ಪಾಕಿಸ್ತಾನದಲ್ಲಿ ಮತಾಂಧರ ದಾಳಿಯಲ್ಲಿ ಗಾಯಗೊಂಡಿದ್ದ ಹಿಂದೂವಿನ ಸಾವು

ಇಸ್ಲಾಮಿ ದೇಶ ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂ !

ದಿಗರಿ ಮಿರಪುರಖಾಸ್ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿನ ದೇಹ-೧೫೦ ಈ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಾಥೂ ಭಿಲ್ ಇವರ ಮೇಲೆ ಮತಾಂಧರು ದಾಳಿ ಮಾಡಿದ್ದರು. ಚಿಕಿತ್ಸೆಯ ಸಮಯದಲ್ಲಿ ನಾಥೂ ಇವರು ಸಾವನ್ನಪ್ಪಿದರು. ಅವರ ಕುಟುಂಬದವರು, ಕೆಲವು ದಿನಗಳ ಹಿಂದೆ ಅಬ್ದುಲ್ಲ ಜಾಟ್, ಅಬ್ದುಲ್ಲ ರೌಫ ಜಾಟ್, ಅಲ್ತಾಫ್ ಜಾಟ್ ಮತ್ತು ಇತರರು ನಾಥೂ ಇವರ ಮೇಲೆ ದಾಳಿ ಮಾಡಿದ್ದರು. `ನಮಗೆ ನ್ಯಾಯ ಬೇಕು’, ಎಂದು ಅವರ ಸಂಬಂಧಿಕರು ಆಗ್ರಹಿಸಿದ್ದಾರೆ.