ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ವಿವಿಧ ನಿರುಪಯುಕ್ತ ವಸ್ತುಗಳನ್ನು ಕೈದೋಟಕ್ಕಾಗಿ ಕುಂಡದಂತೆ ಉಪಯೋಗಿಸಿ !

ಸೌ. ರಾಘವಿ ಕೊನೆಕರ

‘ನಮ್ಮ ಮನೆಯಲ್ಲಿಯೇ ತರಕಾರಿಗಳ ತೋಟಗಾರಿಕೆಯನ್ನು ಮಾಡುವಾಗ ಅದು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಿದರೆ ಲಾಭದಾಯಕವಾಗುತ್ತದೆ. ಸದ್ಯ ಪೇಟೆಯಲ್ಲಿ ಎಲ್ಲ ಪ್ರಕಾರದ ಕುಂಡಗಳು, ಗ್ರೋ-ಬ್ಯಾಗ್ (ಕೈದೋಟಕ್ಕಾಗಿ ಚೀಲಗಳು) ಇವುಗಳ ಬಹಳ ದುಬಾರಿಯಾಗಿರುತ್ತವೆ. ‘ಈ ಖರ್ಚು ಕಡಿಮೆ ಪ್ರಮಾಣದಲ್ಲಿ ಆಗಬೇಕು’, ಅದಕ್ಕಾಗಿ ವಿವಿಧ ನಿರುಪಯುಕ್ತ ವಸ್ತುಗಳನ್ನು ಕುಂಡದಂತೆ ಬಳಸಬಹುದು. ಬಣ್ಣಗಳ ಖಾಲಿ ಡಬ್ಬಿಗಳು, ಮಾವಿನಹಣ್ಣಿನ ಹಳೆಯ ಪೆಟ್ಟಿಗೆಗಳು, ದಪ್ಪವಾದ ರಟ್ಟಿನ ಪೆಟ್ಟಿಗೆಗಳು, ಧಾನ್ಯದ ಅಥವಾ ಸಿಮೆಂಟಿನ ಚೀಲಗಳು, ಹಣ್ಣುಮಾರಾಟಗಾರರಲ್ಲಿನ ಹಳೆಯ ಪ್ಲಾಸ್ಟಿಕ್ ಕ್ರೇಟ್, ಖಾಲಿಯಾಗಿರುವ ಎಣ್ಣೆಗಳ ಡಬ್ಬಿಗಳು, ಹಳೆಯ ಟಯರ್ ಇತ್ಯಾದಿಗಳಲ್ಲಿಯೂ ತೋಟಗಾರಿಕೆ ಮಾಡಲು ಬರುತ್ತದೆ. ಚಿಕ್ಕ ಸಸಿಗಳನ್ನು ಸಿದ್ಧಪಡಿಸಲು ಐಸ್‌ಕ್ರೀಮ್ ಅಥವಾ ಶ್ರೀಖಂಡದ ಹಳೆಯ ಡಬ್ಬಿಗಳು ಅಥವಾ ತೆಂಗಿನಕಾಯಿಯ ಚಿಪ್ಪನ್ನು ಸಹ ಉಪಯೋಗಿಸಬಹುದು.’

– ಸೌ. ರಾಘವಿ ಮಯೂರೇಶ ಕೊನೆಕರ, ಢವಳಿ, ಫೊಂಡಾ, ಗೋವಾ. (೧೩.೧೨.೨೦೨೨)