥಿಕೆಗೆ ಭಾರತ ಮೊದಲಿನಿಂದಲೂ ವಿರೋಧಿಸುತ್ತದೆ. ಜಮ್ಮು ಕಾಶ್ಮೀರದ ಸಂಪೂರ್ಣ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನವು ಭಾರತದ ಕೆಲವು ಭಾಗ ಅಕ್ರಮವಾಗಿ ವಶಕ್ಕೆ ಪಡೆದಿದೆ, ಎಂದು ಭಾರತದ ಸ್ಪಷ್ಟವಾದ ನಿಲುವಾಗಿದೆ.

ಸಂಪಾದಕರ ನಿಲುವು

ನಿರಂತರವಾಗಿ ಭಾರತ ವಿರೋಧಿ ನಿಲುವನ್ನು ತೆಗೆದುಕೊಳ್ಳುವ ಪಾಕಿಸ್ತಾನಕ್ಕೆ ಸರಕಾರವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಪಾಠ ಕಲಿಸಬೇಕು !