`ಹಿಂದೂಗಳನ್ನು ದೇಶದಿಂದ ಹೊರಗೆ ಅಟ್ಟಿ, ಅವರನ್ನು ಕೆಲಸದಿಂದ ತೆಗೆಯಿರಿ, ಭಾರತೀಯ ಉತ್ಪಾದನೆಗಳನ್ನು ಬಹಿಷ್ಕರಿಸಿರಿ !’ (ಅಂತೆ)

`ಅಲ್ ಕಾಯ್ದಾ’ದಿಂದ ಇಸ್ಲಾಮಿ ದೇಶಗಳಿಗೆ ಕರೆ !

ನವದೆಹಲಿ – ಜಿಹಾದಿ ಭಯೋತ್ಪಾದಕ ಸಂಘಟನೆ `ಅಲ್ ಕಾಯ್ದಾ’ವು ಇಸ್ಲಾಮಿ ದೇಶಗಳಲ್ಲಿ ವಾಸಿಸುವ ಮುಸಲ್ಮಾನರಿಗೆ ಅಲ್ಲಿಯ ಹಿಂದುಗಳ ಮೇಲೆ ಹಾಗೂ ಭಾರತದ ಉತ್ಪಾದನೆಗಳ ಮೇಲೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದೆ. ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮುಸಲ್ಮಾನರಿಂದ ಸಹಾಯ ಕೇಳಲಾಗಿದೆ. `ಅಲ್ ಕಾಯ್ದಾ’ದ ನಿಯತಕಾಲಿಕೆಯಲ್ಲಿ ಒಂದು ಲೇಖನ ಪ್ರಕಾಶಿತಗೊಳಿಸಲಾಗಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾಜಪದ ಮಾಜಿ ವಕ್ತಾರರು ನೂಪುರ್ ಶರ್ಮಾ ಇವರನ್ನು ಟೀಕಿಸಲಾಗಿದೆ.

ಈ ಲೇಖನದಲ್ಲಿ,

೧. ಮುಸಲ್ಮಾನರು ಜಗತ್ತಿನಲ್ಲಿ ಸುಮ್ಮನಿರುವುದರಿಂದ ಭಾರತದಲ್ಲಿನ ಹಿಂದುತ್ವನಿಷ್ಠ ಸರಕಾರದಿಂದ ಮರ್ಯಾದೆಯನ್ನು ಉಲ್ಲಂಘಿಸುತ್ತಾ ಮಹಂಮದ್ ಪೈಗಂಬರರನ್ನು ಅವಮಾನಿಸಿದ್ದಾರೆ. ನಾವು ಈ ಹಿಂದೂ ಸರಕಾರದ ವಿರುದ್ಧ ಸಂಘಟಿತವಾಗುವುದಕ್ಕಾಗಿ ಮತ್ತು ಭಾರತದಲ್ಲಿನ ಬಂಧು ಭಗಿನಿಯರಿಗೆ ಸಹಾಯ ಮಾಡಲು ಕರೆ ನೀಡುತ್ತೇನೆ, ಅದರಿಂದ ಅಲ್ಲಾನ ಶತ್ರು ನಮ್ಮ ಪೈಗಂಬರನ ಅವಮಾನಿಸುವ ಧೈರ್ಯ ಮತ್ತೆ ಮಾಡಲು ಸಾಧ್ಯವಾಗುವುದಿಲ್ಲ.

೨. ನಾವೆಲ್ಲ ಮುಸಲ್ಮಾನರು ವಿಶೇಷವಾಗಿ ವ್ಯಾಪಾರಿಗಳಿಗೆ ಭಾರತೀಯ ಉತ್ಪಾದನೆಗಳನ್ನು ಬಹಿಷ್ಕಾರಿಸಿ, ಹಿಂದೂ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿ ಮತ್ತು ಇಸ್ಲಾಮಿ ದೇಶದಿಂದ ಅವರನ್ನು ಓಡಿಸಲು ಕರೆ ನೀಡುತ್ತೇವೆ. ಮೋದಿ ಇವರ ಬೆಂಬಲಿಗರಿಗೆ ಪೈಗಂಬರನ ದೇಶದಲ್ಲಿ ವಾಸಿಸಲು ಬಿಡುವುದು, ಇದು ಅವಮಾನವಾಗಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಅಲ್ ಕಾಯ್ದಾದ ಅಸ್ತಿತ್ವ ಈಗ ಅಳಿವಿನ ಅಂಚಿನಲ್ಲಿದೆ, ಇಂತಹ ಸಮಯದಲ್ಲಿ ಅದನ್ನು ಉಳಿಸುವುದಕ್ಕಾಗಿ ಹಿಂದೂಗಳ ಹೆಸರಿನಿಂದ ಮುಸಲ್ಮಾನರನ್ನು ಪ್ರಚೋದೀಸುವ ಪ್ರಯತ್ನ ಮಾಡುತ್ತಿದೆ; ಆದರೆ ಇಸ್ಲಾಮಿ ದೇಶ ಮತ್ತು ಮುಸಲ್ಮಾನರು ಅವರಿಗೆ ಬೆಲೆ ಕೊಡಲು ಸಿದ್ದರಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ; ಕಾರಣ ಹೇಗೆ ಮಾಡುವುದು ಅವರಿಗೆ ನಷ್ಟವೇ ಆಗುವುದು.
  • `ಭಯೋತ್ಪಾದಕರಿಗೆ ಧರ್ಮ ಇರುತ್ತದೆ ಮತ್ತು ಅದು ಹಿಂದುಗಳ ವಿರುದ್ಧ ಜಿಹಾದ್ ನಡೆಸುತ್ತಾರೆ’, ಇದೇ ಇದರಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ !