ಕೇಂದ್ರ ಸರಕಾರದಿಂದ ಧೋರಣೆಯಲ್ಲಿ ಬದಲಾವಣೆ
ನವದೆಹಲಿ – ಈಗ ಪಾಕಿಸ್ತಾನದಲ್ಲಿನ ಹಿಂದೂಗಳೂ ಭಾರತಕ್ಕೆ ಬಂದು ತಮ್ಮ ಮೃತ ಸಂಬಂಧಿಗಳ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಬಲ್ಲರು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರವು ‘ಪ್ರಾಯೋಜಕತ್ವ ಧೋರಣೆ’ಯಲ್ಲಿ ಬದಲಾವಣೆಯನ್ನು ಮಾಡಿದೆ. ಇದರಿಂದಾಗಿ ೪೨೬ ಮೃತ ಪಾಕಿಸ್ತಾನಿ ಹಿಂದೂಗಳ ಅಸ್ಥಿಯನ್ನು ಹರಿದ್ವಾರದಲ್ಲಿರುವ ಗಂಗಾ ನದಿಯಲ್ಲಿ ವಿಸರ್ಜನೆಯ ಮಾರ್ಗವು ಮುಕ್ತವಾಗಿದೆ. ಮೃತ್ಯುವಿನ ಮೊದಲು ಈ ಎಲ್ಲರೂ ತಮ್ಮ ಅಸ್ಥಿಯನ್ನು ಭಾರತದಲ್ಲಿರುವ ಪವಿತ್ರವಾದ ಗಂಗಾ ನದಿಯಲ್ಲಿ ವಿಸರ್ಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ ಪ್ರಾಯೋಜಕತ್ವದ ಧೋರಣೆಯಿಂದಾಗಿ ಅವರ ಇಚ್ಛೆಯು ಅಪೂರ್ಣವಾಗಿತ್ತು.
गंगा में अपने परिजनों की अस्थियां विसर्जन कर सकेंगे पाकिस्तानी हिन्दू, मोदी सरकार करेगी मदद https://t.co/TJ5GagW7sf https://t.co/m2BtXBwNC6 #narendramodi #ganga_river #pakistani_hindus @newstracklive
— News Track (@newstracklive) January 2, 2023
ಹಿಂದಿನ ಪ್ರಾಯೋಜಕತ್ವದ ಧೋರಣೆಯಿಂದಾಗಿ ‘ಪಾಕಿಸ್ತಾನದಲ್ಲಿರುವ ಹಿಂದೂ ಕುಟುಂಬಗಳ ಭಾರತದಲ್ಲಿರುವ ಸಂಬಂಧಿಗಳು ಸಂಬಂಧಿತ ಹಿಂದೂ ಕುಟುಂಬಗಳನ್ನು ಪ್ರಾಯೋಜಿಸಬೇಕು (ಪಾಕಿಸ್ತಾನಿ ಹಿಂದೂಗಳ ವತಿಯಿಂದ ಅವರ ಬಳಿ ಇರುವ ಅಸ್ಥಿಕಲಶವನ್ನು ಭಾರತದಲ್ಲಿನ ಅವರ ಸಂಬಂಧಿಗಳು ಗಂಗಾ ನದಿಯಲ್ಲಿ ವಿಸರ್ಜಿಸುವುದು)’, ಎಂಬ ಒಪ್ಪಿಗೆ ಇತ್ತು. ಅನಂತರವೇ ಅವರಿಗೆ ವಿಸಾ ನೀಡಲಾಗುತ್ತಿತ್ತು. ಈಗ ಬದಲಾದ ಧೋರಣೆಯ ಅನುಸಾರ ‘ಮೃತ ಹಿಂದೂವಿನ ಕುಟುಂಬದವರಿಗೆ ಗಂಗೆಯಲ್ಲಿ ಅಸ್ಥಿ ವಿಸರ್ಜನೆಗಾಗಿ ೧೦ ದಿನಗಳ ವಿಸಾ ಸಿಗಲಿದೆ.’ ಅಂದರೆ ಹಿಂದಿನ ಧೋರಣೆಯ ನಿಯಮಗಳನ್ನು ಪಾಲಿಸಬೇಕಾಗಿಲ್ಲ.
ಮೃತ ಹಿಂದೂಳ ಅಸ್ಥಿಕಲಶಗಳು ವರ್ಷಾನುವರ್ಷಗಳಿಂದ ದೇವಸ್ಥಾನದಲ್ಲಿವೆ !
ಪಾಕಿಸ್ತಾನದಲ್ಲಿರುವ ಅನೇಕ ಹಿಂದೂಗಳು ತಮ್ಮ ಪ್ರಿಯಜನರ ಅಂತ್ಯಸಂಸ್ಕಾರದ ನಂತರ ಅಸ್ಥಿಕಲಶವನ್ನು ವರ್ಷಾನುವರ್ಷದಿಂದ ದೇವಸ್ಥಾನ ಅಥವಾ ಸ್ಮಶಾನಭೂಮಿಯಲ್ಲಿ ಇಡುತ್ತಾರೆ. ಅವರಲ್ಲಿ ತಮ್ಮ ಪ್ರಿಯ ಜನರ ಅಸ್ಥಿಯನ್ನು ಒಂದಲ್ಲ ಒಂದು ದಿನ ಗಂಗೆಯಲ್ಲಿ ವಿಸರ್ಜಿಸಬಹುದು ಎಂಬ ಆಸೆಯಿತ್ತು. ಮೋದಿ ಸರಕಾರದ ಈ ನಿರ್ಣಯದಿಂದಾಗಿ ಇಂತಹ ಜನರ ಇಚ್ಛೆಯು ಪೂರ್ಣವಾಗಲಿದೆ.