ಪಾಕಿಸ್ತಾನದಲ್ಲಿ ಹಿಂದೂ ವಿಧವೆ ಮಹಿಳೆಯ ಬರ್ಬರ ಹತ್ಯೆ!

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಧಿಯಾ ಭೇಲ್ ಎಂಬ ಹಿಂದೂ ವಿಧವೆ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಕೆಯ ಶಿರಚ್ಛೇದ ಮಾಡಿ ಮುಖದ ಚರ್ಮವನ್ನು ಸುಲಿಯಲಾಗಿದೆ. ಧಿಯಾ ಭೇಲ್‌ ಇವಳಿಗೆ ಒಬ್ಬ ಮಗ ಮತ್ತು 5 ಹೆಣ್ಣು ಮಕ್ಕಳಿದ್ದಾರೆ ಎಂದು ‘ಹಿಂದೂ ಆರ್ಗನೈಜೇಶನ್ ಆಫ್ ಸಿಂಧ್’ ಸಂಸ್ಥಾಪಕ ಮತ್ತು ಮುಖ್ಯ ಸಂಘಟಕ ನಾರಾಯಣ ಭಿಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.