ಪಾಕಿಸ್ತಾನದಲ್ಲಿ ಮುಸ್ಲಿಂ ಪೋಲೀಸ್ ನಿಂದ ಓರ್ವ ಹಿಂದೂ ವಿವಾಹಿತ ಮಹಿಳೆಯ ಅಪಹರಣ ಮತ್ತು ವಿವಾಹ !

ಯುವತಿಯನ್ನು ರಕ್ಷಿಸಲು ಹೋದ ಆಕೆಯ ಸಹೋದನ ಮೇಲೆ ಹಲ್ಲೆ ಮಾಡಿದ್ದರಿಂದ ಸಾವು

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಪೊಲೀಸ್ ಸಿಬ್ಬಂದಿ ಒಬೇದುಲ್ಲಾ ಖೋಸೊನು ವಿವಾಹಿತ ಹಿಂದೂ ಹುಡುಗಿ ಲಾಲಿ ಕಚ್ಚಿಯನ್ನು ಬಲವಂತವಾಗಿ ಅಪಹರಿಸಿ ಮದುವೆಯಾದ. ಈ ಪ್ರಕರಣದಲ್ಲಿ ಲಾಲಿಯ ಸಹೋದರ ಪೊಲೀಸರಿಗೆ ದೂರು ನೀಡಿದ ನಂತರ ಲಾಲಿಯನ್ನು ಖೋಸೊನ ಬಂಧನದಿಂದ ರಕ್ಷಿಸಲಾಯಿತು. ನ್ಯಾಯಾಲಯವು ಲಾಲಿಯನ್ನು ಅವಳ ಸಹೋದರ ಲಾಲಾ ಕಚ್ಛಿಗೆ ಹಸ್ತಾಂತರಿಸುವಂತೆ ಆದೇಶಿಸಿತು. ಇದರ ನಂತರ, ಒಬೇದುಲ್ಲಾ ಲಾಲಿಯನ್ನು ಮತ್ತೆ ಅಪಹರಿಸಿದನು. ಈ ಸಮಯದಲ್ಲಿ ಲಾಲಾ ಕಚ್ಛಿಯು ಅವಳನ್ನು ರಕ್ಷಿಸಲು ಪ್ರಯತ್ನಿಸಿದನು. ಆ ಸಮಯದಲ್ಲಿ ಲಾಲಾ ಕಚ್ಛಿಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದರು. ಈ ಘಟನೆಯನ್ನು ’ಹಿಂದೂಸ್ ಆರ್ಗನೈಸೇಷನ್ ಆಫ್ ಸಿಂಧ್’ನ ಸ್ಥಾಪಕ ಮತ್ತು ಸಂಚಾಲಕ ನಾರಾಯಣ್ ದಾಸ್ ಭಿಲ್ ಇವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು!