ಬಿಹಾರದಲ್ಲಿನ, ಮೊದಲೇ ಮದುವೆಯಾಗಿದ್ದ ಮಹಮ್ಮದ ಇಝಹಾರ ಎಂಬಾತನಿಂದ ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯ ವಂಚನೆ !

ಸಮಸ್ತಿಪುರ (ಬಿಹಾರ) – ಸಮಸ್ತಿಪುರದ ಮಹಮ್ಮದ ಇಝಹಾರ ಎಂಬ ಮತಾಂಧನು ‘ರಾಕೇಶ್’ ಎಂಬ ಹೆಸರಿನಿಂದ ಬಂಗಾಳದ ಒಬ್ಬ ಹಿಂದೂ ಹುಡುಗಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿದನು. ಇಝಹಾರನು ಆಕೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದನು ಮತ್ತು ಮದುವೆ ಹಾಗೂ ಮತಾಂತರಕ್ಕೆ ಒತ್ತಡ ಹೇರುತ್ತಿದ್ದನು. ಡಿಸೆಂಬರ್ 26, 2022 ರಂದು, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ದಲಸಿಂಗ ಸರಾಯ ರೈಲು ನಿಲ್ದಾಣದಲ್ಲಿ ಸಂತ್ರಸ್ತೆಯನ್ನುಇಝಹಾರನ ಹಿಡಿತದಿಂದ ಬಿಡಿಸಿದರು.

1. ಸಮಸ್ತಿಪುರದ ತಾಜಪುರದ ನಿವಾಸಿ ಮಹಮ್ಮದ ಇಝಹಾರ ಎಂಬವನು, ’ರಾಕೇಶ’ ಎಂಬ ಹಿಂದೂ ಹೆಸರು ಹೇಳಿಕೊಂಡು ಸಂತ್ರಸ್ತ ಹುಡುಗಿಯನ್ನು ಪರಿಚಯ ಮಾಡಿಕೊಂಡನು. 2022 ರ ಮೇ ತಿಂಗಳಲ್ಲಿ ಅವಳನ್ನು ಕೋಲ್ಕತ್ತಾದಿಂದ ಸಮಸ್ತಿಪುರಕ್ಕೆ ಕರೆದುಕೊಂಡು ಬಂದನು. ‘ರಾಕೇಶ’ನು ಮುಸಲ್ಮಾನನಾಗಿದ್ದು ಅವನಿಗೆ ಈಗಾಗಲೇ ಮದುವೆಯಾಗಿದ್ದು, ಅವನು 2 ಮಕ್ಕಳ ತಂದೆಯಾಗಿದ್ದಾನೆ’ ಎಂಬುದು ಅವಳಿಗೆ ತಿಳಿಯಿತು. ಸಂತ್ರಸ್ತೆಯು ಮನೆಗೆ ಮರಳಲು ಒತ್ತಾಯಿಸಿದಾಗ, ಇಝಹಾರನು ಆಕೆಯ ಮೇಲೆ ಹಲ್ಲೆ ನಡೆಸಿದನು/ಆಕೆಯನ್ನು ಹಿಗ್ಗಾಮುಗ್ಗಾ ಹೊಡೆದನು.

2. ಸಂತ್ರಸ್ತೆಯು ತನ್ನ ತಾಯಿಗೆ ಕರೆ ಮಾಡಿ ಇಝಹಾರನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾನೆ ಎಂದು ತಿಳಿಸಿದಳು. ಬಳಿಕ ಸಂತ್ರಸ್ತೆಯ ತಾಯಿಯು ಕೋಲ್ಕತ್ತಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದಳು.

3. ಕೋಲ್ಕತ್ತಾ ಪೊಲೀಸರ ಮಾಹಿತಿ ಮೇರೆಗೆ ಬಿಹಾರದ ತಾಜಪುರ ಪೊಲೀಸರು ಸಂತ್ರಸ್ತೆಯನ್ನು ಬಿಡಿಸಿ ಪೊಲೀಸ ಠಾಣೆಯಲ್ಲಿ ಇರಿಸಿದರು. ಪೊಲೀಸರಿಂದ ಮಾಹಿತಿ ಪಡೆದ ಕೂಡಲೇ ಸಂತ್ರಸ್ತೆಯ ತಾಯಿ ಸಮಸ್ತಿಪುರಕ್ಕೆ ತಲುಪಿದಳು. ಅಲ್ಲಿ ಪೊಲೀಸರು ಹುಡುಗಿಯನ್ನು ಆಕೆಯ ತಾಯಿಗೆ ಒಪ್ಪಿಸಿದರು.

4. ಸಂತ್ರಸ್ತೆ ತನ್ನ ತಾಯಿಯೊಂದಿಗೆ ಕೋಲ್ಕತ್ತಾಗೆ ಹಿಂದಿರುಗುತ್ತಿದ್ದಾಗ, ಇಝಹಾರ ಮತ್ತು ಅವನ ಗೂಂಡಾ ಸಹಚರರು ಮತ್ತೆ ಅವಳನ್ನು ದಲಸಿಂಹ ಸರಾಯ ರೈಲು ನಿಲ್ದಾಣದಲ್ಲಿ ಮೂಲೆಗುಂಪು ಮಾಡಿದರು. ಆಗ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಿಗೆ ಈ ವಿಷಯ ತಿಳಿಯಿತು. ಅವರು ರೈಲು ನಿಲ್ದಾಣವನ್ನು ತಲುಪಿ ಸಂತ್ರಸ್ತ ಹುಡುಗಿ ಮತ್ತು ಆಕೆಯ ತಾಯಿಯನ್ನು ಗೂಂಡಾಗಳ ಹಿಡಿತದಿಂದ ಬಿಡಿಸಿದರು.