ವಿಜ್ಞಾನಿ ನಂಬಿ ನಾರಾಯಣನ್ ಇವರ ಮೇಲೆ `ಇಸ್ರೋ’ದ ಬೇಹುಗಾರಿಕೆಯ ಆರೋಪ ಸುಳ್ಳು !

ಸಿಪಿಐಯಿಂದ ಕೇರಳ ಉಚ್ಚ ನ್ಯಾಯಾಲಯದಲ್ಲಿ ಮಾಹಿತಿ

ನಾರಾಯಣನ್ ಇವರನ್ನು ಸಿಲುಕಿಸುವುದು ಅಂತರಾಷ್ಟ್ರೀಯ ಸಂಚಿನ ಭಾಗ ಸಿಬಿಐನಿಂದ ದಾವೆ

ವಿಜ್ಞಾನಿ ನಂಬಿ ನಾರಾಯಣನ್

ತಿರುವನಂತಪುರಂ (ಕೇರಳ) – ಭಾರತದ ಬಾಹ್ಯಾಕಾಶ ಸಂಶೋಧನೆಯ ಸಂಸ್ಥೆ `ಇಸ್ರೋ’ದಲ್ಲಿ 1994 ರಲ್ಲಿ ತಥಾ ಕಥಿತ ಬೇಹುಗಾರಿಕೆ ಪ್ರಕರಣದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಇವರನ್ನು ಬಂಧಿಸಿದ್ದು ಕಾನೂನ ಬಾಹಿರವಾಗಿತ್ತು, ಈ ಘಟನೆಯಲ್ಲಿ ಯಾವುದೇ ವೈಜ್ಞಾನಿಕ ಮಾಹಿತಿ ಬಹಿರಂಗವಾಗಿರಲಿಲ್ಲ. ಅವರನ್ನು ಸುಳ್ಳು ಬೇಹುಗಾರಿಕೆಯ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ಬೇಹುಗಾರಿಕೆ ಪ್ರಕರಣದಲ್ಲಿ ನಂಬಿ ನಾರಾಯಣನ್ ಇವರನ್ನು ಸಿಲುಕಿಸಿರುವುದು ಅಂತರರಾಷ್ಟ್ರೀಯ ಸಂಚಾಗಿತ್ತು, ಎಂದು ಸಿಬಿಐದಿಂದ ಜನವರಿ ೧೩ ರಂದು ಕೇರಳ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ನಂಬಿ ನಾರಾಯಣನ್ ಇವರು ಇಸ್ರೋದಲ್ಲಿನ ಮುಖ್ಯ `ಲಿಕ್ವಿಡ ಪ್ರೊಪೆಲೆಂಟ್ ಇಂಜಿನ’ನ ವಿಜ್ಞಾನಿಯಾಗಿದ್ದರು.

೧. ನಂಬಿ ನಾರಾಯಣನ್ ಇವರನ್ನು ಬೇರುಗಾರಿಕೆ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು, ಇದರಲ್ಲಿ ಅವರು ಮಾಲಡಿವ್ ನ ನಾಗರೀಕನ ಮೂಲಕ ಪಾಕಿಸ್ತಾನಕ್ಕೆ `ಕ್ರಾಯೋಜಿನಿಕ್ ಇಂಜಿನ್’ ತಂತ್ರಜ್ಞಾನ ಮಾರಾಟ ಮಾಡಿರುವ ಆರೋಪ ಇತ್ತು. ೧೯೯೮ ರಲ್ಲಿ ಸಿಬಿಐ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ಇವರು ನಾರಾಯಣ ಇವರನ್ನು ಖುಲಾಸೆಗೊಳಿಸಿದ್ದರು; ಆದರೆ ಅದೇ ಸಮಯದಲ್ಲಿ ಅವರ ಸಹಯೋಗಿ ವಿಜ್ಞಾನಿ ಡಿ. ಶಶಿಕುಮಾರ ಮತ್ತು ಇತರ ೪ ಜನರ ಜೊತೆ ೫೦ ದಿನ ಸೆರೆಮನೆಯಲ್ಲಿದ್ದರು.

೨. ಈ ಸುಳ್ಳು ಪ್ರಕರಣದಲ್ಲಿ ನಂಬಿ ನಾರಾಯಣನ್ ಅವರ ಹೆಸರು ಸಂಪೂರ್ಣವಾಗಿ ತೆಗೆಯಲಾಗಿತ್ತು. ಜೊತೆಗೆ ಅವರು ನಷ್ಟ ಪರಿಹಾರಕ್ಕಾಗಿ ಮತ್ತು ಅವರಿಗೆ ಮೋಸ ಮಾಡಿರುವ ಪೊಲೀಸ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವುದಕ್ಕೆ ಹೋರಾಟ ನಡೆಸಿದರು. ಅವರು ತಮ್ಮ ಪುಸ್ತಕದಲ್ಲಿ, ಈ ಸಂಚಿನ ಮತ್ತು ಜನರ ವಿಚಾರಣೆ ಈಗ ನಡೆಸಲಾಗುತ್ತಿದೆ, ಅವರು ಅಮೇರಿಕಾದ ಬೇಗುಗಾರಿಕೆ ಸಂಸ್ಥೆ `ಸಿಐಎ’ ಜೊತೆಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಅಡಚಣೆ ತರುವುದಕ್ಕಾಗಿ ಕೆಲಸ ಮಾಡುತಿದ್ದರು, ಎಂದು ಆರೋಪಿಸಿದ್ದಾರೆ.

೩. ನಂಬಿ ನಾರಾಯಣನ್ ಇವರು ಅವರ ಜೀವನಾಧಾರಿತ ಒಂದು ಪುಸ್ತಕ ಬರೆದಿದ್ದಾರೆ. ಕೆಲವು ದಿನಗಳ ಹಿಂದೆ ನಟ ಆರ್ ಮಾಧವನ್ ಇವರು ನಂಬಿ ಇವರ ಜೀವನಾಧಾರಿತ ಚಲನಚಿತ್ರವನ್ನೂ ನಿರ್ಮಿಸಿದರು. ಅದರಲ್ಲಿ ನಂಬಿ ಅವರ ಜೀವನದಲ್ಲಿನ ಸಂಪೂರ್ಣ ಸಂಘರ್ಷ ತೋರಿಸಲಾಗಿದೆ. ಈ ಚಲನಚಿತ್ರದ ನಿರ್ದೇಶನ ಮತ್ತು ಅಭಿನಯ ಮಾಧವನ್ ಇವರೇ ಮಾಡಿದ್ದಾರೆ. ಈಗ ಈ ಚಲನಚಿತ್ರ ಆಸ್ಕರ್ ೨೦೨೩ ಕ್ಕಾಗಿ ಕಳುಹಿಸಲಾಗಿದೆ.

ಸಂಪಾದಕರ ನಿಲುವು

ನಂಬಿ ನಾರಾಯಣನ್ ಇವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದವರನ್ನು ಹುಡುಕಿ ಅವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಮೊಕದ್ದಮೆ ನಡೆಸಬೇಕು ಮತ್ತು ಅವರಿಗೆ ಗಲ್ಲು ಶಿಕ್ಷೆಯಾಗಲು ಕೇಂದ್ರ ಸರಕಾರ ಪ್ರಯತ್ನ ಮಾಡಬೇಕು !