ದೇಶದಲ್ಲಿ ಕಳೆದ ೫ ವರ್ಷಗಳಲ್ಲಿ `ಲವ್ ಜಿಹಾದ್’ ನ ೪೦೦ ಘಟನೆಗಳು !

ಮುಂಬಯಿ – ಕಳೆದ ೫ ವರ್ಷಗಳಲ್ಲಿ ನಡೆದ `ಲವ್ ಜಿಹಾದ್’ ಘಟನೆಗಳ ಅಂಕಿ ಅಂಶಗಳನ್ನು ವಿಶ್ವ ಹಿಂದೂ ಪರಿಷತ್ತು ಘೋಷಿಸಿದೆ. ಅದಕ್ಕನುಸಾರ ೨೦೧೮ ರಿಂದ ೨೦೨೨ ಈ ೫ ವರ್ಷಗಳಲ್ಲಿ ಪೊಲೀಸ ಠಾಣೆಯಲ್ಲಿ ನೋಂದಾಯಿಸಲಾದ ಸುಮಾರು ೪೦೦ ಲವ್ ಜಿಹಾದ್ ಘಟನೆಗಳು ಬಹಿರಂಗವಾಗಿವೆ. ಅಂಕಿ ಅಂಶಗಳ ಪ್ರಕಾರ ಎಲ್ಲಕ್ಕಿಂತ ಹೆಚ್ಚು ಅಂದರೆ ೧೦೫ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿವೆ. ಅದರ ನಂತರದ ಸ್ಥಾನ ಮಧ್ಯಪ್ರದೇಶ ಇಲ್ಲಿ ೩೦, ಹರಿಯಾಣ ಮತ್ತು ಕೇರಳ ರಾಜ್ಯದಲ್ಲಿ ೧೩, ದೆಹಲಿಯಲ್ಲಿ ೧೨, ಮಹಾರಾಷ್ಟ್ರದಲ್ಲಿ ೯ ಹಾಗೂ ಬಿಹಾರದಲ್ಲಿ ೪ `ಲವ್ ಜಿಹಾದ್’ ನ ಘಟನೆಗಳು ನಡೆದಿದೆ. ಪೊಲೀಸ್ ಠಾಣೆಯಲ್ಲಿ ಘಟನೆಗಳ ದೂರು ಇದ್ದರಿಂದ ಅಂಕಿ ಅಂಶ ದೊರೆತಿದೆ; ಆದರೆ ಯಾವ ಘಟನೆಗಳು ಪೊಲೀಸ್ ಠಾಣೆಯ ವರೆಗೆ ತಲುಪಿಲ್ಲ ಅದು ಇದಕ್ಕಿಂತಲೂ ಹೆಚ್ಚಾಗಿರುವ ಸಾಧ್ಯತೆ ಇದೆ.

ಸಂಪಾದಕೀಯ ನಿಲುವು

ದೇಶದ ೫ ರಾಜ್ಯಗಳಲ್ಲಿ ಪ್ರಸ್ತುತ `ಲವ್ ಜಿಹಾದ್’ನಿಂದ ನಡೆಯುವ ಮತಾಂತರದ ವಿರುದ್ಧ ಕಾನೂನು ರೂಪಿಸಲಾಗಿದೆ, ಈ ರೀತಿಯ ಕಾನೂನು ಸಂಪೂರ್ಣ ದೇಶಕ್ಕಾಗಿ ಮಾಡುವುದು ಅವಶ್ಯಕವಾಗಿದೆ. ಹಾಗೂ ಕೇವಲ ಕಾನೂನು ರೂಪಿಸಿ ಪ್ರಯೋಜನವಿಲ್ಲ, ಅದರಲ್ಲಿ ಕಠಿಣ ಶಿಕ್ಷೆಯ ವ್ಯವಸ್ಥೆ ಕೂಡ ಇರಬೇಕು. ಜೊತೆಗೆ ಹಿಂದೂ ಹುಡುಗಿಯರು ಲವ್ ಜಿಹಾದ್ ಗೆ ಬಲಿಯಾಗಬಾರದು ಅದಕ್ಕಾಗಿ ಅವರಿಗೆ ಧರ್ಮಶಿಕ್ಷಣ ನೀಡಿ ಧರ್ಮಚರಣೆ ಮಾಡುವುದಕ್ಕಾಗಿ ಸಿದ್ಧಗೊಳಿಸುವುದು ಅವಶ್ಯಕವಾಗಿದೆ !