ನಾರಾಯಣಪುರ (ಛತ್ತೀಸ್ಗಡ)ದಲ್ಲಿ ಮತಾಂತರ ವಿರೋಧಿ ಬಂದ್ ನಲ್ಲಿ ಆದಿವಾಸಿಗಳಿಂದ ಚರ್ಚ ಧ್ವಂಸ !

ಪೊಲೀಸ್ ಅಧಿಕಾರಿಗಳಿಗೂ ಥಳಿತ

ನಾರಾಯಣಪುರ (ಛತ್ತಿಸ್ಗಢ) – ಇಲ್ಲಿ ಜನವರಿ ೨ ರಂದು ಆದಿವಾಸಿಗಳು ಕ್ರೈಸ್ತ ಮಿಷೀನರಿಗಳಿಂದ ನಡೆಯುವ ಮತಾಂತರದ ವಿರುದ್ಧ ಬಂದಗೆ ಕರೆ ನೀಡಲಾಗಿತ್ತು. ಆ ಸಮಯದಲ್ಲಿ ಕೆಲವು ಆದಿವಾಸಿಗಳು ಒಂದು ಚರ್ಚ್ ಮತ್ತು ಅಲ್ಲಿಯ ಏಸುವಿನ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ. ಈ ಸಮಯದಲ್ಲಿ ಘಟನಾಸ್ಥಳಕ್ಕೆ ತಲುಪಿದ ಪೊಲೀಸರು ಲಾಠಿಚಾರ್ಜ್ ಮಾಡಿದ್ದರಿಂದ ಆಕ್ರೋಶಗೊಂಡ ಆದಿವಾಸಿಗಳು ಅಲ್ಲಿಯ ಪೊಲೀಸ್ ಅಧಿಕಾರಿ ಸದಾನಂದ ಕುಮಾರ ಇವರ ಮೇಲೆ ದಾಳಿ ಮಾಡಿದರು. ಅದರಲ್ಲಿ ಅವರು ಗಾಯಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು.

೧. ಕಳೆದ ೧೫ ದಿನಗಳಿಂದ ಇಲ್ಲಿ ಮತಾಂತರದ ಕುರಿತು ವಿವಾದ ನಡೆಯುತ್ತಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅದರಲ್ಲಿಯೇ ಜನವರಿ ೨ ರಂದು ಬಂದಗೆ ಕರೆ ನೀಡಲಾಗಿತ್ತು. ಡಿಸೆಂಬರ್ ೩೧ ಮತ್ತು ಜನವರಿ ೧ ರಂದು ಇಲ್ಲಿಯ ಗೋರ್ರಾ ಗ್ರಾಮದಲ್ಲಿ ಕ್ರೈಸ್ತ ಮತ್ತು ಆದಿವಾಸಿ ಇವರಲ್ಲಿ ಹೊಡೆದಾಟ ನಡೆಯಿತು. ಈ ಹೊಡೆದಾಟದಲ್ಲಿ ಗಾಯಗೊಂಡಿರುವ ಆದಿವಾಸಿಗಳು ಕ್ರೈಸ್ತರ ಮೇಲೆ ಕ್ರಮ ಕೈಗೊಳ್ಳಲು ಬಂದ ಗೆ ಕರೆ ನೀಡಲಾಗಿತ್ತು.

೨. ಬಂದ ನ ದಿನದಂದು ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಇವರು ಎಲ್ಲಾ ಆದಿವಾಸಿ ಸಮಾಜದ ಪದಾಧಿಕಾರಿಗಳ ಸಭೆ ಆಯೋಜಿಸಿದ್ದರು. ಈ ಸಭೆಯ ನಂತರ ಆದಿವಾಸಿ ಸಮಾಜದ ಜನರು ಒಂದು ಚರ್ಚ್ ಗೆ ನುಗ್ಗಿ ಅಲ್ಲಿ ಧ್ವಂಸ ನಡೆಸಿದರು. ಘಟನಾಸ್ಥಳಕ್ಕೆ ಆಗಮಿಸಿದ ಪೊಲೀಸ ಅಧಿಕಾರಿ ಸದಾಾನಂದ ಕುಮಾರ ಇವರ ಮೇಲೆ ಕೂಡ ದಾಳಿ ಮಾಡಿದರು.

೩. ಜಿಲ್ಲಾಧಿಕಾರಿ ಅಜಿತ ವಸಂತ ಇವರು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಲ್ಲೆ ಮಾಡಿದವರ ಮೇಲೆ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನು ಬಿಡುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

  • `ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಇಲ್ಲದ್ದಿದ್ದರಿಂದ ಈಗ ಜನರೇ ಮತಾಂತರವನ್ನು ವಿರೋಧಿಸಲು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ’, ಎಂದರೆ ತಪ್ಪಾಗಲಾರದು !
  • ಇದರ ಬಗ್ಗೆ ಸರಕಾರವು ಗಂಭೀರವಾಗಿ ಗಮನ ಹರಿಸುವುದು ಅವಶ್ಯಕವಾಗಿದೆ !