ಟಿಬೇಟ ಧರ್ಮಗುರು ದಲೈ ಲಾಮಾರವರ ಜಾಡು ಹಿಡಿದಿದ್ದ ಚೀನಾದ ಮಹಿಳೆ ಗೂಢಚಾರಿಯ ಬಿಹಾರನಲ್ಲಿ ಹುಡುಕಾಟ !

ಬೌದ್ಧರ ಧರ್ಮಗುರು ದಲೈ ಲಾಮಾ (ಎಡಬದಿಗೆ) ಚೀನಿ ಮಹಿಳೆ ಗೂಢಚಾರಿ ಸಾಂಗ ಜಿಯಾಲೋನ (ಬಲಬದಿಗೆ)

ಗಯಾ (ಬಿಹಾರ) – ಟಿಬೇಟಿನ ಬೌದ್ಧರ ಧರ್ಮಗುರು ದಲೈ ಲಾಮಾ ಬಿಹಾರನ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಚೀನಿ ಮಹಿಳೆ ಗೂಢಚಾರಿ ಅವರನ್ನು ಹಿಂಬಾಲಿಸುತ್ತಿದ್ದಾಳೆ ಎನ್ನುವ ಮಾಹಿತಿಯು ತನಿಖಾ ದಳಕ್ಕೆ ಸಿಕ್ಕಿದೆ. ಈಗ ಈ ಮಹಿಳೆಯ ಹುಡುಕಾಟ ಮಾಡಲಾಗುತ್ತಿದೆ. ಆಕೆಯ ವರ್ಣನೆಯಿಂದ ಅವಳ ರೇಖಾಚಿತ್ರವನ್ನು ಬಿಡಿಸಲಾಗಿದೆ. ಈ ಮೂಲಕ ಅವಳನ್ನು ಹುಡುಕಲಾಗುತ್ತಿದೆ. ಆಕೆಯ ಹೆಸರು ಸಾಂಗ ಜಿಯಾಲೋನ ಆಗಿದೆಯೆಂದು ಹೇಳಲಾಗುತ್ತಿದೆ. ಅವಳು ಬೌದ್ಧ ಭಿಕ್ಕುವಿನ ವೇಶವನ್ನು ಧರಿಸಿದ್ದಾಳೆ. ಬೋಧಗಯಾ ಪೊಲೀಸರು 3 ತಿಂಗಳ ಹಿಂದೆ ಒಂದು ಉಪಹಾರಗೃಹದಿಂದ ಒಬ್ಬ ಸಂದೇಹಾಸ್ಪದ ಚೀನಿ ಗೂಢಚಾರನನ್ನು ವಶಕ್ಕೆ ಪಡೆದಿದ್ದಾರೆ.