ಸಾಧಕರೇ, ಗುರುಸೇವೆಯಲ್ಲಿ ಇಷ್ಟಾನಿಷ್ಟವನ್ನು ಕಾಪಾಡದೇ ‘ಶೂದ್ರ ವರ್ಣದ ಸೇವೆಯನ್ನು ಮಾಡುವುದರಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಸೇವೆಗಳನ್ನು ಮಾಡುವ ಸಿದ್ಧತೆಯನ್ನಿಟ್ಟುಕೊಳ್ಳಿ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಕೆಲವು ಸಾಧಕರಿಗೆ ‘ವಕ್ತಾರ’ನೆಂದು ಕಾರ್ಯಕ್ರಮದಲ್ಲಿ ವಿಷಯವನ್ನು ವಿಷಯ ಮಂಡಿಸುವುದು, ವಾರ್ತಾವಾಹಿನಿಗಳಲ್ಲಿನ ಚರ್ಚಾಗೋಷ್ಠಿಗಳಲ್ಲಿ ಮಾತನಾಡುವುದು ಇತ್ಯಾದಿ ಸೇವೆಗಳನ್ನು ಮಾಡಲು ಇಷ್ಟವಾಗುತ್ತದೆ. ಗಣಕೀಯ ಸೇವೆಯನ್ನು ಮಾಡುವ ಕೆಲವರಿಗೆ ಸ್ವಚ್ಛತೆ ಸೇವೆ ಅಥವಾ ಅಡುಗೆಮನೆಗೆ ಸಂಬಂಧಿತ ಸೇವೆಗಳು ಕನಿಷ್ಠವೆನಿಸುತ್ತವೆ. ಆದುದರಿಂದ ಶೂದ್ರ ವರ್ಣದ ಈ ಸೇವೆಯನ್ನು ಮಾಡುವುದರಿಂದ ಅವರು ತಪ್ಪಿಸಿಕೊಳ್ಳುತ್ತಾರೆ.

ಸಮರ್ಥ ರಾಮದಾಸಸ್ವಾಮಿಗಳ ಪರಮ ಶಿಷ್ಯ ಕಲ್ಯಾಣಸ್ವಾಮಿಯವರು ಶೂದ್ರ ವರ್ಣದ ಸೇವೆ, ಅಂದರೆ ಗುರುಗಳಿಗೆ ನೀರು ತುಂಬಿಡುವುದು, ಅವರ ಕಾಲುಗಳನ್ನು ಒತ್ತುವುದು ಮುಂತಾದ ಸೇವೆಗಳನ್ನು ಭಾವಪೂರ್ಣವಾಗಿ ಮಾಡಿ ಸಮರ್ಥ ರಾಮದಾಸಸ್ವಾಮಿಯವರ ಕೃಪೆಯನ್ನು ಸಂಪಾದಿಸಿದ್ದರು.

ಪ.ಪೂ. ಡಾಕ್ಟರರು ತಮ್ಮ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಆಶ್ರಮದಲ್ಲಿ ಸ್ವಚ್ಛತೆ ಮಾಡುವುದು, ಪರಿಸರವನ್ನು ಸ್ವಚ್ಛ ಮಾಡುವುದು ಮುಂತಾದ ಶೂದ್ರ ವರ್ಣದ ಸೇವೆಗಳನ್ನೂ ಮನಃ ಪೂರ್ವಕ ಮಾಡಿ ತಮ್ಮ ಗುರುಗಳ ಮನಸ್ಸನ್ನು ಗೆದ್ದರು.

ಗುರುಚರಣಗಳಲ್ಲಿ ಅರ್ಪಿಸಿದ ಪ್ರತಿಯೊಂದು ಸೇವೆಯಿಂದ ಸಾಧಕನ ಎಲ್ಲ ದೇಹಗಳ ಶುದ್ಧಿಯಾಗುತ್ತದೆ. ಶೂದ್ರ ವರ್ಣದ ಸೇವೆಗಳಿಂದ ಅಹಂ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ. ಸೇವೆಯಲ್ಲಿ ಇಷ್ಟಾನಿಷ್ಟಗಳನ್ನು ಕಾಪಾಡುವ ಬಗ್ಗೆ ಸಾಧಕರ ಮನಸ್ಸಿನಲ್ಲಿ ಮೇಲಿಂದ ಮೇಲೆ ವಿಚಾರ ಬರುತ್ತಿದ್ದರೆ ಅವರು ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಇದಕ್ಕೆ ಸ್ವಯಂಸೂಚನೆಯನ್ನು ನೀಡಬೇಕು ಮತ್ತು ಕೃತಿಯ ಸ್ತರದಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕು !

ಸಾಧಕರೇ, ‘ಕಂಡದ್ದು ಕರ್ತವ್ಯ’ವೆಂಬ ಭಾವದಿಂದ ತಮ್ಮ ಗುರುಗಳ ಆಶ್ರಮದಲ್ಲಿ ಶೂದ್ರ ವರ್ಣದ ಸೇವೆಯನ್ನೂ ಆನಂದದಿಂದ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರ ಆದರ್ಶವನ್ನು ಕಣ್ಣುಗಳೆದುರು ಇಟ್ಟುಕೊಂಡು ಶ್ರೀ ಗುರುಗಳು ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಲು ನೀಡಿದ ಅವಕಾಶವನ್ನು ಕಳೆದುಕೊಳ್ಳಬೇಡಿ!’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧೧.೨೦೨೨)