ಬಡೋದರಾದ ವಿಶ್ವವಿದ್ಯಾಲಯದಲ್ಲಿ ೩ ದಿನದಲ್ಲಿ ೨ ಬಾರಿ ನಮಾಜ

ವಿಶ್ವ ಹಿಂದೂ ಪರಿಷತ್ತಿನಿಂದ ಹನುಮಾನ ಚಾಲಿಸಾ ಪಠಿಸಿ ವಿರೋಧ

ಬಡೋದರಾ (ಗುಜರಾತ) – ಇಲ್ಲಿಯ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಕಳೆದ ೩ ದಿನದಲ್ಲಿ ೨ ಬಾರಿ ನಮಾಜ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ತು ಇದನ್ನು ವಿರೋಧಿಸುತ್ತಾ ಹನುಮಾನ ಚಾಲಿಸಾವನ್ನು ಮಾಡಿದರು. ಈ ವಿಶ್ವವಿದ್ಯಾಲಯದ ವಕ್ತಾರ ತ್ರಿವೇದಿ ಇವರು, ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಸಮುಪದೇಶ ಮಾಡಲಾಗುವುದು.

ಅವರಿಗೆ ವಿಶ್ವವಿದ್ಯಾಲಯವನ್ನು ಧಾರ್ಮಿಕ ಅಖಾಡ ಮಾಡದಿರಲು ಹೇಳಲಾಗುವುದೆಂದು ಹೇಳಿದರು. (ವಿಶ್ವವಿದ್ಯಾಲಯವು ಸಮುಪದೇಶ ಹಿಂದೂ ವಿದ್ಯಾರ್ಥಿಗಳಿಗೆ ಅಲ್ಲ ಮುಸಲ್ಮಾನ ವಿದ್ಯಾರ್ಥಿಗಳಿಗೆ ನೀಡಬೇಕು. ಇಂತಹ ಸಮುಪದೇಶದಿಂದ ಅವರ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ, ಅದು ಕೂಡ ಅಷ್ಟೇ ಸತ್ಯ ! -ಸಂಪಾದಕರು)