ಪಾಕಿಸ್ತಾನದ ಹಿರಿಯ ಪತ್ರಕರ್ತ ಜಾವೇದ ಚೌಧರಿಯ ದಾವೆ !
ಇಸ್ಲಾಮಬಾದ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨೦೨೧ ರಲ್ಲಿ ಪಾಕಿಸ್ತಾನದ ಪ್ರವಾಸ ಮಾಡುವವರಿದ್ದರು. ಮತ್ತು ಅಲ್ಲಿ ಮತ್ತೊಮ್ಮೆ ಭಾರತ ಪಾಕಿಸ್ತಾನದ ಮೈತ್ರಿಯ ಘೋಷಣೆ ಮಾಡುವವರಿದ್ದರು, ಎಂದು ಪಾಕಿಸ್ತಾನದಲ್ಲಿನ ಹಿರಿಯ ಪತ್ರಕರ್ತ ಜಾವೇದ ಚೌಧರಿ ಇವರು ಒಂದು ಲೇಖನದಲ್ಲಿ ದಾವೆ ಮಾಡಿದ್ದಾರೆ. ಇದು ಎಷ್ಟು ನಿಜ, ಎಂದು ಇಲ್ಲಿಯವರೆಗೆ ಪಾಕಿಸ್ತಾನದ ರಾಜಕೀಯ ಮಟ್ಟದಲ್ಲಿ ಯಾರು ಕೂಡ ಅನುಮೋದಿಸಿಲ್ಲ.
PM Modi Pakistan Visit : पीएम मोदी जाने वाले थे पाकिस्तान, हमेशा के लिए हल हो जाता कश्मीर का मुद्दा लेकिन… @narendramodi | #NarendraModi | #HindiNews | #PMModi
— IBC24 News (@IBC24News) January 8, 2023
ಪಾಕಿಸ್ತಾನಿ ಪತ್ರಕರ್ತ ಜಾವೇದ ಚೌಧರಿ ಇವರು, ಪಾಕಿಸ್ತಾನದ ಸೈನ್ಯ ೨೦೨೦ ರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನಕ್ಕೆ ಬರಲು ಒಲಿಸಿದ್ದರು. ಜನರಲ್ ಫೈಜ್ ಹಮೀದ್ ಇವರು ಮದ್ಯಸ್ತಿಕೆ ಮಾಡಿದ್ದರು. ಅವರು ಒಂದು ಅರಬ ದೇಶದಲ್ಲಿ ಭಾರತದ ಸುರಕ್ಷಾ ಸಲಹೆಗಾರ ಅಜಿತ್ ಡೊವಾಲ್ ಇವರನ್ನು ಭೇಟಿ ಮಾಡಿದ್ದರು. ಅವರಲ್ಲಿನ ಚರ್ಚೆಯ ನಂತರ ಪ್ರಧಾನಮಂತ್ರಿ ಮೋದಿ ಏಪ್ರಿಲ್ ೯, ೨೦೨೧ ರಲ್ಲಿ ಪಾಕಿಸ್ತಾನಕ್ಕೆ ಬರುವರು’, ಎಂದು ನಿಶ್ಚಯಿಸಲಾಗಿತ್ತು. ಪ್ರಧಾನಮಂತ್ರಿ ಮೋದಿ ಪಾಕಿಸ್ತಾನದಲ್ಲಿನ ಶ್ರೀ ಹಿಂಗಲಾಜಮಾತೆಯ ಭಕ್ತರಾಗಿದ್ದಾರೆ. ಅವರು ಪಾಕಿಸ್ತಾನಕ್ಕೆ ಬಂದ ನಂತರ ನೇರ ಶ್ರೀ ಹಿಂಗಲಾಜಮಾತಾ ಮಂದಿರಕ್ಕೆ ಹೋಗುವರು ಮತ್ತು ಅಲ್ಲಿ ೧೦ ದಿನ ವ್ರತ ಆಚರಿಸಿ ಪಾಕಿಸ್ತಾನದಿಂದ ಹಿಂತಿರುಗಿ ಹೋಗುವಾಗ ಆಗಿನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಇವರ ಭೇಟಿ ಮಾಡುವರು, ಇವರಿಬ್ಬರೂ ಕೈ ಕೈ ಹಿಡಿದುಕೊಂಡು ಮೈತ್ರಿಯ ಘೋಷಣೆ ಮಾಡುವರು, `ನಾವು ಪಾಕಿಸ್ತಾನದ ಜೊತೆಗೆ ವ್ಯಾಪಾರ ಮುಂದುವರಿಸುವೆವು. ಭಾರತ ಪಾಕಿಸ್ತಾನ ಎರಡು ದೇಶಗಳಲ್ಲಿನ ಪ್ರಶ್ನೆಗೆ ಹಸ್ತಕ್ಷೇಪ ಮಾಡಲಾರೆವು ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಹಭಾಗಿ ಆಗುವುದಿಲ್ಲ. ಕಾಶ್ಮೀರದ ಕುರಿತು ಒಟ್ಟಾಗಿ ಕುಳಿತು ನಿರ್ಣಯ ತೆಗೆದುಕೊಳ್ಳುವೆವು, ಎಂದು ಘೋಷಿಸುವರು. ಈ ಎಲ್ಲಾ ವಿಷಯ ನಿರ್ಧರಿಸಲಾಗಿತ್ತು,
ಆದರೆ ಆ ಸಮಯದಲ್ಲಿ ವಿದೇಶಾಂಗ ಸಚಿವ ಶಾಹ ಮಹಮ್ಮದ್ ಕೂರೈಶಿ ಇವರು ಇಮ್ರಾನ್ ಖಾನ್ ಇವರಿಗೆ, `ಹೀಗೆ ಮಾಡಿದರೆ ಕಾಶ್ಮೀರದ ಒಪ್ಪಂದ ಮಾಡಿಕೊಂಡಿರುವ ಆರೋಪ ನಿಮ್ಮ ಮೇಲೆ ಬರುವುದೆಂದು’, ಹೆದರಿಸಿದರು. ಆದ್ದರಿಂದ ಇಮ್ರಾನ್ ಖಾನ್ ಮೋದಿ ಇವರ ಭೇಟಿಯ ಪ್ರಕರಣದಿಂದ ಹಿಂದೆ ಸರಿದರು, ಆದ್ದರಿಂದ ಈ ಪ್ರವಾಸ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತ ಸರಕಾರವು ಪದೇ ಪದೇ ಪಾಕಿಸ್ತಾನದ ಭಯೋತ್ಪಾದಕ ಮುಖವಾಡ ಜಗತ್ತಿನೆದರು ತರುತ್ತಿದೆ. ಆದ್ದರಿಂದ `ಪ್ರಧಾನಮಂತ್ರಿ ಮೋದಿ ಅವರ ಘನತೆಗೆ ಧಕ್ಕೆ ತರುವುದಕ್ಕಾಗಿ ಈ ರೀತಿಯ ವದಂತಿ ಹಬ್ಬಿಸುತ್ತಿದ್ದಾರೆಯೇ ?’, ಎಂದು ಭಾರತೀಯರಿಗೆ ಸಂದೇಹ ಬಂದರೆ ಅದರಲ್ಲಿ ಆಶ್ಚರ್ಯವೇನು ? ಭಾರತ ಸರಕಾರ ಇದನ್ನು ಅರಿತುಕೊಂಡು ಇದಕ್ಕೆ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ ! |