ಕೊಚ್ಚಿಯ (ಕೇರಳ) `ಕಾರ್ನಿವಲ್’ನಲ್ಲಿ ಪ್ರಧಾನಿ ಮೋದಿಯಂತೆ ಹೋಲುವ ಪುತ್ತಳಿ ನಿರ್ಮಾಣ !

ಭಾಜಪದ ಆರೋಪದ ನಂತರ ಪುತ್ತಳಿಯಲ್ಲಿ ಬದಲಾವಣೆ ಮಾಡುವ ಆಯೋಜಕರ ಆಶ್ವಾಸನೆ !

(`ಕಾರ್ನಿವಲ್’ ಎಂದರೆ ರಸ್ತೆಯ ಮೇಲೆ ಹಾಡು ಕುಣಿತದ ಉತ್ಸವ ಆಚರಿಸುವ ಪಾಶ್ಚಾತ್ಯರ ಪದ್ಧತಿ)

ಕೊಚ್ಚಿ (ಕೇರಳ) – ಇಲ್ಲಿಯ ಕಾರ್ನಿವಲ್ ನಲ್ಲಿ ತಯಾರಿಸಲಾದ ಪುತ್ತಳಿ ಪ್ರಧಾನಿ ನರೇಂದ್ರ ಮೋದಿ ಹೋಲುವಂತೆ ಇತ್ತು. ಇದರ ಮೂಲಕ ಅವರನ್ನು ಅವಮಾನಿಸಲಾಗಿದೆ ಎಂದು ಭಾಜಪದ ಮುಖಂಡ ಕೆ. ಎಸ್. ಶೈಜು ಇವರು ಹೇಳಿದರು. ಭಾಜಪದ ಕಾರ್ಯಕರ್ತರು ಕಾರ್ನಿವಲ್ ಸ್ಥಳಗಳಲ್ಲಿ ಪ್ರತಿಭಟನೆ ಕೂಡ ನಡೆಸಿದರು. ಅವರು `ಕಾರ್ನಿವಲ್ ಆಯೋಜಕರು ಕ್ಷಮೆ ಯಾಚಿಸಬೇಕೆಂದು’, ಆಗ್ರಹಿಸಿದರು. ಹಾಗೂ ಪೊಲೀಸರಿಗೆ ದೂರು ಕೂಡ ನೀಡಿದರು. ಇದರ ವಿರೋಧದ ನಂತರ ಕಾರ್ನಿವಲ್ ನ ಆಯೋಜಕರು, ಈ ಪುತ್ತಳಿಯ ರೂಪ ಬದಲಾಯಿಸಲಾಗುವುದು ಎಂದು ಆಶ್ವಾಸನೆ ನೀಡಿದರು. (ಅಂದರೆ ವಿರೋಧ ಆಗದೇ ಇದ್ದರೆ, ಪುತ್ತಳಿಯ ರೂಪ ಬದಲಾಯಿಸಲಾಗುತ್ತಿರಲಿಲ್ಲ, ಎಂಬುದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಪ್ರತಿವರ್ಷ ಇಲ್ಲಿ ಕಾರ್ನಿವಲ್ ನಲ್ಲಿ `ಪಪ್ಪನಜಿ’ ಈ ಹೆಸರಿನ ಪುತ್ತಳಿ ತಯಾರಿಸಲಾಗುತ್ತದೆ. ಅದು ಡಿಸೆಂಬರ್ ೩೧ ರ ರಾತ್ರಿ ಸುಡಲಾಗುತ್ತದೆ.

ಸಂಪಾದಕೀಯ ನಿಲುವು

ಕಮ್ಯುನಿಸ್ಟರ ರಾಜ್ಯದಲ್ಲಿ ಈ ರೀತಿಯ ಘಟನೆ ಘಟಿಸಿದರೆ ಆಶ್ಚರ್ಯವೇನು ? ಪ್ರಧಾನಿಯವರಂತೆ ಹೋಲುವಂತೆ ಪುತ್ತಳಿ ತಯಾರಿಸುವುದು, ಇದು ಮೋದಿ ದ್ವೇಷದ ಪ್ರತೀಕವಾಗಿದೆ !