ಪಾಕಿಸ್ತಾನದಲ್ಲಿ ಭಯೋತ್ಪಾದಕ ಆಕ್ರಮಣಗಳಾಗುವ ಸಾಧ್ಯತೆ ಇರುವುದರಿಂದ ಅಮೇರಿಕಾದಿಂದ ಅಲ್ಲಿನ ನಾಗರೀಕರಿಗೆ ಸೂಚನೆ

ಇಸ್ಲಾಮಾಬಾದಿನ ಮೆರಿಯಟ ಹೋಟೆಲ್

ಇಸ್ಲಾಮಾಬಾದ (ಪಾಕಿಸ್ತಾನ) – ಇಲ್ಲಿ ೨ ದಿನಗಳ ಹಿಂದೆ ನಡೆದ ಒಂದು ಆತ್ಮಹತ್ಯಾ ಜಿಹಾದಿ ಆಕ್ರಮಣದ ನಂತರ ಅಮೇರಿಕಾದ ರಾಯಭಾರಿ ಕಛೇರಿಯು ಅಮೇರಿಕಾದ ನಾಗರೀಕರಿಗೆ ಸೂಚನೆಯನ್ನು ಜ್ಯಾರಿಗೊಳಿಸಿದೆ. ಅಮೇರಿಕಾವು ‘ಕೆಲವರು ಜಿಹಾದಿ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಸಾಧ್ಯತೆಯಿದೆ.

ಈ ಆಕ್ರಮಣವು ಇಸ್ಲಾಮಾಬಾದಿನ ಮೆರಿಯಟ ಹೋಟೆಲಿನಲ್ಲಿ ಆಗಬಹುದು. ಆದುದರಿಂದ ಅಮೇರಿಕಾದ ನಾಗರೀಕರು ರಜಾದಿನಗಳಲ್ಲಿ ಯಾವುದೇ ಹೊಟೇಲುಗಳಿಗೆ ಹೋಗಬಾರದು. ಹಾಗೆಯೇ ಹೊಟೇಲ ಮೆರಿಯಟನ್ನು ಆದಷ್ಟು ಬೇಗ ಖಾಲಿ ಮಾಡಬೇಕು’ ಎಂದು ಹೇಳಿದೆ. ೨೦೦೮ರಲ್ಲಿ ಈ ಹೊಟೇಲಿನಲ್ಲಿ ಆಕ್ರಮಣ ಮಾಡಲಾಗಿತ್ತು. ಇದರಲ್ಲಿ ೬೩ ಜನರು ಮೃತರಾಗಿದ್ದರು.