ಆಧುನಿಕ ಪ್ರಜಾಪ್ರಭುತ್ವಕ್ಕಿಂತ ಭಾರತದ ಪ್ರಾಚೀನ ರಾಜ್ಯ ವ್ಯವಸ್ಥೆ ಹೆಚ್ಚು ಶ್ರೇಷ್ಠ ! – ಮಧುಪೌರ್ಣಿಮಾ ಕಿಶ್ವರ, ಸಂಪಾದಕಿ, ‘ಮಾನುಷಿ ಇಂಡಿಯಾ’ ಯೂ ಟ್ಯೂಬ್ ವಾಹಿನಿ

ಮಧುಪೌರ್ಣಿಮಾ ಕಿಶ್ವರಸಮಾಜ ವ್ಯವಸ್ಥಿತ ಇಲ್ಲದಿದ್ದರೆ, ರಾಮರಾಜ್ಯ ಬರಲು ಸಾಧ್ಯವಿಲ್ಲ. ಪ್ರಜೆಗಳ ಪಾಲನೆ ಮಾಡುವುದು, ಅವರನ್ನು ಬಾಹ್ಯ ಶತ್ರುಗಳಿಂದ ರಕ್ಷಣೆ ಮಾಡುವುದು ಮತ್ತು ಶಾಂತಿ ಹಾಗೂ ಸಮೃದ್ಧಿಯನ್ನು ಶಾಶ್ವತವಾಗಿಡುವುದು, ಇವು ರಾಜನ ಪ್ರಮುಖ ಕರ್ತವ್ಯಗಳಾಗಿವೆ. ಹಿಂದೆ ದೊಡ್ಡ ದೊಡ್ಡ ಯಜ್ಞಗಳನ್ನು ಮಾಡಿ ಪ್ರತಿವರ್ಷ ಖಜಾನೆಯನ್ನು ಖಾಲಿ ಮಾಡಲಾಗುತ್ತಿತ್ತು. ಅವರಿಂದ ಯಾವ ಯಾಚಕನೂ ವಿನ್ಮುಖನಾಗಿ (ಏನೂ ಪಡೆಯದೆ) ಹೋಗುತ್ತಿರಲಿಲ್ಲ. ದಾನ ಧರ್ಮವನ್ನು ರಾಜನ ಧರ್ಮವೆಂದು ತಿಳಿಯಲಾಗುತ್ತಿತ್ತು. ತದ್ವಿರುದ್ಧ ಪಾಶ್ಚಾತ್ಯ ದೇಶಗಳಲ್ಲಿನ ರಾಜರ ಸ್ಥಿತಿಯಾಗಿತ್ತು. ಭಾರತೀಯ ರಾಜರು ತಮಗಾಗಿ ಭವ್ಯದಿವ್ಯ ರಾಜಮಹಲಗಳನ್ನು ಕಟ್ಟುತ್ತಿರಲಿಲ್ಲ. ಅವರು ಭವ್ಯ ಮಂದಿರಗಳನ್ನು ಕಟ್ಟುತ್ತಿದ್ದರು.

ಹಿಂದೂ ಧರ್ಮದಲ್ಲಿ ಸಮಾಧಾನವನ್ನು ಎಲ್ಲಕ್ಕಿಂತ ದೊಡ್ಡ ಧನವೆಂದು ತಿಳಿಯಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಇತರರನ್ನು ಸೋಲಿಸಿ ಮೇಲೆ ಹೋಗುವುದಿರುತ್ತದೆ. ರಾಮರಾಜ್ಯದಲ್ಲಿ ರಾಜನು ರಾಜ್ಯವನ್ನು ನಡೆಸುತ್ತಾನೆ; ಆದರೆ ಜನತೆಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತಥಾಕಥಿತ ಪ್ರಜಾ ಪ್ರಭುತ್ವದಲ್ಲಿ ಆರಿಸಿ ಬಂದಿರುವ ಅಭ್ಯರ್ಥಿ ಚುನಾವಣೆಯಲ್ಲಿನ ತನ್ನ ಖರ್ಚನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತಾನೆ. ಆದ್ದರಿಂದ ‘ಅಧಿಕಾರ ಸಿಕ್ಕಿತೆಂದರೆ, ಲೂಟಿ ಮಾಡಲು ಅನುಮತಿ ಸಿಕ್ಕಿತು’, ಎಂದು ತಿಳಿಯಲಾಗುತ್ತದೆ. ಸದ್ಯ ಪ್ರಜಾ ಪ್ರಭುತ್ವದಲ್ಲಿ ಜಾತಿ, ಭಾಷೆ, ಪ್ರದೇಶಗಳ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಿರಂತರ ಗುಂಪುಗಾರಿಕೆಯ ಯುದ್ಧದ ಸ್ಥಿತಿ ಇರುತ್ತದೆ. ಪ್ರಾಚೀನ ಕಾಲದಲ್ಲಿ ವಿಶೇಷವಾಗಿ ಮಹಾಭಾರತದ ಸಮಯದಲ್ಲಿ ಒಳಸಂಚುಗಳಿದ್ದವು; ಆದರೆ ಅದಕ್ಕೂ ಒಂದು ಮಿತಿಯಿತ್ತು. ಈಗ ಎಲ್ಲವೂ ಮಿತಿಮೀರಿ ಹೋಗಿದೆ.

ಎಲ್ಲೆಡೆ ಸಮಾಜವನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ.

ಆಧುನಿಕ ಪ್ರಜಾಪ್ರಭುತ್ವದ ಸಮರ್ಥಕರು ಭಾರತೀಯರಿಗೆ ಮಾನವಾಧಿಕಾರ, ಮಾನವತೆ ಇತ್ಯಾದಿಗಳನ್ನು ಕಲಿಸಲು ಪ್ರಯತ್ನಿಸುತ್ತಾರೆ. ಹಿಂದೂ ಧರ್ಮದಲ್ಲಿ ಮೊದಲಿನಿಂದಲೇ ಮಾನವತೆಯಿದ್ದು ಮಾನವಾಧಿಕಾರಗಳ ರಕ್ಷಣೆಯಾಗುತ್ತಾ ಬಂದಿದೆ. ಹಿಂದೆ ನಿಯಮಕ್ಕನುಸಾರವೇ ಯುದ್ಧಗಳು ನಡೆಯುತ್ತಿದ್ದವು. ಆಧುನಿಕ ಕಾಲದಲ್ಲಿ ನಗರಗಳನ್ನು ಹಾಳು ಮಾಡಲಾಗುತ್ತದೆ, ಸುಡಲಾಗುತ್ತದೆ. ಮಾನವತೆಗೆ ಭಯಂಕರ ಹಾನಿಯಾಗುತ್ತದೆ. ಪ್ರಜಾಪ್ರಭುತ್ವದ ಮಾಧ್ಯಮದಿಂದ ಮತಾಂತರ, ‘ಸರ್ ತನ್‌ಸೆ ಜುದಾ’ (‘ರುಂಡ ಮುಂಡದಿಂದ ಬೇರೆ’), ಮತಪೆಟ್ಟಿಗೆಗಳಿಂದ ‘ಬ್ಲ್ಯಾಕ್‌ಮೇಲ್ ಮಾಡುವುದು’, ಇತ್ಯಾದಿ ಬಹಿರಂಗವಾಗಿ ನಡೆಯುತ್ತಿವೆ. ಆದುದರಿಂದ ‘ಪ್ರಜಾಪ್ರಭುತ್ವ’ವು ನಮ್ಮ ಕೊರಳಿನಲ್ಲಿನ ದೊಡ್ಡ ಕಲ್ಲಾಗಿದೆ ಎಂದೇ ಹೇಳಬೇಕಾಗುತ್ತದೆ.